Viral Video : 60ಕ್ಕೂ ಹೆಚ್ಚು ಆನೆಗಳ ಜೀವ ಉಳಿಸಿದ ಲೋಕೋ ಪೈಲಟ್, ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು

ಲೋಕೋ ಪೈಲಟ್‌ ಗಳಿಬ್ಬರೂ ತಮ್ಮ ಬುದ್ಧಿವಂತಿಕೆ ಹಾಗೂ ಜಾಣ್ಮೆಯಿಂದ ರೈಲು ಹಳಿ ದಾಟುತ್ತಿದ್ದ ಅರವತ್ತು ಹೆಚ್ಚು ಆನೆಗಳ ಹಿಂಡನ್ನು ರಕ್ಷಿಸಿದ್ದಾರೆ. ಕೋಲ್ಕತ್ತಾದಿಂದ ಅಸ್ಸಾಂಗೆ ಹೋಗುತ್ತಿದ್ದ ಕಾಮ್ರೂಪ್ ಎಕ್ಸ್‌ಪ್ರೆಸ್‌ನ ಇಬ್ಬರೂ ಲೋಕೋ ಪೈಲಟ್‌ಗಳು ಆನೆಗಳನ್ನು ರಕ್ಷಣೆ ಮಾಡಿದ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಅವರ ಈ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 19, 2024 | 3:28 PM

ಆನೆಗಳು ನಿಜಕ್ಕೂ ಮುಗ್ಧ ಜೀವಿಗಳು. ನೋಡಲು ದೈತ್ಯಾಕಾರದಲ್ಲಿದ್ದರೂ ತನ್ನ ಸೌಮ್ಯ ಸ್ವಭಾವದಿಂದಲೇ ಎಲ್ಲರಿಗೂ ಕೂಡ ಇಷ್ಟವಾಗುತ್ತದೆ. ತನ್ನ ಸಂಗಡಿಗರ ಜೊತೆಯಲ್ಲಿ ತುಂಟಾಟ ಆಡುವ, ಗುಂಪು ಗುಂಪಾಗಿ ಸಾಗುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ರೈಲು ಹಳಿ ದಾಟುತ್ತಿದ್ದ 60 ಕ್ಕೂ ಹೆಚ್ಚು ಆನೆಗಳನ್ನು ಲೋಕೋ ಪೈಲಟ್‌ ಗಳು ರಕ್ಷಿಸಿದ್ದಾರೆ.

ಅಕ್ಟೋಬರ್ 16 ರಂದು ಈ ಘಟನೆ ಸಂಭವಿಸಿದ್ದು, ರೈಲು ಸಂಖ್ಯೆ 15959 ಕಾಮ್ರೂಪ್ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕುವ ಮೂಲಕ 60 ಕ್ಕೂ ಹೆಚ್ಚು ಕಾಡು ಆನೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲೋಕೋ ಪೈಲಟ್ ಜೆ.ಡಿ.ದಾಸ್ ಮತ್ತು ಸಹಾಯಕ ಉಮೇಶ್ ಕುಮಾರ್ ಅವರು ಹಬೀಪುರ್ ಮತ್ತು ಲಮ್ಸಾಖಾಂಗ್ ನಡುವಿನ ರೈಲ್ವೆ ಹಳಿಯನ್ನು ಆನೆಗಳ ಹಿಂಡು ದಾಟುತ್ತಿರುವುದನ್ನು ನೋಡಿದ್ದಾರೆ. ಈ ತಕ್ಷಣವೇ ತುರ್ತು ಬ್ರೇಕ್ ಹಾಕುವ ಮೂಲಕ ಆನೆಗಳ ಜೀವವನ್ನು ಉಳಿಸಿದ್ದಾರೆ.

ಇದನ್ನೂ ಓದಿ: ಅಮ್ಮಾ ನನ್ಗೆ ಡ್ರೈವರ್‌ ಸೀಟ್‌ ಬೇಕೇ ಬೇಕು ಎಂದು ಅತ್ತ ಬಾಲಕನನ್ನು ತನ್ನ ಬಳಿಯೇ ಕೂರಿಸಿಕೊಂಡ ಬಸ್‌ ಚಾಲಕ

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆನೆಗಳ ಹಿಂಡು ರೈಲು ಹಳಿಯನ್ನು ದಾಟುವುದನ್ನು ನೋಡಬಹುದು. ತುರ್ತಾಗಿ ರೈಲನ್ನು ನಿಲ್ಲಿಸಲಾಗಿದೆ. ಹಳಿ ದಾಟುತ್ತಿರುವ ಆನೆಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗುತ್ತಿದೆ. ರೈಲು ಚಾಲಕರ ಈ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ನೆಟ್ಟಿಗರೊಬ್ಬರು, ‘ನಿಜಕ್ಕೂ ಗ್ರೇಟ್ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಇದು ನಿಜಕ್ಕೂ ಅದ್ಭುತವಾದ ವಿಡಿಯೋ, ಇದನ್ನು ಹಂಚಿಕೊಂಡ ನಿಮಗೆ ಧನ್ಯವಾದಗಳು’ ಎಂದು ಕಾಮೆಂಟ್ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಪ್ಪು ನಡೆಯಿತೇ? ಕಟಕಟೆಯಲ್ಲಿ ಬಿಗ್​ಬಾಸ್: ವಿಚಾರಣೆ ನಡೆಸಲಿರುವ ಸುದೀಪ್
ತಪ್ಪು ನಡೆಯಿತೇ? ಕಟಕಟೆಯಲ್ಲಿ ಬಿಗ್​ಬಾಸ್: ವಿಚಾರಣೆ ನಡೆಸಲಿರುವ ಸುದೀಪ್
ಕಾರ್ಯಕರ್ತನಾಗಿ ಪಕ್ಷ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿರುವೆ: ನಿಖಿಲ್
ಕಾರ್ಯಕರ್ತನಾಗಿ ಪಕ್ಷ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿರುವೆ: ನಿಖಿಲ್
ಅರಚುತ್ತಾ, ಕಿರುಚುತ್ತಾ, ರಿಷಭ್ ಪಂತ್ ರನೌಟ್ ತಪ್ಪಿಸಿದ ಸರ್ಫರಾಝ್ ಖಾನ್
ಅರಚುತ್ತಾ, ಕಿರುಚುತ್ತಾ, ರಿಷಭ್ ಪಂತ್ ರನೌಟ್ ತಪ್ಪಿಸಿದ ಸರ್ಫರಾಝ್ ಖಾನ್
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ
ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವ ವ್ಯಾಪಾರಸ್ಥರು!
ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವ ವ್ಯಾಪಾರಸ್ಥರು!
ಆನೆಗಳ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್, ವಿಡಿಯೋ ನೋಡಿ
ಆನೆಗಳ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್, ವಿಡಿಯೋ ನೋಡಿ
ಇಡಿ ದಾಳಿ: ಮೈಸೂರು ಮುಡಾ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್
ಇಡಿ ದಾಳಿ: ಮೈಸೂರು ಮುಡಾ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್
ವಿರಾಟ್ ಕೊಹ್ಲಿ ಔಟಾದಾಗ ರೋಹಿತ್ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ
ವಿರಾಟ್ ಕೊಹ್ಲಿ ಔಟಾದಾಗ ರೋಹಿತ್ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ
ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ
ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ