Zumba Dance: ತೂಕ ಇಳಿಸಿಕೊಳ್ಳಲು ಜುಂಬಾ ಡ್ಯಾನ್ಸ್ ಉತ್ತಮ ಮಾರ್ಗ

| Updated By: ನಯನಾ ರಾಜೀವ್

Updated on: Jun 06, 2022 | 6:00 PM

ನೃತ್ಯವೆಂದರೆ ಇಷ್ಟಪಡದವರುಂಟೇ, ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುವ ಈ ನೃತ್ಯವು ನಿಮ್ಮ ತೂಕ ಇಳಿಕೆಗೂ ಸಹಕಾರಿ ಎಂದರೆ ನೀವು ನಂಬಲೇಬೇಕು. ಜಾನಪದ ನೃತ್ಯವಾಗಿರಬಹುದು, ರಾಷ್ಟೀಯ ನೃತ್ಯವೆಂದು ಪ್ರಸಿದ್ಧಿ ಪಡೆದಿರಬಹುದು.

Zumba Dance: ತೂಕ ಇಳಿಸಿಕೊಳ್ಳಲು ಜುಂಬಾ ಡ್ಯಾನ್ಸ್ ಉತ್ತಮ ಮಾರ್ಗ
Zumba Dance
Follow us on

ನೃತ್ಯವೆಂದರೆ ಇಷ್ಟಪಡದವರುಂಟೇ, ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುವ ಈ ನೃತ್ಯವು ನಿಮ್ಮ ತೂಕ ಇಳಿಕೆಗೂ ಸಹಕಾರಿ ಎಂದರೆ ನೀವು ನಂಬಲೇಬೇಕು. ಜಾನಪದ ನೃತ್ಯವಾಗಿರಬಹುದು, ರಾಷ್ಟೀಯ ನೃತ್ಯವೆಂದು ಪ್ರಸಿದ್ಧಿ ಪಡೆದಿರಬಹುದು. ಮ್ಯೂಸಿಕ್ ಆನ್ ಮಾಡಿದರೆ ಸಾಕು, ಚಿಕ್ಕವರಿಂದ ಹಿಡಿದು ವೃದ್ಧರವರೆಗೂ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ.
ಹಲವು ನೃತ್ಯ ಪ್ರಕಾರಗಳಲ್ಲಿ ಜುಂಬಾ ಡ್ಯಾನ್ಸ್ ಕೂಡ ಒಂದು, ಇದು ನೋಡಲು ನೃತ್ಯದಂತೆ ಕಂಡರೂ ಒಂದು ರೀತಿಯ ವ್ಯಾಯಾಮವೇ ಆಗಿದೆ, ಕೊಬ್ಬು ಕರಗಿಸಲು ಸಹಾಯಕವಾಗಿದೆ.

ನೃತ್ಯವು ವಿಶ್ರಾಂತಿ ಪಡೆಯಲು ಮತ್ತು ಆನಂದಿಸಲು ಉತ್ತಮವಾದ ಮಾರ್ಗವಾಗಿದ್ದರು ಕೂಡ ಇದು ಇತರ ಹಲವಾರು ಪ್ರಯೋಜನಗಳನ್ನು ಹೊಂದಿದೆ. ನೃತ್ಯವು ವಾಸ್ತವವಾಗಿ ವ್ಯಾಯಾಮ ಮಾಡಲು ಹಾಗು ಕೊಬ್ಬು ಕರಗಿಸಲು ಸಹಾಯಕವಾಗುತ್ತದೆ. ನೃತ್ಯದಿಂದ ಕ್ಯಾಲೋರಿಯನ್ನು ಸುಡಲು ಮತ್ತು ತೂಕ ಇಳಿಸಿಕೊಳ್ಳಲು ಅತ್ಯುತ್ತಮವಾದ ಮಾರ್ಗ ಎಂದೇ ಹೇಳಬಹುದು.

ಕೆಲವರಿಗೆ ವಾಕಿಂಗ್ ಮಾಡಲು ಇಷ್ಟ, ಮತ್ತೊಬ್ಬರಿಗೆ ಫಿಟ್ ನೆಸ್ ಇಷ್ಟ, ಇನ್ನೊಬ್ಬರಿಗೆ ಯೋಗ ಇಷ್ಟ. ಹೀಗೆ ಒಬ್ಬೊಬ್ಬರ ಅಭಿರುಚಿ ಒಬ್ಬೊಬ್ಬರಿಗೆ, ದೇಹದಂಡನೆ ಮಾಡಲು ಪ್ರಮುಖವಾಗಿ ಮನಸ್ಸು ದೃಢವಾಗಿರಬೇಕು. ಸುಖಾಸುಮ್ಮನೆ ಒಂದೆರಡು ದಿನಗಳು ಮಾಡಿ ಮತ್ತೇ ತೂಕ ಇಳಿಕೆಯ ಮೇಲೆ ಉತ್ಸಹ ಕಡಿಮೆಯಾಗಬಾರದು.

​ಏರೋಬಿಕ್ ವ್ಯಾಯಾಮ ತೂಕ ನಷ್ಟಕ್ಕೆ ಕಾರಣವಾಗಬಹುದು
ಏರೋಬಿಕ್ ಅಥವಾ ಕಾರ್ಡಿಯೋ ವ್ಯಾಯಾಮದ ರೂಪಗಳು. ನೃತ್ಯವು ಕ್ಯಾಲೋರಿಗಳನ್ನು ಸುಡುವುದರ ಜೊತೆ-ಜೊತೆಗೆ ನಿಮ್ಮ ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ದೇಹದ ರಕ್ತದ ಪರಿಚಲನೆಯನ್ನು ಸುಗಮಗೊಳಿಸುತ್ತದೆ. ಒತ್ತಡ ಕಡಿಮೆ ಮಾಡಿ ಉತ್ತಮವಾದ ನಿದ್ರೆ ಬರುವಂತೆ ಮಾಡುತ್ತದೆ. ಮಧುಮೇಹ ಮತ್ತು ಹೃದ್ರೋಗದಂತಹ ಅಪಾಯಕಾರಿ ಪರಿಸ್ಥಿತಿಗಳನ್ನು ಕಡಿಮೆ ಮಾಡುತ್ತದೆ.

​ಖಿನ್ನತೆಯಿಂದ ಹೊರಬರಬಹುದು
ಜುಂಬಾ ನೃತ್ಯವು ಕೇವಲ ದೈಹಿಕ ಪ್ರಯೋಜನಗಳೇ ಅಲ್ಲದೇ ಮಾನಸಿಕವಾಗಿಯೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ಮುಖ್ಯವಾಗಿ ಏರೋಬಿಕ್ ವ್ಯಾಯಾಮವು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಖಿನ್ನತೆಯಂತಹ ಅಪಾಯದಿಂದ ತಪ್ಪಿಸುತ್ತದೆ. ನೃತ್ಯವು ವಿಶೇಷವಾಗಿ ಸಾಮಾಜಿಕ ಚಟುವಟಿಕೆಯಾಗಿದೆ. ನೃತ್ಯ ಒಂದು ಮೋಜಿನ ಚಟುವಟಿಕೆಯಾಗಿದ್ದು, ನಿಮ್ಮ ಮೋಜಿನ ಆಟದ ಜೊತೆಗೆ ನಿಮ್ಮ ತೂಕವನ್ನು ಸುಲಭವಾಗಿ ಇಳಿಕೆ ಮಾಡಬಹುದು.

ಇತರೆ ಸಲಹೆ
-ನಿಮ್ಮ ಆಹಾರದಲ್ಲಿ ತರಕಾರಿ ಹಾಗೂ ಹಣ್ಣುಗಳಿರಲಿ
-ನಿತ್ಯ ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯುವುದನ್ನು ಮರೆಯಬೇಡಿ
-ಪ್ಯಾಕ್ಡ್​ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ
-ಡ್ಯಾನ್ಸ್ ಮಾಡುವ ಸಂದರ್ಭದಲ್ಲಿ ನಿಮಗೆ ಇಷ್ಟವಾದ ಹಾಡನ್ನು ಹಾಕಿಕೊಂಡು ಎಂಜಾಯ್ ಮಾಡಿ

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ