World Teachers Day 2024: ನಿಮ್ಮ ಗುರುವೃಂದಕ್ಕೆ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 05, 2024 | 10:13 AM

ಒಬ್ಬ ವ್ಯಕ್ತಿಯ ಜೀವನವನ್ನು ಶಿಕ್ಷಕರಿಂದಲೇ ಗುರುತಿಸಲು ಸಾಧ್ಯವಿಲ್ಲ. ಮಕ್ಕಳ ಬದುಕಿಗೆ ಸರಿ ದಾರಿ ತೋರುವ ಹಾಗೂ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಕೊಡುಗೆಯು ಅಪಾರವಾದದ್ದು. ಹೀಗಾಗಿ ಪ್ರಪಂಚದಾದ್ಯಂತ ಶಿಕ್ಷಕರ ಪ್ರಾಮುಖ್ಯತೆ, ಶಿಕ್ಷಣಕ್ಕೆ ಅವರ ವಿಶೇಷ ಕೊಡುಗೆಗಳನ್ನು ಶ್ಲಾಘಿಸುವುದು ಹಾಗೂ ಶಿಕ್ಷಕರ ಪರಿಸ್ಥಿತಿಗಳನ್ನು ಸುಧಾರಿಸುವ ಉದ್ದೇಶದಿಂದ ವಿಶ್ವ ಶಿಕ್ಷಕರ ದಿನವೂ ಮೀಸಲಿಡಲಾಗಿದೆ. ಪ್ರತಿವರ್ಷ ಅಕ್ಟೋಬರ್ 5 ರಂದು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುವ ಶಿಕ್ಷಕರ ದಿನವು ಹುಟ್ಟಿಕೊಂಡದ್ದು ಹೇಗೆ? ಹಾಗೂ ಇದರ ಮಹತ್ವವೇನು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ

World Teachers Day 2024: ನಿಮ್ಮ ಗುರುವೃಂದಕ್ಕೆ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು
Follow us on

ಶಿಕ್ಷಕರೆಂದರೆ ಓದು ಬರಹವನ್ನು ಕಲಿಸಿ, ಜ್ಞಾನವನ್ನು ನೀಡುವ ವ್ಯಕ್ತಿಗಳಲ್ಲ, ಮಾರ್ಗದರ್ಶನ ಮಾಡುವಂತವರು. ಹೀಗಾಗಿ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಕರು ನಡೆಸಿದ ದಾರಿಯಲ್ಲಿ ನಡೆಯುತ್ತಾರೆ. ಶಿಕ್ಷಣವನ್ನು ನೀಡುವುದರ ಜೊತೆಗೆ ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನವಿದಾಗಿದೆ. ವಿಶ್ವ ಶಿಕ್ಷಕರ ದಿನವನ್ನು ಭಾರತ, ಯುನೈಟೆಡ್ ಸ್ಟೇಟ್, ಕೆನಡಾ, ಅಸ್ಟ್ರೇಲಿಯಾ ಮತ್ತು ಫಿಲಿಫೈನ್ಸ್ ಸೇರಿದಂತೆ 100 ಕ್ಕೂ ಹೆಚ್ಚು ರಾಷ್ಟ್ರಗಳು ಅಕ್ಟೋಬರ್ 5 ರಂದು ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಶಿಕ್ಷಕರ ದಿನದ ಆಚರಣೆಯ ಇತಿಹಾಸ

1966 ರಲ್ಲಿ ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಮತ್ತು ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಪ್ಯಾರಿಸ್ ನಲ್ಲಿ ಶಿಕ್ಷಕರ ಸ್ಥಾನಮಾನದ ಕುರಿತು ಒಂದು ಅಂತರ್ ಸರ್ಕಾರಿ ಸಮ್ಮೇಳನವನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಶಿಕ್ಷಕರ ಹಕ್ಕುಗಳು, ಜವಬ್ದಾರಿಗಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಮತ್ತು ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಸಂಸ್ಥೆಯು ಶಿಫಾರಸನ್ನು ಪ್ರಸ್ತಾವನೆ ಮಾಡಲಾಯಿತು. 1966 ರಲ್ಲಿ ನಡೆದ ಈ ಸಮ್ಮೇಳನದ 30 ನೇ ವಾರ್ಷಿಕೋತ್ಸವದ ನೆನಪಿಗಾಗಿ 1994 ರಲ್ಲಿ ಮೊದಲ ಬಾರಿಗೆ ವಿಶ್ವ ಶಿಕ್ಷಕರ ದಿನವನ್ನು ಆಚರಣೆ ಮಾಡಲಾಯಿತು. ಸಮಾಜಕ್ಕೆ ಶಿಕ್ಷಕರ ಗಮನಾರ್ಹ ಕೊಡುಗೆಗಳನ್ನು ಗುರುತಿಸುವ ಮತ್ತು ಗೌರವಿಸುವುದು ಈ ದಿನದ ಉದ್ದೇಶವಾಗಿದೆ. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 5 ರಂದು ವಿಶ್ವ ಶಿಕ್ಷಕರ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.

ವಿಶ್ವ ಶಿಕ್ಷಕರ ದಿನದ ಮಹತ್ವ, ಥೀಮ್ ಹಾಗೂ ಆಚರಣೆ

“ಶಿಕ್ಷಕರ ಧ್ವನಿಗಳನ್ನು ಮೌಲ್ವಿಕರಿಸುವುದು: ಶಿಕ್ಷಣಕ್ಕಾಗಿ ಹೊಸ ಸಾಮಾಜಿಕ ಒಪ್ಪಂದದ ಕಡೆಗೆ” ಎನ್ನುವ ಥೀಮ್ ನಲ್ಲಿ ಈ ಬಾರಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತಿದೆ. ಮಕ್ಕಳ ಭವಿಷ್ಯವನ್ನು ರೂಪಿಸುವ ಹಾಗೂ ಸ್ಪೂರ್ತಿ ನೀಡುವ ವಿದ್ಯಾರ್ಥಿಗಳ ಶಿಕ್ಷಕರಿಗೆ ಹೃದಯಪೂರ್ವಕ ಗೌರವವನ್ನು ಸಲ್ಲಿಸುವುದು. ಅದಲ್ಲದೇ, ಶಿಕ್ಷಕರ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು, ಶಿಕ್ಷಕರ ಹಕ್ಕುಗಳು ಮತ್ತು ಜವಬ್ದಾರಿಗಳನ್ನು ಗುರುತಿಸುವಸುವ ಸಲುವಾಗಿ ದಿನವು ಮಹತ್ವವಾಗಿದೆ. ಈ ಹಿನ್ನಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಗುರುತಿಸಿ ಗೌರವಿಸುವುದು. ಹಾಗೂ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮ್ಮೇಳನಗಳು, ಸಭೆಗಳು ಹಾಗೂ ಸೆಮಿನಾರ್ ಗಳನ್ನು ಏರ್ಪಡಿಸಲಾಗುತ್ತದೆ. ಅದಲ್ಲದೇ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರಿಗಾಗಿಯೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಇದನ್ನೂ ಓದಿ: ನವರಾತ್ರಿ ಮೂರನೇ ದಿನ ರವಾ ಕೇಸರಿ ತಯಾರಿಸಿ ದೇವಿಗೆ ನೈವೇದ್ಯ ಅರ್ಪಿಸಿ, ಇಲ್ಲಿದೆ ರೆಸಿಪಿ

ವಿಶ್ವ ಶಿಕ್ಷಕರ ದಿನಕ್ಕೆ ಗುರುವೃಂದಕ್ಕೆ ಕೋರಲು ಶುಭಾಶಯಗಳು

  • ನಾನು ಇವತ್ತು ಏನಾಗಿದ್ದೆನೋ ಅದಕ್ಕೆ ಕಾರಣವೇ ನೀವುಗಳು. ಸರಿಯಾದ ದಾರಿಯಲ್ಲಿ ನಡೆಸಲು ಮಾರ್ಗದರ್ಶನ ನೀಡಿ, ಸರಿ ತಪ್ಪುಗಳನ್ನಿ ತಿದ್ದಿದ ನನ್ನ ಆತ್ಮೀಯ ಶಿಕ್ಷಕರಿಗೆ ವಿಶ್ವ ಶಿಕ್ಷಕರ ದಿನದ ಶುಭಾಶಯಗಳು.
  • ಅತ್ಯುತ್ತಮ ಶಿಕ್ಷಕರು ಪುಸ್ತಕದಿಂದ ಅಲ್ಲ, ಹೃದಯದಿಂದ ಕಲಿಸುತ್ತಾರೆ. ಅಂತಹ ಅದ್ಭುತ ಶಿಕ್ಷಕರಾಗಿದ್ದಕ್ಕಾಗಿ ಧನ್ಯವಾದಗಳು. ನನ್ನ ಆತ್ಮೀಯ ಗುರುವೃಂದಕ್ಕೆ ಶಿಕ್ಷಕರ ದಿನದ ಶುಭಾಶಯಗಳು.
    * ನಮ್ಮಂತಹ ಸಾಮಾನ್ಯ ವಿದ್ಯಾರ್ಥಿಗಳು ಅಸಾಮಾನ್ಯ ಕೆಲಸಗಳನ್ನು ಮಾಡುವ ಕನಸು ಕಾಣಲು ನಿಮ್ಮಂತಹ ಶಿಕ್ಷಕರೇ ಕಾರಣ. ಶಿಕ್ಷಕರ ದಿನದ ಶುಭಾಶಯಗಳು.
  • ನಿಮ್ಮ ಮೇಲ್ವಿಚಾರಣೆ ಮತ್ತು ಆರೈಕೆಯಲ್ಲಿ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ವಿಶ್ವ ಶಿಕ್ಷಕರ ದಿನದ ಶುಭಾಶಯಗಳು.
  • ನಮ್ಮ ಹೆತ್ತವರು ನನಗೆ ಬದುಕು ನೀಡಿದರು. ಈ ಬದುಕಿನಲ್ಲಿ ಹೇಗೆ ಮುನ್ನಡೆಯಬೇಕು ಎಂದು ಕಲಿಸಿಕೊಟ್ಟವರು ನೀವು. ನನ್ನ ಬದುಕಿನಲ್ಲಿ ನೀವು ನೀಡಿದ ಕೊಡುಗೆಗಳು ಅಪಾರ. ನನ್ನ ಪ್ರೀತಿಯ ಶಿಕ್ಷಕರಿಗೆ ಶಿಕ್ಷಕರ ದಿನದ ಹಾರ್ಥಿಕ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ