ಜಾರ್ಖಂಡ್‌ನಲ್ಲಿ ರೈಲು ಡಿಕ್ಕಿಯಾಗಿ 12 ಜನ ಸಾವು, ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳು

|

Updated on: Feb 28, 2024 | 10:12 PM

Jamtara Train Accident: ಜಾರ್ಖಂಡ್​ನಲ್ಲಿ ಸಿನಿಮೀಯ ರೀತಿಯಲ್ಲಿ ರೈಲು ಅಪಘಾತವೊಂದು ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡಿದೆ ಎಂದು ಜೀವ ಉಳಿಸಿಕೊಳ್ಳಲು ಪ್ರಯಾಣಿಕರು ರೈಲಿನಲ್ಲಿ ಜಿಗಿದಿದ್ದಾರೆ. ಆದ್ರೆ, ದುರಂತ ಅಂದರೆ ಪಕ್ಕದ ಹಳಿಯಲ್ಲಿ ಬರುತ್ತಿದ್ದ ಮತ್ತೊಂದು ರೈಲು ಗುದ್ದಿಕೊಂಡು ಹೋಗಿದೆ. ಸಾವಿನಿಂದ ಬಚಾವ್​ ಆಗಲು ಹೋದವರ ಪೈಕಿ 12 ಜನ ದುರಂತ ಅಂತ್ಯಕಂಡಿದ್ದಾರೆ. ಹೇಗಾಯ್ತು? ಈ ದುರಂತ ನಡೆದಿದ್ದು ಎಲ್ಲಿ? ಎನ್ನುವ ವಿವರ ಈ ಕೆಳಗಿನಂತಿದೆ.

ಜಾರ್ಖಂಡ್‌ನಲ್ಲಿ ರೈಲು ಡಿಕ್ಕಿಯಾಗಿ 12 ಜನ ಸಾವು, ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳು
ಜಾರ್ಖಂಡ್ ರೈಲು ಅಪಘಾತ
Follow us on

ರಾಂಚಿ, (ಫೆಬ್ರವರಿ 28): ಜಾರ್ಖಂಡ್‌ನ ಜಮ್ತಾರ ಜಿಲ್ಲೆಯಲ್ಲಿ ಇಂದು (ಫೆಬ್ರವರಿ 28) ಸಂಜೆ ಭೀಕರ ರೈಲು (Jamtara Train Accident) ದುರಂತ ಸಂಭವಿಸಿದೆ. ಜಮ್ತಾರ ಜಿಲ್ಲೆಯ ಕಲಝಾರಿಯ (Kalajharia) ರೈಲು ನಿಲ್ದಾಣದ ಬಳಿ ರೈಲು ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ 12 ಮಂದಿ ಮೃತಪಟ್ಟರೆ, ಹಲವರು ಗಾಯಗೊಂಡಿದ್ದಾರೆ. ರೈಲ್ವೆ ಪೊಲೀಸರು ಹಾಗೂ ಸಿಬ್ಬಂದಿಯೂ ಕೂಡಲೇ ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಸ್ಥಳದಳಲ್ಲಿ ರಕ್ಷಣಾ ಕಾರ್ಯನಡೆದಿದೆ ಎಂದು ತಿಳಿದುಬಂದಿದೆ.

ಭಾಗಲ್ಪುರಕ್ಕೆ ತೆರಳುತ್ತಿದ್ದ ಆಂಗ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂಬ ಮಾಹಿತಿ ಹರಡಿದೆ. ಇದರಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರು ಗಲಿಬಿಲಿಗೊಂಡಿದ್ದಾರೆ. ಅಷ್ಟೇ ಅಲ್ಲ, ಆತಂಕದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಜಿಗಿದಿದ್ದಾರೆ. ಆದರೆ, ದುರದೃಷ್ಟವಶಾತ್‌, ಮತ್ತೊಂದು ಕಡೆಯಿಂದ ಬರುತ್ತಿದ್ದ ಝಾಝಾ-ಅಸನೋಲ್‌ ರೈಲು ಅವರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಇನ್ನು ರೈಲು ಡಿಕ್ಕಿಯಾದ ರಭಸಕ್ಕೆ 12 ಜನರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹತ್ತಾರು ಜನ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಅಪಘಾತ ಸಂಭವಿಸುತ್ತಲೇ ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್‌ ವ್ಯವಸ್ಥೆಯನ್ನೂ ಮಾಡಲಾಗಿದೆ.


“ಕಲಝಾರಿಯಾ ರೈಲು ನಿಲ್ದಾಣದ ಬಳಿ ರೈಲೊಂದು ಪ್ರಯಾಣಿಕರ ಮೇಲೆ ಹರಿದಿದೆ. ಕತ್ತಲು ಇದ್ದರೂ ರೈಲ್ವೆ ಸಿಬ್ಬಂದಿಯು ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದುವರೆಗೆ 12 ಜನ ಮೃತಪಟ್ಟಿರುವ ಶಂಕೆ ಇದೆ. ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾಗುವ ಸಾಧ್ಯವಾಗಿದೆ. ಸಾವಿನ ಸಂಖ್ಯೆ ಇಷ್ಟೇ ಎಂದು ಈಗಲೇ ಹೇಳಲು ಆಗುವುದಿಲ್ಲ” ಎಂದು ಜಮ್ತಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:05 pm, Wed, 28 February 24