Viral Video: ಅಂಬೆಗಾಲು ಇಡುತ್ತಿರುವ ಕಂದಮ್ಮನಿಗೆ ಆಸರೆಯಾದ ಶ್ವಾನ, ವಿಡಿಯೋ ವೈರಲ್

ನಿಯತ್ತು, ನಿಷ್ಠೆ, ನಿಸ್ವಾರ್ಥ ಪ್ರೀತಿಗೆ ಇನ್ನೊಂದು ಹೆಸರೇ ಈ ಶ್ವಾನ. ಒಂದು ಹೊತ್ತು ಹಾಕಿದರೆ ಸಾಕು ಬದುಕಿರುವರೆಗೂ ಆ ಋಣವನ್ನು ತೀರಿಸುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಶ್ವಾನವು ತನ್ನ ಪ್ರೀತಿಯನ್ನು ಹೊರಹಾಕುವ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅಂಬೆಗಾಲಿಡುತ್ತಿರುವ ಮಗುವನ್ನು ಬೀಳದಂತೆ ನೋಡಿಕೊಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on:Oct 19, 2024 | 6:36 PM

ಶ್ವಾನಗಳ ನಿಶ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಯಾವುದಿದೆ. ಅದರಲ್ಲಿಯು ಈ ಶ್ವಾನಗಳು ಪುಟಾಣಿ ಮಕ್ಕಳೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿರುತ್ತದೆ. ಮುದ್ದು ಮುದ್ದಾದ ಕಂದಮ್ಮದೊಂದಿಗೆ ಆಡುವ ಹಾಗೂ ಅವುಗಳ ರಕ್ಷಣೆ ಮಾಡುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ತಮ್ಮ ಮನೆ ಮಕ್ಕಳು ಯಾವುದಾದ್ರೂ ಅಪಾಯಕ್ಕೆ ಸಿಲುಕಿಕೊಂಡ್ರೆಲುಕಿಕೊಂಡ್ರೆ ರಕ್ಷಿಸುವುದರಲ್ಲಿ ಈ ಶ್ವಾನಗಳು ಎತ್ತಿದ ಕೈ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸಮುದ್ರ ತೀರದಲ್ಲಿ ಅಂಬೆಗಾಲು ಇಡುತ್ತಿರುವ ಕಂದಮ್ಮಗೆ ಆಸರೆಯಾಗಿ ಮನೆಯ ಶ್ವಾನ ನಿಂತಿದ್ದು, ಈ ದೃಶ್ಯವು ನೆಟ್ಟಿಗರ ಹೃದಯವನ್ನು ಗೆದ್ದುಕೊಂಡಿದೆ.

Miks reaction ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ, ಹಸುಗೂಸು ಮರಳಿನಲ್ಲಿ ಅಂಬೇಗಾಲು ಇಡುತ್ತಿರುವಾಗ ಬೀಳದಂತೆ ಶ್ವಾನವು ಆಸರೆಯಾಗಿ ನಿಲ್ಲುತ್ತಿದೆ. ಒಂದೊಂದು ಹೆಜ್ಜೆಯಿಟ್ಟು ಮುಂದೆ ಹೋಗುವ ಮಗುವಿನ ಸಹಾಯಕ್ಕೆ ನಾಯಿ ಬರುತ್ತಿದೆ. ಇತ್ತ ಶ್ವಾನವು ಸಹಾಯಕ್ಕೆ ಬರುತ್ತಿದ್ದಂತೆಯೇ ಮಗು ನಾಯಿಯ ಮೇಲೆ ಕೈಯಿಟ್ಟು ಸಮತೋಲನ ಪಡೆದು ಮುಂದೆ ನಡೆದಿದೆ.

ಇದನ್ನೂ ಓದಿ: ಇದು ಕೋಟಿ ಕೋಟಿ ಬೆಲೆ ಬಾಳುವ ವಿಶ್ವದ ಅತ್ಯಂತ ದುಬಾರಿ ನೇಲ್ ಪಾಲಿಶ್​; ಏನಿದರ ವಿಶೇಷತೆ

ಹೀಗೆ ಮುಂದೆ ಮುಂದೆ ಹೋಗುತ್ತಿರುವ ಮಗುವು ಒಂದೊಮ್ಮೆ ಬೀಳಲು ಮುಂದಾದಾಗ ಶ್ವಾನವು ಓಡಿ ಹೋಗಿ ಮಗುವು ಬೀಳದಂತೆ ನೋಡಿಕೊಂಡಿದೆ. ಕಂದಮ್ಮವು ಬಹುದೂರ ನಡೆಯುವವರೆಗೂ ಪಕ್ಕದಲ್ಲಿಯೇ ಇದ್ದು ಆಸರೆಯಾಗಿರುವ ಈ ದೃಶ್ಯವು ನೆಟ್ಟಿಗರ ಕಣ್ಮನ ಸೆಳೆದಿದೆ. ಈ ವಿಡಿಯೋವು ಈಗಾಗಲೇ 2.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಮೆಚ್ಚುಗೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆಟ್ಟಿಗರೊಬ್ಬರು, ‘ಈ ನಾಯಿಯಿಂದ ನಾನು ಬಹಳಷ್ಟು ಕಲಿಯಬೇಕಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಅಮ್ಮನಾದ ನಾಯಿ’ ಎಂದು ಬರೆದುಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Sat, 19 October 24

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್