World Vitiligo Day 2024 : ತೊನ್ನು ರೋಗ ಪೂರ್ವ ಜನ್ಮದ ಶಾಪವಲ್ಲ, ಚಿಕಿತ್ಸೆ ನೀಡಿದರೆ ಗುಣಮುಖ ಸಾಧ್ಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 25, 2024 | 10:24 AM

ವಿಟಲಿಗೋ ಕಾಯಿಲೆಯ ಕುರಿತು ಜನರಿಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಜೂನ್ 25 ರಂದು ವಿಶ್ವ ವಿಟಲಿಗೋ ದಿನ (ವಿಶ್ವ ತೊನ್ನು ರೋಗ ದಿನ) ವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇನ್ನಷ್ಟು ಮಾಹಿತಿಯು ಇಲ್ಲಿದೆ.

World Vitiligo Day 2024 : ತೊನ್ನು ರೋಗ ಪೂರ್ವ ಜನ್ಮದ ಶಾಪವಲ್ಲ, ಚಿಕಿತ್ಸೆ ನೀಡಿದರೆ ಗುಣಮುಖ ಸಾಧ್ಯ
World Vitiligo Da
Follow us on

ತೊನ್ನು ಅಥವಾ ವಿಟಿಲಿಗೊ ಒಂದು ಚರ್ಮಕ್ಕೆ ಸಂಬಂಧಿಸಿದ ದೀರ್ಘಕಾಲದ ಕಾಯಿಲೆಯಾಗಿದೆ. ಇದರಲ್ಲಿ ಚರ್ಮ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತದೆ. ಚರ್ಮದಲ್ಲಿರುವ ವರ್ಣದ್ರವ್ಯ ಜೀವಕೋಶಗಳು ಕಾರ್ಯನಿರ್ವಹಿಸಲು ಅಸಾಧ್ಯವಾದಾಗ ಈ ಕಾಯಿಲೆಯೂ ಉಂಟಾಗುತ್ತದೆ. ಈ ಕಾಯಿಲೆಯಿದ್ದವರನ್ನು ಮುಟ್ಟುವುದರಿಂದ ರೋಗವು ಹರಡುತ್ತವೆ ಎನ್ನುವ ತಪ್ಪು ಕಲ್ಪನೆಯಿದೆ. ಹೀಗಾಗಿ ಈ ಜನರನ್ನು ಕಂಡಾಗ ನೋಡುವ ದೃಷ್ಟಿಯೇ ಬೇರೆ. ಈ ತಪ್ಪು ಗ್ರಹಿಕೆ ಹಾಗೂ ಮೂಢನಂಬಿಕೆಗಳ ವಿರುದ್ಧ ಹೋರಾಡಲು ಹಾಗೂ ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ಉದ್ದೇಶವೇ ಈ ದಿನದ್ದಾಗಿದೆ.

ವಿಶ್ವ ವಿಟಲಿಗೋ ದಿನದ ಇತಿಹಾಸ ಹಾಗೂ ಮಹತ್ವ

ವಿಟಲಿಗೋ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ವಿಟಲಿಗೋ ದಿನವನ್ನು ಮೊದಲ ಬಾರಿಗೆ 2011 ರಲ್ಲಿ ಆಚರಿಸಲಾಯಿತು. ವಿಶ್ವಸಂಸ್ಥೆಯು ಪ್ರತಿ ವರ್ಷ ಜೂನ್ 25 ರಂದು ವಿಶ್ವ ವಿಟಲಿಗೋ ದಿನವನ್ನು ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಜೂನ್ 25 ರಂದು ಈ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ಜಾಗೃತಿ ಮೂಡಿಸಲಾಗುತ್ತದೆ. ಈ ದಿನದಂದು ಜಾಗೃತಿ ಅಭಿಯಾನ ಹಾಗೂ ಜಾಥಗಳು ನಡೆಯುತ್ತವೆ.

ಏನಿದು ವಿಟಲಿಗೋ ಅಥವಾ ತೊನ್ನು ರೋಗ?

ವಿಟಲಿಗೋ ಎನ್ನುವುದು ವ್ಯಕ್ತಿಯ ಚರ್ಮದ ಮೇಲೆ ಬಿಳಿ ಚುಕ್ಕೆಗಳು ಬೆಳೆಯುವ ಚರ್ಮದ ಕಾಯಿಲೆಯಾಗಿದೆ. ನಮ್ಮ ಚರ್ಮದ ಬಣ್ಣಕ್ಕೆ ಮೆಲನಿನ್ ಅಂಶ ಕಾರಣವಾಗಿದೆ. ಈ ಮೆಲನೋಸೈಟ್ ಕೋಶದಿಂದ ಈ ಮೆಲನಿನ್ ಉತ್ಪತ್ತಿಯಾಗುತ್ತದೆ. ಚರ್ಮದೊಳಗಿನ ಮೆಲನೊಸೈಟ್‌ಗಳ ನಾಶದಿಂದಾಗಿ ದೇಹದ ಮೇಲೆ ಬಿಳಿಚುಕ್ಕೆಗಳು ಕಾಣಿಸಿಕೊಳ್ಳುತ್ತವೆ, ಇದನ್ನೇ ವಿಟಲಿಗೋ ಅಥವಾ ತೊನ್ನು ಎನ್ನುತ್ತೇವೆ. ವಿಟಲಿಗೋ ಕಾಯಿಲೆ ಬರಲು ಪ್ರತಿರಕ್ಷಣಾ ವ್ಯವಸ್ಥೆಯ ಅಸ್ವಸ್ಥತೆ, ಅನುವಂಶಿಕತೆ, ಒತ್ತಡ, ತೀವ್ರ ಬಿಸಿಲು ಹಾಗೂ ಚರ್ಮದ ಆಘಾತವು ಕಾರಣವಾಗಿರಬಹುದು.

ಇದನ್ನೂ ಓದಿ: ಅಡುಗೆ ಮಾಡುವಾಗ ಕೈ ಸುಟ್ಟುಕೊಂಡರೆ, ಈ ವಸ್ತುಗಳೇ ನಿಮಗೆ ಆಪತ್ಪಾಂಧವ

ವಿಟಲಿಗೋ ಅಥವಾ ತೊನ್ನು ರೋಗದ ಲಕ್ಷಣಗಳು ಹಾಗೂ ಚಿಕಿತ್ಸೆ

ಆರಂಭದಲ್ಲಿ ಸಣ್ಣ ಬಿಳಿ ಚುಕ್ಕೆಗಳ ರೂಪದಲ್ಲಿ ಚರ್ಮದ ಮೇಲೆ ರೂಪುಗೊಳ್ಳಲು ಪ್ರಾರಂಭಿಸುತ್ತವೆ. ನಂತರ ಚುಕ್ಕೆಗಳು ದೇಹದ ತುಂಬೆಲ್ಲ ಹರಡಲು ಪ್ರಾರಂಭವಾಗುತ್ತದೆ. ದೇಹದ ಹೆಚ್ಚಿನ ಭಾಗಗಳಲ್ಲಿ ಚರ್ಮದ ಮೇಲೆ ಸಣ್ಣ ಅಥವಾ ದೊಡ್ಡ ಬಿಳಿ ತೇಪಗಳು ಕಾಣಿಸಿಕೊಳ್ಳುವುದು. ಕ್ರಮೇಣವಾಗಿ ದೇಹದ ಚರ್ಮದ ಬಣ್ಣ ಬದಲಾಗುತ್ತ ಹೋಗುತ್ತದೆ. ಈ ಸಮಸ್ಯೆಯು ಹೆಚ್ಚಾದರೆ ಕೂದಲಿನ ಬಣ್ಣ, ಬಾಯಿಯೊಳಗಿನ ಚರ್ಮದ ಬಣ್ಣದಲ್ಲಿ ಬದಲಾಗುತ್ತದೆ. ಟೇಲರ್‌ಮೇಡ್ ವಿಧಾನದ ಮೂಲಕ ರೋಗಿಯ ಲಕ್ಷಣಗಳು ಗಮನಿಸಿ, ಚಿಕಿತ್ಸೆ ನೀಡಲಾಗುತ್ತದೆ. ಈ ಕಾಯಿಲೆಯನ್ನು ಆರಂಭದಲ್ಲಿ ಮುಲಾಮು ಅಥವಾ ಇನ್ನಿತ್ತರ ಚಿಕಿತ್ಸೆಯನ್ನು ನೀಡಿ ಗುಣ ಪಡಿಸಬಹುದು. ಆದರೆ ಸ್ಟೇಬಲ್ ವಿಟಲಿಗೋ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. ರೋಗ ಲಕ್ಷಣದ ಆಧಾರದ ಮೇಲೆ ಆಟೋಲೊಗೋಸ್ ಮೆಲನೋಸೈಟ್ ಗ್ರಾಫ್ಟೀಂಗ್, ಸಕ್ಷನ್ ಗ್ರಾಫ್ಟೀಂಗ್, ಟ್ಯಾಟೋಯಿಂಗ್ ಸೇರಿದಂತೆ ಇನ್ನಿತ್ತರ ಚಿಕಿತ್ಸೆಗಳನ್ನು ನೀಡಲಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:09 am, Tue, 25 June 24