ಇದು ಕೋಟಿ ಕೋಟಿ ಬೆಲೆ ಬಾಳುವ ವಿಶ್ವದ ಅತ್ಯಂತ ದುಬಾರಿ ನೇಲ್ ಪಾಲಿಶ್​; ಏನಿದರ ವಿಶೇಷತೆ

ವಿಶ್ವದ ಅತ್ಯಂತ ದುಬಾರಿ ಬೆಲೆಯ ನೇಲ್ ಪಾಲಿಶ್ ಹೆಸರು ಅಜೇಚರ್(Ajechar). ಇದರ ಬೆಲೆ ಬರೋಬ್ಬರಿ 2,50000 ಡಾಲರ್ ಗಳು. ಅಂದರೆ ಭಾರತದಲ್ಲಿ ಸುಮಾರು 1 ಕೋಟಿ 90 ಲಕ್ಷ ರೂ. ಅಷ್ಟಕ್ಕೂ ಅದರಲ್ಲಿ ಕೋಟಿ ಕೊಟ್ಟು ಖರೀದಿಸುವಂತಹ ವಿಶೇಷತೆ ಏನಿದೇ ಅಂತಾ ಅನಿಸಬಹುದು.

ಇದು ಕೋಟಿ ಕೋಟಿ ಬೆಲೆ ಬಾಳುವ ವಿಶ್ವದ ಅತ್ಯಂತ ದುಬಾರಿ ನೇಲ್ ಪಾಲಿಶ್​; ಏನಿದರ ವಿಶೇಷತೆ
Ajechar: World's most expensive nail polish
Follow us
|

Updated on: Oct 19, 2024 | 6:11 PM

ಉಗುರುಗಳ ಅಂದವನ್ನು ಹೆಚ್ಚಿಸುವ ನೇಲ್ ಪಾಲಿಶ್ ಎಂದರೆ ಪ್ರತೀ ಹೆಣ್ಣಿಗೂ ಅಚ್ಚು ಮೆಚ್ಚು. ಸಾಮಾನ್ಯವಾಗಿ ನೇಲ್​​ ಪಾಲಿಶ್​ ಗಳಿಗೆ 100ರೂ. ಒಳಗಡೆ ಇರುತ್ತದೆ. ಅದರಲ್ಲೂ ಸ್ವಲ್ಪ ದುಬಾರಿ ಬೆಲೆ ಅಂದರೆ ಹೆಚ್ಚೆಂದರೆ 500 ರೂ. ಆದರೆ ಎಂದಾದರೂ ಕೋಟಿ ಬೆಲೆ ಬಾಳುವ ನೇಲ್​ ಪಾಲಿಶ್​ ಬಗ್ಗೆ ಕೇಳಿದ್ದೀರಾ? ಇದೀಗ ವಿಶ್ವದ ಅತ್ಯಂತ ದುಬಾರಿ ಬೆಲೆಯ ನೇಲ್​ ಪಾಲಿಶ್​ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.

ವಿಶ್ವದ ಅತ್ಯಂತ ದುಬಾರಿ ಬೆಲೆಯ ನೇಲ್ ಪಾಲಿಶ್ ಹೆಸರು ‘ಅಜೇಚರ್'(Ajechar). ಈ ದುಬಾರಿ ಬೆಲೆಯ ನೇಲ್ ಪಾಲಿಶ್ ಅನ್ನು ಲಾಸ್ ಎಂಜೆಲಿಸ್(Laas Enjalis) ನ ಡಿಸೈನರ್ ಎಜೆಟ್ಯೂರ್ ಪೊಗೊಸಿಯನ್(Ejeture Pogosiyan) ಅವರು ತಯಾರಿಸಿದ್ದಾರೆ. ಅವರು ಪ್ರಪಂಚದಾದ್ಯಂತ ತಮ್ಮ ಐಷಾರಾಮಿ ವಸ್ತುಗಳಿಗೆ ಸಾಕಷ್ಟು ಜನಪ್ರಿಯರಾಗಿದ್ದಾರೆ.

ಅಷ್ಟಕ್ಕೂ ಅದರಲ್ಲಿ ಕೋಟಿ ಕೊಟ್ಟು ಖರೀದಿಸುವಂತಹ ವಿಶೇಷತೆ ಏನಿದೇ ಅಂತಾ ಅನಿಸಬಹುದು. ದೂರದಿಂದ ನೋಡಿದಾಗ ಈ ನೇಲ್ ಪಾಲಿಶ್ ಸಾಮಾನ್ಯವಾಗಿ ಕಾಣಿಸಬಹುದರೂ ಕೂಡ ಇದರ ತಯಾರಿಕೆಯಲ್ಲಿ ಸುಮಾರು 1,63,66,000 ರೂ. ಬೆಲೆಯ 267-ಕ್ಯಾರೆಟ್ ಕಪ್ಪು ಡೈಮಂಡ್ ಬಳಸಲಾಗುತ್ತದೆ. ಈ ಒಂದು ನೇಲ್​​ ಪಾಲಿಶ್​​ ಖರೀದಿಸುವ ಹಣದಲ್ಲಿ ನೀವು 3 Mercedes-Benz ಕಾರು ಖರೀದಿಸಬಹುದು.

ಇದನ್ನೂ ಓದಿ: ವಿಶ್ವದ ಈ ಎರಡು ದೇಶಗಳಲ್ಲಿ ಒಂದೇ ಒಂದು ದೇವಾಲಯ, ಮಸೀದಿ ಇಲ್ಲ

ಅಜೇಚರ್ ನೈಲ್ ಪಾಲಿಶ್ ಬೆಲೆ ಬರೋಬ್ಬರಿ 2,50000 ಡಾಲರ್ ಗಳು. ಅಂದರೆ ಭಾರತದಲ್ಲಿ ಸುಮಾರು 1 ಕೋಟಿ 90 ಲಕ್ಷ ರೂ. ಇನ್ನುಈ ನೈಲ್​ ಪಾಲಿಶ್​ ಜಗತ್ತಿನಲ್ಲಿ ‘ಬ್ಲಾಕ್​ ಡೈಮಂಡ್​ ಕಿಂಗ್​‘ ಎಂದೂ ಖ್ಯಾತಿಯನ್ನೂ ಪಡೆದಿದೆ. ವರದಿಗಳ ಪ್ರಕಾರ, ಇಲ್ಲಿಯವರೆಗೆ 25 ಜನರು ಬ್ಲ್ಯಾಕ್ ಡೈಮಂಡ್ ನೇಲ್ ಪಾಲಿಷ್ ಅನ್ನು ಖರೀದಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ
ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ
ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!
ಮಳೆಯಾಗುವಾಗ ಹೆಬ್ಬಾಳ ರಸ್ತೆ ಅತಿಹೆಚ್ಚು ಪ್ರಭಾವಕ್ಕೊಳಾಗಾಗಲು ಹಲವು ಕಾರಣಗಳು
ಮಳೆಯಾಗುವಾಗ ಹೆಬ್ಬಾಳ ರಸ್ತೆ ಅತಿಹೆಚ್ಚು ಪ್ರಭಾವಕ್ಕೊಳಾಗಾಗಲು ಹಲವು ಕಾರಣಗಳು
ಮತ್ತೊಂದು ಭೂಹಗರಣದಲ್ಲಿ ಪಾರ್ವತಿ ಸಿದ್ದರಾಮಯ್ಯ, ವಿವರ ನೀಡಿದ ಗಂಗರಾಜು
ಮತ್ತೊಂದು ಭೂಹಗರಣದಲ್ಲಿ ಪಾರ್ವತಿ ಸಿದ್ದರಾಮಯ್ಯ, ವಿವರ ನೀಡಿದ ಗಂಗರಾಜು
ತಪ್ಪು ನಡೆಯಿತೇ? ಕಟಕಟೆಯಲ್ಲಿ ಬಿಗ್​ಬಾಸ್: ವಿಚಾರಣೆ ನಡೆಸಲಿರುವ ಸುದೀಪ್
ತಪ್ಪು ನಡೆಯಿತೇ? ಕಟಕಟೆಯಲ್ಲಿ ಬಿಗ್​ಬಾಸ್: ವಿಚಾರಣೆ ನಡೆಸಲಿರುವ ಸುದೀಪ್
ಕಾರ್ಯಕರ್ತನಾಗಿ ಪಕ್ಷ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿರುವೆ: ನಿಖಿಲ್
ಕಾರ್ಯಕರ್ತನಾಗಿ ಪಕ್ಷ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿರುವೆ: ನಿಖಿಲ್
ಅರಚುತ್ತಾ, ಕಿರುಚುತ್ತಾ, ರಿಷಭ್ ಪಂತ್ ರನೌಟ್ ತಪ್ಪಿಸಿದ ಸರ್ಫರಾಝ್ ಖಾನ್
ಅರಚುತ್ತಾ, ಕಿರುಚುತ್ತಾ, ರಿಷಭ್ ಪಂತ್ ರನೌಟ್ ತಪ್ಪಿಸಿದ ಸರ್ಫರಾಝ್ ಖಾನ್
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್