AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಸ್ಟ್‌ ಈ ಟಿಪ್ಸ್‌ ಪಾಲಿಸುವ ಮೂಲಕ ಮನೆಯಂಗಳದಲ್ಲಿಯೇ ಸುಲಭವಾಗಿ ಬೆಳೆಯಬಹುದು ಕರಿಬೇವಿನ ಗಿಡ

ಅಡುಗೆಯ ರುಚಿ, ಘಮವನ್ನು ಹೆಚ್ಚಿಸುವಲ್ಲಿ ಕರಿಬೇವು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಹೆಚ್ಚಿನವರು ಅಡುಗೆಗೆ ಕರಿಬೇವನ್ನು ಬಳಸುತ್ತಾರೆ. ಸಾಮಾನ್ಯವಾಗಿ ಮಾರುಕಟ್ಟೆಯಿಂದಲೇ ಕರಿಬೇವನ್ನು ಖರೀದಿಸುತ್ತಾರೆ. ಹೀಗೆ ಖರೀದಿಸುವ ಬದಲು ಮನೆಯಂಗಳದಲ್ಲಿ, ಬಾಲ್ಕನಿಯಲ್ಲಿ ಪಾಟ್‌ನಲ್ಲಿ ಸುಲಭವಾಗಿ ಬೆಳೆಯಬಹುದು. ಅದರೆ ಅದರ ಸರಿಯಾದ ಆರೈಕೆಯ ಬಗ್ಗೆ ತಿಳಿದಿರಬೇಕು ಅಷ್ಟೆ.

ಜಸ್ಟ್‌ ಈ ಟಿಪ್ಸ್‌ ಪಾಲಿಸುವ ಮೂಲಕ ಮನೆಯಂಗಳದಲ್ಲಿಯೇ ಸುಲಭವಾಗಿ ಬೆಳೆಯಬಹುದು ಕರಿಬೇವಿನ ಗಿಡ
ಕರಿಬೇವಿನ ಗಿಡImage Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 27, 2026 | 7:18 PM

Share

ಮುಖ್ಯಾಂಶಗಳು

  • ಮನೆಯಂಗಳದಲ್ಲಿಯೇ ಕರಿಬೇವಿನ ಗಿಡವನ್ನು ಸುಲಭವಾಗಿ ಬೆಳೆಯಬಹುದು
  • ಮಳೆಗಾಲದ ಈ ಸಮಯ ಕರಿಬೇವಿನ ಗಿಡವನ್ನು ನೆಡಲು ಸೂಕ್ತ ಸಮಯವಾಗಿದೆ
  • ಸೊಂಪಾಗಿ ಗಿಡ ಬೆಳೆಯಲು ಸರಿಯಾದ ಆರೈಕೆಯ ಬಗ್ಗೆ ಗಮನ ಹರಿಸಬೇಕು

ಕರಿಬೇವು (curry leaves) ಅಡುಗೆಯ ಘಮ, ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ವಿಶೇಷವಾಗಿ ತಲೆ ಕೂದಲು, ಕಣ್ಣಿನ ಆರೋಗ್ಯಕ್ಕೆ ಕರಿಬೇವು ಪ್ರಯೋಜನಕಾರಿ. ಹಾಗಾಗಿ ಅಡುಗೆಗೆ ಕರಿಬೇವನ್ನು ಹೆಚ್ಚಾಗಿ ಬಳಸುತ್ತಾರೆ. ಅದಕ್ಕಾಗಿ ಈ ಗಿಡವನ್ನು ಮನೆಯಲ್ಲಿ ಬೆಳೆಯಲು ಪ್ರಯತ್ನಿಸುತ್ತಾರೆ. ಆದರೆ ಹೆಚ್ಚಿನವರ ಮನೆಗಳಲ್ಲಿ ಕರಿಬೇವು ಸೊಂಪಾಗಿ ಬೆಳೆಯುವುದೇ ಇಲ್ಲ, ನೆಟ್ಟ ಕೆಲವು ದಿನಗಳಲ್ಲಿಯೇ ಗಿಡ ಸತ್ತು ಹೋಗುತ್ತದೆ. ಹೀಗೆ ನಿಮ್ಮ ಮನೆಯಲ್ಲೂ ಕರಿಬೇವಿನ ಗಿಡ ಬೆಳೆಯುತ್ತಿಲ್ಲವೇ, ಹಾಗಿದ್ರೆ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಈ ಮಳೆಗಾಲದಲ್ಲಿ ಮನೆಯಂಗಳದಲ್ಲಿ ಕರಿಬೇವಿನ ಗಿಡ ನೆಡಿ ಮತ್ತು ಈ ರೀತಿ ಆರೈಕೆ ಮಾಡಿ, ಹೀಗೆ ಮಾಡುವುದರಿಂದ ಖಂಡಿತವಾಗಿಯೂ ಕರಿಬೇವಿನ ಗಿಡ ಸೊಂಪಾಗಿ ಬೆಳೆಯುತ್ತದೆ.

ಕರಿಬೇವಿನ ಗಿಡ ನೆಡಲು ಸೂಕ್ತ ಸಮಯ ಯಾವುವು?

ಕರಿ ಬೇವಿನ ಗಿಡಗಳು ಬೆಚ್ಚಗಿನ ಮತ್ತು ಆರ್ದ್ರ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಫೆಬ್ರವರಿಯಿಂದ ಏಪ್ರಿಲ್  ಮತ್ತು ಜುಲೈ ನಿಂದ ಸೆಪ್ಟೆಂಬರ್ ತಿಂಗಳ ನಡುವೆ ನೀವು ಕರಿ ಬೇವಿನ ಗಿಡ ನೆಟ್ಟರೆ ಅದು ವೇಗವಾಗಿ ಮತ್ತು ಸೊಂಪಾಗಿ ಬೆಳೆಯುತ್ತದೆ. ನರ್ಸರಿಯಿಂದ ಸಸಿ ತಂದು ನೆಡಬಹುದು ಅಥವಾ ಇತರೆ ಕರಿಬೇವಿನ ಕೊಂಬೆಯನ್ನು ನೆಟ್ಟು ಸಹ ಗಿಡವನ್ನು ಬೆಳೆಸಬಹುದು.

ಕರಿಬೇವಿನ ಗಿಡ ಬೆಳೆಯಲು ಯಾವ ರೀತಿಯ ಮಣ್ಣು ಬೇಕು?

ಕರಿಬೇವಿನ ಗಿಡ ಬೆಳೆಯಲು  ಹಗುರವಾದ, ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಇದನ್ನು ಮಾಡಲು, 50% ತೋಟದ ಮಣ್ಣು, 30% ಸಾವಯವ ಗೊಬ್ಬರ (ಕಾಂಪೋಸ್ಟ್ ಅಥವಾ ಹಸುವಿನ ಗೊಬ್ಬರ, ವರ್ಮಿಕಾಂಪೋಸ್ಟ್‌) ಮತ್ತು 20% ಮರಳಿನ ಮಿಶ್ರಣವನ್ನು ತಯಾರಿಸಿ, ಈ ಮಣ್ಣಿನ ಮಿಶ್ರಣವನ್ನು ಪಾಟ್‌ನಲ್ಲಿ ತುಂಬಿಸಿ, ಅದರಲ್ಲಿ ಕರಿಬೇವಿನ ಗಿಡವನ್ನು ನೆಡಿ. ಹೆಚ್ಚುವರಿ ತೇವಾಂಶವು ಬೇರುಗಳಿಗೆ ಹಾನಿ ಮಾಡುವುದರಿಂದ ಮಣ್ಣಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.

ಇದನ್ನೂ ಓದಿ: ತುಳಸಿ ಸಸ್ಯ ಸೊಂಪಾಗಿ ಬೆಳೆಯಬೇಕೆಂದರೆ, ಮಳೆಗಾಲದಲ್ಲಿ ರೀತಿ ಗಿಡವನ್ನು ಆರೈಕೆ ಮಾಡಿ

ಕರಿಬೇವಿನ ಗಿಡದ ಆರೈಕೆ ಹೀಗಿರಲಿ:

  • ಕರಿಬೇವಿನ ಗಿಡಗಳಿಗೆ ದಿನಕ್ಕೆ ಕನಿಷ್ಠ 4 ರಿಂದ 6 ಗಂಟೆಗಳ ಕಾಲ ಸೂರ್ಯನ ಬೆಳಕು ಬೇಕಾಗುತ್ತದೆ. ಸಾಕಷ್ಟು ಸೂರ್ಯನ ಬೆಳಕು ತ್ವರಿತ ಬೆಳವಣಿಗೆ ಮತ್ತು ಎಲೆ ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ.
  • ಪ್ರತಿದಿನ ಲಘುವಾಗಿ ನೀರು ಹಾಕಿ, ಆದರೆ ಮಣ್ಣು ನೀರಿನಿಂದ ತುಂಬಿಕೊಳ್ಳದಂತೆ ಎಚ್ಚರವಹಿಸಿ.
  • ಕರಿ ಬೇವಿನ ಗಿಡವನ್ನು ಆರೋಗ್ಯಕರವಾಗಿಡಲು, ಆಗಾಗ್ಗೆ ಒಣ ಅಥವಾ ಹಳದಿ ಎಲೆಗಳನ್ನು ತೆಗೆದು ಹಾಕುತ್ತಿರಿ. ಇದು ಹೊಸ ಚಿಗುರುಗಳು ಬೆಳೆಯಲು ಮತ್ತು ದಟ್ಟವಾಗಿ ಗಿಡ ಬೆಳೆಯಲು ಸಹಾಯ ಮಾಡುತ್ತದೆ.
  • . ಪ್ರತಿ ತಿಂಗಳು ಸಾವಯವ ಗೊಬ್ಬರವನ್ನು ಹಾಕುವುದರಿಂದ ಸಸ್ಯದ ಬೆಳವಣಿಗೆ ಹೆಚ್ಚಾಗುತ್ತದೆ. ಕೀಟಗಳು ಕಾಣಿಸಿಕೊಂಡರೆ, ಬೇವಿನ ಎಣ್ಣೆಯನ್ನು ಸಸ್ಯದ ಮೇಲೆ ಸಿಂಪಡಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us