ಅಸಮರ್ಪಕ ಜೀವನಶೈಲಿ, ಅನಾರೋಗ್ಯಕರ ಆಹಾರ, ದೀರ್ಘಕಾಲ ಹಸಿದಿರುವುದು, ಹಾರ್ಮೋನುಗಳ ಅಸಮತೋಲನ ಮತ್ತು ಹಲವಾರು ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಹೊಟ್ಟೆ ಉಬ್ಬುವಿಕೆಯ ಸಮಸ್ಯೆ ಉಂಟಾಗುತ್ತದೆ. ಹೊಟ್ಟೆ ಉಬ್ಬುವುದು(bloating) ಸಾಮಾನ್ಯ ಸಮಸ್ಯೆಯಾಗಿದೆ. ಇದು ಹೆಚ್ಚಾಗಿ ಮಲಬದ್ಧತೆ ಅಥವಾ ಹೆಚ್ಚುವರಿ ಅನಿಲದಂತಹ ಸಮಸ್ಯೆಗಳಿಂದ ಉಂಟಾಗುತ್ತದೆ. ಅನಾರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಜನರು ಈ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ. ಇದು ನಂತರ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಕಾರಣದಿಂದಾಗಿ, ಹೊಟ್ಟೆ ನೋವು(Stomach Pain) ಮತ್ತು ಸೆಳೆತದ ಸಮಸ್ಯೆಯೂ ಪ್ರಾರಂಭವಾಗುತ್ತದೆ. ಮುಟ್ಟಿನ(Periods) ಸಮಯದಲ್ಲಿ ಸಾಮಾನ್ಯವಾಗಿ ಉಬ್ಬುವಿಕೆಯ ಸಮಸ್ಯೆ ಇರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು, ನೀವು ಆಹಾರದಲ್ಲಿ ಹಲವಾರು ರೀತಿಯ ಪದಾರ್ಥಗಳನ್ನು ಸಹ ಸೇರಿಸಬಹುದು. ಇದು ಹೊಟ್ಟೆಯ ಉಬ್ಬುವಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮೊಸರು
ಮೊಸರು ಪ್ರಿಬಯಾಟಿಕ್‌ಗಳನ್ನು ಹೊಂದಿರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಹೊಟ್ಟೆ ಉಬ್ಬುವಿಕೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ನೀವು ಸಾಮಾನ್ಯವಾಗಿ ಮೊಸರನ್ನು ಹಣ್ಣುಗಳೊಂದಿಗೆ ಅಥವಾ ಊಟದ ನಂತರ ಸೇವಿಸಬಹುದು. ಇದು ಉಬ್ಬುವಿಕೆಯ ಸಮಸ್ಯೆಯನ್ನು ದೂರ ಇಡಲು ಸಹಾಯ ಮಾಡುತ್ತದೆ.
ಶುಂಠಿ
ಶುಂಠಿಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್ಟಿಕ್ ತಡೆಯಲು ಇದು ಸಹಾಯ ಮಾಡುತ್ತದೆ. ಶುಂಠಿಯಲ್ಲಿ ಜಿಂಜಿಬಾನ್ ಎಂಬ ಜೀರ್ಣಕಾರಿ ಕಿಣ್ವವಿದೆ. ಇದು ಕರುಳನ್ನು ಸಹ ಸಡಿಲಗೊಳಿಸುತ್ತದೆ. ಇದರಿಂದ ಹೊಟ್ಟೆ ಉಬ್ಬುವುದು ಕಡಿಮೆಯಾಗುತ್ತದೆ.
ಸೊಂಪು
ಸೊಂಪು ಕರುಳಿನ ಸ್ನಾಯುಗಳನ್ನು ವಿಶ್ರಾಂತಿ ಮಾಡುವಂತೆ ಮಾಡುತ್ತದೆ. ಅನಿಲ ಹೊರಬರಲು ಸಹಾಯ ಮಾಡಿ, ಹೊಟ್ಟೆ ಉಬ್ಬುವಿಕೆಯನ್ನು ತಡೆಯಲು ಕೆಲಸ ಮಾಡುತ್ತದೆ. ಆದ್ದರಿಂದ ನೀವು ಸೊಂಪು ಅನ್ನು ನಿಯಮಿತವಾಗಿ ಸೇವಿಸಬಹುದು.
ಬಾಳೆಹಣ್ಣು
ಹೊಟ್ಟೆ ಉಬ್ಬುವಿಕೆಗೆ ಮುಖ್ಯ ಕಾರಣವೆಂದರೆ ಪೊಟ್ಯಾಸಿಯಮ್ ಕೊರತೆ. ಪೊಟ್ಯಾಸಿಯಮ್‌ನಿಂದ ಸಮೃದ್ಧವಾಗಿರುವ ಬಾಳೆಹಣ್ಣು ಹೊಟ್ಟೆ ಉಬ್ಬುವುದನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ನಿಂಬೆಹಣ್ಣು
ಹೊಟ್ಟೆ ಉಬ್ಬುವುದು ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ನಿಂಬೆಯನ್ನು ಸೇವಿಸಬಹುದು. ನಿಂಬೆಯಲ್ಲಿ ವಿಟಮಿನ್ ಸಿ ಇದೆ. ಇದು ನಿಮ್ಮನ್ನು ಹೈಡ್ರೀಕರಿಸುತ್ತದೆ.
ಆವಕಾಡೊ
ಹೊಟ್ಟೆ ಉಬ್ಬುವುದು ಕಡಿಮೆ ಮಾಡಲು ಆವಕಾಡೊ ಅತ್ಯುತ್ತಮ ಆಯ್ಕೆಯಾಗಿದೆ. ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆವಕಾಡೊ ನಿಮಗೆ ಹಸಿವಾಗದಂತೆ ತೃಪ್ತಿಯನ್ನು ಅನುಭವಿಸಲು ಸಹಾಯ ಮಾಡುತ್ತದೆ.
ಸೌತೆಕಾಯಿ
ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿದ್ದು, ಅದು ನಿಮ್ಮನ್ನು ಹೈಡ್ರೇಟ್ ಆಗಿರಿಸುತ್ತದೆ. ಇದು ಹೊಟ್ಟೆ ಉಬ್ಬುವಿಕೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ನಿಮ್ಮ ಜೀವಕೋಶಗಳಿಂದ ಹೆಚ್ಚುವರಿ ನೀರನ್ನು ಮತ್ತು ನಿಮ್ಮ ಜಿಐ ಟ್ರಾಕ್ಟ್‌ನಿಂದ ಅನಿಲವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಸೌತೆಕಾಯಿಯಲ್ಲಿ ಸಲ್ಫರ್ ಮತ್ತು ಸಿಲಿಕಾನ್ ಕೂಡ ಇದೆ. ಇದು ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ.
ಇದನ್ನೂ ಓದಿ:
Black Pepper: ಕರಿಮೆಣಸಿನ ಕಾಳು ಬಳಸಿ ಹಲವು ಆರೋಗ್ಯ ಸಮಸ್ಯೆಗೆ ಮುಕ್ತಿ ನೀಡಿ
Healthy Foods: ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಸಹಕಾರಿ ಈ 5 ಆಹಾರಗಳು; ಇಲ್ಲಿದೆ ಉಪಯುಕ್ತ ಮಾಹಿತಿ