ಪಿಎಂ ಕಿಸಾನ್​ ಯೋಜನೆಯ 10ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ; ಹಣ ಜಮಾ ಆಗಿದ್ದನ್ನು ಚೆಕ್​ ಮಾಡಿಕೊಳ್ಳಿ

| Updated By: Lakshmi Hegde

Updated on: Jan 01, 2022 | 1:11 PM

Pradhan Mantri Kisan Samman Nidhi: ಪ್ರಧಾನ ಮಂತ್ರಿ ಕಿಸಾನ್​ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ವರ್ಷಕ್ಕೆ 6000 ರೂ. ಹಣವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ಜಮಾ ಮಾಡುತ್ತದೆ. ಅದರ 9 ಕಂತುಗಳಷ್ಟನ್ನು ರೈತರು ಇದುವರೆಗೆ ಸ್ವೀಕರಿಸಿದ್ದರು. 

ಪಿಎಂ ಕಿಸಾನ್​ ಯೋಜನೆಯ 10ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ; ಹಣ ಜಮಾ ಆಗಿದ್ದನ್ನು ಚೆಕ್​ ಮಾಡಿಕೊಳ್ಳಿ
ಪಿಎಂ ಕಿಸಾನ್​ ಯೋಜನೆ 10ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ
Follow us on

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಪಿಎಂ ಕಿಸಾನ್​ ಸಮ್ಮಾನ್​ ನಿಧಿ ಯೋಜನೆ 10ನೇ ಕಂತನ್ನು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಡಿ ದೇಶದ 10 ಕೋಟಿ ರೈತರ ಬ್ಯಾಂಕ್​ ಖಾತೆಗೆ 2 ಸಾವಿರ ರೂ.ಜಮೆಯಾಗಿದೆ. 10ನೇ ಕಂತಿನಡಿ ಹಣ ಪಡೆಯಲು ಅನೇಕ ರೈತರು ಕಾಯುತ್ತಿದ್ದರು. ಅವರಿಗೆ ಹೊಸವರ್ಷದ ಮೊದಲ ದಿನವೇ ಪ್ರಧಾನಿ ಮೋದಿ ಶುಭ ಸಮಾಚಾರ ನೀಡಿದ್ದಾರೆ.  ಇಂದು ಕಿಸಾನ್ ಸಮ್ಮಾನ್​ ಯೋಜನೆಯ 10ನೇ ಕಂತನ್ನು ಮಾತ್ರವಲ್ಲದೆ, ಪ್ರಧಾನಿ ಮೋದಿ, 351 ರೈತ ಉತ್ಪಾದನಾ ಸಂಸ್ಥೆಗಳಿಗೆ 14 ಕೋಟಿ ರೂಪಾಯಿ ಇಕ್ವಿಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಇದರಿಂದ ಸುಮಾರು 1.24 ಲಕ್ಷ ರೈತರಿಗೆ ಅನುಕೂಲವಾಗಿದೆ.  ಪ್ರಧಾನ ಮಂತ್ರಿ ಕಿಸಾನ್​ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ವರ್ಷಕ್ಕೆ 6000 ರೂ. ಹಣವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ಜಮಾ ಮಾಡುತ್ತದೆ. ಅದರ 9 ಕಂತುಗಳಷ್ಟನ್ನು ರೈತರು ಇದುವರೆಗೆ ಸ್ವೀಕರಿಸಿದ್ದರು.  

ನಿಮ್ಮ ಕಿಸಾನ್​-ಸಮ್ಮಾನ್​ ಕಂತನ್ನು ಪರಿಶೀಲನೆ ಮಾಡುವ ವಿಧಾನ ಹೀಗಿದೆ..
1. ಮೊದಲು ಕಿಸಾನ್ ಸಮ್ಮಾನ್​ ಯೋಜನೆಯ ಅಧಿಕೃತ ವೆಬ್​ಸೈಟ್​ https://pmkisan.gov.in/. ಗೆ ಭೇಟಿ ನೀಡಿ
2.ಹೋಂ ಪೇಜ್​​ನಲ್ಲಿರುವ ‘Farmer’s Corner Section’ ಮೇಲೆ ಕ್ಲಿಕ್​ ಮಾಡಿ.
3.  ಅದರಲ್ಲಿ Beneficiary Status (ಫಲಾನುಭವಿಗಳ ಸ್ಥಿತಿ) ಎಂಬ ಆಪ್ಷನ್​ನ್ನು ಆಯ್ಕೆ ಮಾಡಿ. (ಅಲ್ಲಿ ಈ ಯೋಜನೆಯ ಫಲಾನುಭವಿ ಆತನ/ಆಕೆಯ ಅರ್ಜಿಯ ಸ್ಥಿತಿ ಪರಿಶೀಲನೆ ಮಾಡಬಹುದು. ಕಿಸಾನ್​-ಸಮ್ಮಾನ್​ ಯೋಜನೆಯ ಫಲಾನುಭವಿ ರೈತರ ಹೆಸರು ಮತ್ತು ಅವರ ಬ್ಯಾಂಕ್​ಗೆ ಕಳಿಸಲಾದ ಹಣದ ಮೊತ್ತದ ಪಟ್ಟಿ ಇರುತ್ತದೆ).
4. ಫಲಾನುಭವಿಗಳ ಸ್ಥಿತಿ ಕ್ಲಿಕ್​ ಮಾಡಿದ ಮೇಲೆ, ಅಲ್ಲಿ ನಿಮ್ಮ ಆಧಾರ್ ನಂಬರ್​ ಅಥವಾ ಫೋನ್ ನಂಬರ್​ ಅಥವಾ ಅಕೌಂಟ್ ನಂಬರ್ ನಮೂದಿಸಬೇಕು. ನಿಮ್ಮ ರಾಜ್ಯ, ಜಿಲ್ಲೆ, ಹಳ್ಳಿ ಇತ್ಯಾದಿ ಮಾಹಿತಿಗಳನ್ನೂ ನೀಡಬೇಕು.
5. ಇಷ್ಟಾದ ಮೇಲೆ ನಿಮ್ಮ ಡಾಟಾ ಪಡೆಯಬಹುದು.

4000 ರೂ.ಬರಬಹುದು !
ಇದು ಎಲ್ಲರಿಗೂ ಅಲ್ಲ. ಪಿಎಂ ಕಿಸಾನ್ ಯೋಜನೆಯ 9ನೇ ಕಂತಿನಡಿ ಯಾರು ಹಣ ಪಡೆದಿರಲಿಲ್ಲವೋ ಅವರಿಗೆ ಆ ಕಂತು ಮತ್ತು ಈ ಸಲದ 10ನೇ ಕಂತು ಸೇರಿ ಒಟ್ಟು 4 ಸಾವಿರ ರೂಪಾಯಿ ಬರಬಹುದು (ಅಂದರೆ ಎರಡೂ ಕಂತುಗಳ ತಲಾ 2000 ರೂ). ಹಾಗೇ, 9ನೇ ಕಂತಿನಲ್ಲಿ ಹಣ ಪಡೆಯದೆ ಇದ್ದವರು..ಈ ಸಲ ಒಟ್ಟಿಗೇ ಪಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: Moto G31: ಹೊಸ ವರ್ಷಕ್ಕೆ ಬಿಗ್ ಶಾಕ್: ಈ ಎರಡು ಸ್ಮಾರ್ಟ್​ಫೋನ್ ಬೆಲೆಯಲ್ಲಿ ಬರೋಬ್ಬರಿ 3000 ರೂ. ಏರಿಕೆ

Published On - 1:03 pm, Sat, 1 January 22