‘ಇನ್ನು 3-4ತಿಂಗಳಲ್ಲಿ ಎಲ್ಲ ನಾಗರಿಕರಿಗೂ ಲಸಿಕೆ ಕೊಟ್ಟು ಮುಗಿಯಬೇಕು.. ’-ಉತ್ತರ ಪ್ರದೇಶ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ

‘ಇನ್ನು 3-4ತಿಂಗಳಲ್ಲಿ ಎಲ್ಲ ನಾಗರಿಕರಿಗೂ ಲಸಿಕೆ ಕೊಟ್ಟು ಮುಗಿಯಬೇಕು.. ’-ಉತ್ತರ ಪ್ರದೇಶ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ
ಅಲಹಾಬಾದ್​ ಹೈಕೋರ್ಟ್​

ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ಜೀವರಕ್ಷಕ ಔಷಧಿಗಳು, ಪಲ್ಸ್ ಆಕ್ಸಿಮೀಟರ್​, ಆಕ್ಸಿಜನ್​ ಸಿಲಿಂಡರ್​​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೀಗೆ ವಶಪಡಿಸಿಕೊಂಡಿರುವ ಉಪಕರಣಗಳನ್ನು ಶೀಘ್ರವೇ ಬಳಕೆಗೆ ಮುಕ್ತಗೊಳಿಸಲು ಕೋರ್ಟ್ ಆದೇಶಿಸಿದೆ.

Lakshmi Hegde

|

May 08, 2021 | 1:27 PM

ಪ್ರಯಾಗ್​ರಾಜ್​: ಇನ್ನು ಮೂರು-ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ಹಾಕಲು ವ್ಯವಸ್ಥೆ ಮಾಡಬೇಕು ಎಂದು ಅಲಹಾಬಾದ್ ಹೈಕೋರ್ಟ್​ ಶುಕ್ರವಾರ ಉತ್ತರಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೆ, ಟೆಂಡರ್​ ಮೂಲಕ ವ್ಯಾಕ್ಸಿನ್ ಖರೀದಿ ಮಾಡುವುದು ಸುದೀರ್ಘ ಪ್ರಕ್ರಿಯೆ ಎಂದೂ ಹೇಳಿದೆ.

ರಾಜ್ಯದಲ್ಲಿ ಕೊವಿಡ್​ 19 ವಿರುದ್ಧದ ಹೋರಾಟ, ನಿಯಂತ್ರಣಕ್ಕೆ ಸರ್ಕಾರದ ಸಿದ್ಧತೆ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಇಬ್ಬರು ನ್ಯಾಯಾಧೀಶರುಳ್ಳ ಪೀಠ, ಉತ್ತರ ಪ್ರದೇಶ ಸರ್ಕಾರ ತ್ವರಿತಗತಿಯಲ್ಲಿ ಲಸಿಕೆ ಖರೀದಿ ಮಾಡಿ, ನಾಗರಿಕರಿಗೆ ನೀಡಲು ಶುರು ಮಾಡಬೇಕು. ಹಾಗಾದರೆ ಮಾತ್ರ ಇನ್ನು 2-4 ತಿಂಗಳಲ್ಲಿ ರಾಜ್ಯದ ಎಲ್ಲರಿಗೂ ಸಂಪೂರ್ಣವಾಗಿ ಲಸಿಕೆ ನೀಡಬಹುದಾಗಿದೆ ಎಂದು ಅಲಹಾಬಾದ್​ ಹೈಕೋರ್ಟ್ ತಿಳಿಸಿದೆ.

ಲಸಿಕೆಗಳ ಖರೀದಿ, ಸಂಗ್ರಹಕ್ಕೆ ಸಂಬಂಧಪಟ್ಟಂತೆ ನೀವು ಯಾವ ಯೋಜನೆಗಳನ್ನು ರೂಪಿಸಿಕೊಂಡಿದ್ದೀರಿ, ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ಕೊವಿಡ್ 19 ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳು, ಚೈನ್​ ಬ್ರೇಕ್​ ಮಾಡಲು ರೂಪಿಸಿರುವ ಯೋಜನೆಗಳ ಬಗ್ಗೆ ಮಾಹಿತಿಯುಳ್ಳ ಒಂದು ಅಫಿಡಿವಿಟ್​ನ್ನು ಮುಂದಿನ ವಿಚಾರಣೆಯೊಳಗೆ ಸಲ್ಲಿಸಬೇಕು ಎಂದು ಹೈಕೋರ್ಟ್, ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಸೂಚನೆ ನೀಡಿದೆ. ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ಜೀವರಕ್ಷಕ ಔಷಧಿಗಳು, ಪಲ್ಸ್ ಆಕ್ಸಿಮೀಟರ್​, ಆಕ್ಸಿಜನ್​ ಸಿಲಿಂಡರ್​​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೀಗೆ ವಶಪಡಿಸಿಕೊಂಡಿರುವ ಉಪಕರಣಗಳನ್ನು ಶೀಘ್ರವೇ ಬಳಕೆಗೆ ಮುಕ್ತಗೊಳಿಸಿ. ಮುಂದೆ ಕೂಡ ಯಾವುದೇ ಇಂಥ ಪ್ರಕರಣಗಳು ನಡೆದರೂ, ಪೊಲೀಸರು ವಶಪಡಿಸಿಕೊಂಡ ಒಂದೇ ವಾರದಲ್ಲಿ ಅದನ್ನು ಬಳಕೆಗೆ ಮುಕ್ತಗೊಳಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಇನ್ನು ಪಂಚಾಯತ್​ ಚುನಾವಣೆಯಲ್ಲಿ ಚುನಾವಣಾ​ ಅಧಿಕಾರಿಗಳಾಗಿ ಪಾಲ್ಗೊಂಡಿದ್ದ ಶಿಕ್ಷಕರು ಮೃತಪಟ್ಟ ವಿಚಾರದ ಬಗ್ಗೆ ಸಲ್ಲಿಕೆಯಾದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್​, ಚುನಾವಣೆ ಸಂದರ್ಭದಲ್ಲಿ ಎಲ್ಲ ರೀತಿಯ ಕೊವಿಡ್ 19 ನಿಯಂತ್ರಣಾ ಶಿಷ್ಟಾಚಾರಗಳನ್ನು ಪಾಲಿಸಲಾಗಿತ್ತೇ ಎಂಬುದನ್ನು ಪರಿಶೀಲನೆ ಮಾಡುವ ಅಗತ್ಯವಿದ್ದು, ನಮಗೆ ಸಿಸಿಟಿವಿ ಫೂಟೇಜ್​ ಹಾಗೂ ಮೃತ ಚುನಾವಣಾ ಅಧಿಕಾರಿಗಳ ನಿಖರ ಸಂಖ್ಯೆ ಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ತಿಳಿಸಿದೆ. ವಿಚಾರಣೆಯನ್ನು ಮೇ 11ಕ್ಕೆ ಮುಂದೂಡಿದೆ.

ಇದನ್ನೂ ಓದಿ: ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಮೇ.11ರ ಒಳಗೆ ಸಿಸಿ ಕ್ಯಾಮರಾ ಅಳವಡಿಸಬೇಕು: ಆರೋಗ್ಯ ಇಲಾಖೆ

ಕಡಪಾ ಕ್ವಾರಿಯಲ್ಲಿ ಮಹಾ ದುರಂತ; 10 ಕಾರ್ಮಿಕರು ದುರ್ಮರಣ, ಸಾವಿನ ಸಂಖ್ಯೆ ಏರುವ ಸಾಧ್ಯತೆ

Follow us on

Related Stories

Most Read Stories

Click on your DTH Provider to Add TV9 Kannada