ಕಡಪಾ ಕ್ವಾರಿಯಲ್ಲಿ ಮಹಾ ದುರಂತ; 10 ಕಾರ್ಮಿಕರು ದುರ್ಮರಣ, ಸಾವಿನ ಸಂಖ್ಯೆ ಏರುವ ಸಾಧ್ಯತೆ

|

Updated on: May 08, 2021 | 12:43 PM

ಕಡಪಾದ ಕಳಸಪಾಡು ಬ್ಲಾಕ್​​ನಲ್ಲಿರುವ ಮಾಮಿಲ್ಲಪಲ್ಲೆ ಗ್ರಾಮದಲ್ಲಿ ಶನಿವಾರ (ಇಂದು) ಬೆಳಗ್ಗೆ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

ಕಡಪಾ ಕ್ವಾರಿಯಲ್ಲಿ ಮಹಾ ದುರಂತ; 10 ಕಾರ್ಮಿಕರು ದುರ್ಮರಣ, ಸಾವಿನ ಸಂಖ್ಯೆ ಏರುವ ಸಾಧ್ಯತೆ
ಪ್ರಾತಿನಿಧಿಕ ಚಿತ್ರ
Follow us on

ಹೈದರಾಬಾದ್: ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿರುವ ಕ್ವಾರಿಯಲ್ಲಿ ಕಲ್ಲು ಒಡೆಯುವ ಸ್ಫೋಟಕ ಸ್ಫೋಟಗೊಂಡ ಪರಿಣಾಮ 10ಕ್ಕೂ ಹೆಚ್ಚು ಮಂದಿ ಕೆಲಸಗಾರರು ಮೃತಪಟ್ಟಿದ್ದಾಗಿ ವರದಿಯಾಗಿದೆ. ಇಲ್ಲಿ ಕೆಲಸಗಾರರು ಸ್ಫೋಟಕವನ್ನು ಅಳವಡಿಸಲು ಗ್ರಾನೈಟ್​​ನ್ನು ಕೊರೆಯುತ್ತಿದ್ದ ವೇಳೆ ಏಕಾಏಕಿ ಸ್ಫೋಟಗೊಂಡಿದೆ. ಸದ್ಯ 10 ಮೃತದೇಹಗಳಷ್ಟೇ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ.

ಕಡಪಾದ ಕಳಸಪಾಡು ಬ್ಲಾಕ್​​ನಲ್ಲಿರುವ ಮಾಮಿಲ್ಲಪಲ್ಲೆ ಗ್ರಾಮದಲ್ಲಿ ಶನಿವಾರ (ಇಂದು) ಬೆಳಗ್ಗೆ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ, ಪೊರುಮಾಮಿಲ್ಲಾ ಠಾಣೆ ಪೊಲೀಸ್ ಅಧಿಕಾರಿ, ಸ್ಫೋಟವಾಗಿದ್ದು ಗ್ರಾನೈಟ್ ಕೊರೆಯುವಾಗ ಎಂದು ಹೇಳಲಾಗುತ್ತಿದೆ. ಆದರೆ ನಮ್ಮ ತನಿಖೆ ಪ್ರಕಾರ ಸ್ಫೋಟಕಗಳನ್ನು ಕ್ವಾರಿಗೆ ಸಾಗಿಸುವಾಗ ಈ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಇದರಲ್ಲಿ ಮೃತಪಟ್ಟವರು ಬಹುತೇಕ ಪುಲಿವೆಂದುಲಾದವರೇ ಆಗಿದ್ದಾರೆ. ಈ ಗ್ರಾಮ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್​ ಮೋಹನ್​ ರೆಡ್ಡಿಯವರ ಸ್ವಗ್ರಾಮವೂ ಆಗಿದೆ. ಇನ್ನು ಜಗನ್​ಮೋಹನ್​ ರೆಡ್ಡಿಯವರು ಘಟನೆಯ ಸಂಪೂರ್ಣ ವಿವರವನ್ನು ಪಡೆದಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದಾರೆ.

ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ ಕೊವಿಡ್​ ಚಿಕಿತ್ಸೆಗೆ ವೈದ್ಯರ ಅಭಾವ; ತಾತ್ಕಾಲಿಕ ನೇಮಕಾತಿಗೆ ಆರೋಗ್ಯ ಇಲಾಖೆಯಿಂದ ಅರ್ಜಿ ಆಹ್ವಾನ

ಭಾರತದ ಜನರ ಕ್ಷೇಮ ಅಮೆರಿಕಕ್ಕೆ ತುಂಬ ಮುಖ್ಯ, ಅವರೊಂದಿಗೆ ನಾವಿದ್ದೇವೆ: ಕಮಲಾ ಹ್ಯಾರಿಸ್​

(10 killed in blast which at kadapa Quarry in Andhra Pradesh)