Burn Injury : ಅಡುಗೆ ಮಾಡುವಾಗ ಕೈ ಸುಟ್ಟುಕೊಂಡರೆ, ಈ ವಸ್ತುಗಳೇ ನಿಮಗೆ ಆಪತ್ಪಾಂಧವ
ಅಡುಗೆ ಮಾಡುವಾಗ ತರಾತುರಿಯಲ್ಲಿ ಕೈ ಸುಟ್ಟು ಕೊಂಡು ಗಾಯಗಳಾಗುತ್ತವೆ. ಕೆಲವೊಮ್ಮೆ ವಿಪರೀತ ಉರಿಯ ನಡುವೆ ಗುಳ್ಳೆಗಳು ಬರುತ್ತದೆ. ಹೀಗಾದಾಗ ತಕ್ಷಣವೇ ಮನೆಯಲ್ಲಿರುವ ಈ ವಸ್ತುಗಳನ್ನು ಹಚ್ಚಿದರೆ ನೋವು ಕಡಿಮೆ ಮಾಡಿಕೊಳ್ಳಬಹುದು.
ಅಡುಗೆ ಮಾಡುವಾಗ ಗಡಿ ಬಿಡಿಯಲ್ಲಿ ಮಹಿಳೆಯರು ಗಾಯಗಳನ್ನು ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪುಗಳಿಂದ ಬಿಸಿ ಎಣ್ಣೆ, ಬಿಸಿ ನೀರೋ ಕೈ ಅಥವಾ ಮೈ ಮೇಲೆ ಚೆಲ್ಲುತ್ತದೆ. ಇಲ್ಲದಿದ್ದರೆ ಬಿಸಿ ಪಾತ್ರೆಯನ್ನು ಮುಟ್ಟುವುದರಿಂದ ಕೈ ಚರ್ಮ ಸುಡುತ್ತದೆ. ಇದರಿಂದ ಉಂಟಾಗುವ ಉರಿ ಹಾಗೂ ನೋವು ತೀವ್ರವಾಗಿರುತ್ತದೆ. ಹೀಗಾಗಿ ಗ್ಯಾಸ್ ಅಥವಾ ಒಲೆಯ ಮುಂದೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲುವುದಿಲ್ಲ. ಹೆಚ್ಚಿನವರು ಬಿಸಿ ತಾಗಿದ ತಕ್ಷಣವೇ ಕೈಯನ್ನು ನೀರಿನಲ್ಲಿ ಅದ್ದಿ ಬಿಡುತ್ತಾರೆ, ಹೀಗೆ ಮಾಡಿದ್ದಲ್ಲಿ ಸುಟ್ಟ ಗಾಯವು ಗುಣಮುಖವಾಗಲು ಸಮಯ ತೆಗೆದುಕೊಳ್ಳುತ್ತದೆ. ಸಣ್ಣಪುಟ್ಟ ಗಾಯಗಳಾದರೆ ತೊಂದರೆಯಿಲ್ಲ, ಆದರೆ ತೀವ್ರವಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.
- ಗಾಯವು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಐಸ್ ಅನ್ನು ಅನ್ವಯಿಸುವುದರಿಂದ ಉರಿಯೂತ ಕಡಿಮೆಯಾಗುತ್ತದೆ. ಗುಳ್ಳೆಗಳೂ ಬರುವುದಿಲ್ಲ. ಇದು ಚರ್ಮದ ಮೇಲೆ ಕಪ್ಪು ಕಲೆಗಳು ಬರದಂತೆ ತಡೆಯುತ್ತದೆ.
- ಸುಟ್ಟ ಜಾಗಕ್ಕೆ ಸಾಸಿವೆ ಎಣ್ಣೆ ಮತ್ತು ಉಪ್ಪನ್ನು ಹಚ್ಚುವುದು ಪರಿಣಾಮಕಾರಿಯಾಗಿದೆ. ಪ್ರಾರಂಭದಲ್ಲಿ ಸ್ವಲ್ಪ ಉರಿ ಉಂಟಾದರೂ ನಂತರದಲ್ಲಿ ಕಡಿಮೆಯಾಗುತ್ತದೆ, ಗುಳ್ಳೆಗಳು ಬರುವುದಿಲ್ಲ.
- ಅಲೋವೆರಾ ಸಹ ಸುಟ್ಟಗಾಯವನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಗಾಯದ ಮೇಲೆ ತಕ್ಷಣವೇ ಅಲೋವೆರಾವನ್ನು ಹಚ್ಚಿದರೆ ಉರಿಯೂತವು ಕಡಿಮೆಯಾಗಿ, ಯಾವುದೇ ಗುಳ್ಳೆಗಳು ಕಾಣಿಸಿಕೊಳ್ಳುವುದಿಲ್ಲ.
- ಜೇನುತುಪ್ಪವು ಆಂಟಿ-ಸೆಪ್ಟಿಕ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಸುಟ್ಟ ಗಾಯದ ಮೇಲೆ ತಕ್ಷಣ ಜೇನುತುಪ್ಪವನ್ನು ಹಚ್ಚುವುದರಿಂದ ಉರಿಯೂತ ಶಮನವಾಗಿ, ಗುಳ್ಳೆಗಳು ಮೂಡದಂತೆ ತಡೆಯುತ್ತದೆ. ಜೇನು ತುಪ್ಪ ಹಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಡುವುದರಿಂದ ಸುಟ್ಟಗಾಯಗಳು ತ್ವರಿತವಾಗಿ ಗುಣವಾಗುತ್ತವೆ.
ಈ ಮನೆಮದ್ದನ್ನೊಮ್ಮೆ ಪ್ರಯತ್ನಿಸುವ ಮುನ್ನ ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ