Fact Check: ಸೌದಿ ಅರೇಬಿಯಾ ಮಸೀದಿಗಳ ಒಳಗೆ ಇಫ್ತಾರ್ ನಿಷೇಧ? ಸತ್ಯಾಸತ್ಯತೆ ಏನು?

ಸೌದಿ ಅರೇಬಿಯಾದಲ್ಲಿ ಇನ್ನು ಮುಂದೆ ಮಸೀದಿಗಳಲ್ಲಿ ಇಫ್ತಾರ್ ನಡೆಯುವುದಿಲ್ಲ, ಕ್ರೌನ್ ಪ್ರಿನ್ಸ್ ಸಲ್ಮಾನ್ ನಿಷೇಧ ಹೇರಿದ್ದಾರೆ. ನಮಾಜ್ ಸಮಯದಲ್ಲಿ ಧಾರ್ಮಿಕ ಪ್ರವಚನಗಳನ್ನು ಕಡಿಮೆ ಮಾಡುವಂತೆ ಇಮಾಮ್‌ಗಳಿಗೆ ಆದೇಶಿಸಲಾಗಿದೆ ಎಂಬ ಟ್ವೀಟ್ ವೈರಲ್ ಆಗಿದ್ದು, ಇದರ ಸತ್ಯಾಸತ್ಯತೆ ಏನು? ಇಲ್ಲಿದೆ ಫ್ಯಾಕ್ಟ್ ಚೆಕ್

Fact Check: ಸೌದಿ ಅರೇಬಿಯಾ ಮಸೀದಿಗಳ ಒಳಗೆ ಇಫ್ತಾರ್ ನಿಷೇಧ? ಸತ್ಯಾಸತ್ಯತೆ ಏನು?
ವೈರಲ್ ಟ್ವೀಟ್​​ನ ಫ್ಯಾಕ್ಟ್ ಚೆಕ್
Follow us
ರಶ್ಮಿ ಕಲ್ಲಕಟ್ಟ
|

Updated on: Feb 28, 2024 | 7:57 PM

ಬೆಂಗಳೂರು ಫೆಬ್ರವರಿ 28: ಸೌದಿ ಅರೇಬಿಯಾದ (Saudi Arabia) ಮಸೀದಿಗಳಲ್ಲಿ ಇನ್ನು ಮುಂದೆ ಇಫ್ತಾರ್ (Iftar) ನಡೆಯುವುದಿಲ್ಲ. ಧಾರ್ಮಿಕ ಪ್ರವಚನಗಳನ್ನು ಕಡಿಮೆ ಮಾಡಲು ಇಮಾಮ್‌ಗಳನ್ನು ಕೇಳಲಾಯಿತು. ಹೀಗೆ ನಿಷೇಧ ಹೇರಿದ್ದು ಕ್ರೌನ್ ಪ್ರಿನ್ಸ್ ಸಲ್ಮಾನ್ (Crown Prince Salman) ಎಂದು ಇತ್ತೀಚೆಗೆ ಟಿವಿ ಪತ್ರಕರ್ತ ಪ್ರಖಾರ್ ಶ್ರೀವಾಸ್ತವ ಅವರು ಎಕ್ಸ್ ನಲ್ಲಿ ಬರೆದಿದ್ದು, ಅದು ವೈರಲ್ ಆಗಿತ್ತು. “ಸೌದಿ ಅರೇಬಿಯಾದಲ್ಲಿ ಇನ್ನು ಮುಂದೆ ಮಸೀದಿಗಳಲ್ಲಿ ಇಫ್ತಾರ್ ನಡೆಯುವುದಿಲ್ಲ, ಕ್ರೌನ್ ಪ್ರಿನ್ಸ್ ಸಲ್ಮಾನ್ ನಿಷೇಧ ಹೇರಿದ್ದಾರೆ. ನಮಾಜ್ ಸಮಯದಲ್ಲಿ ಧಾರ್ಮಿಕ ಪ್ರವಚನಗಳನ್ನು ಕಡಿಮೆ ಮಾಡುವಂತೆ ಇಮಾಮ್‌ಗಳಿಗೆ ಆದೇಶಿಸಲಾಗಿದೆ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.

ಸೌದಿ ಅರೇಬಿಯಾದಲ್ಲಿ ಹೀಗೊಂದು ಆದೇಶ ನೀಡಲಾಗಿದೆಯೇ? ಇದರ ಸತ್ಯಾಸತ್ಯತೆ ಏನು ಎಂದು ಹುಡುಕಿದಾಗ DFRAC ಫ್ಯಾಕ್ಟ್ ಚೆಕ್ ಸುದ್ದಿ ಸಿಕ್ಕಿದೆ.

ಫ್ಯಾಕ್ಟ್ ಚೆಕ್

DFRAC ತಂಡವು ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದಾಗ ನವ ಭಾರತ್ ಟೈಮ್ಸ್ ಮತ್ತು ಗಲ್ಫ್ ನ್ಯೂಸ್‌ನಿಂದ ಕೆಲವು ಮಾಧ್ಯಮ ವರದಿಗಳನ್ನು ಕಂಡುಹಿಡಿದಿದೆ. ಮಾಧ್ಯಮ ವರದಿಗಳ ಪ್ರಕಾರ, ರಂಜಾನ್‌ನಲ್ಲಿ ಸೂರ್ಯಾಸ್ತದ ಸಮಯದಲ್ಲಿ ನೀಡಲಾಗುವ ಇಫ್ತಾರ್ ಮಸೀದಿಗಳ ಒಳಗೆ ನಡೆಯಬಾರದು ಮತ್ತು ಬದಲಿಗೆ ಅಂಗಳದಲ್ಲಿ ಗೊತ್ತುಪಡಿಸಿದ ಸ್ಥಳದಲ್ಲಿ ನಡೆಸಬೇಕು. ಮಸೀದಿ ಸ್ವಚ್ಛವಾಗಿಡುವ ಉದ್ದೇಶದಿಂದ ಇದನ್ನು ಮಾಡಲಾಗಿದೆ.

ಇದಲ್ಲದೆ, ರಂಜಾನ್‌ನಲ್ಲಿ ನೀಡಲಾಗುವ ತರಾವೀಹ್ ಪ್ರಾರ್ಥನೆಯ ಸಮಯವನ್ನು ಹೆಚ್ಚಿಸುವುದನ್ನು ತಪ್ಪಿಸಲು ಮತ್ತು ಆರಾಧಕರಿಗೆ ಪ್ರಯೋಜನಕಾರಿಯಾದ ಧರ್ಮೋಪದೇಶಗಳನ್ನು ನೀಡಲು ಇಮಾಮ್‌ಗಳನ್ನು ಒತ್ತಾಯಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ವಿಶೇಷವಾಗಿ ಉಪವಾಸದ ನಿಯಮಗಳು ಮತ್ತು ಪವಿತ್ರ ತಿಂಗಳ ರಂಜಾನ್‌ನ ಅರ್ಹತೆಗಳನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಅಕ್ರಮ ಗಣಿಗಾರಿಕೆ ಪ್ರಕರಣ: ಅಖಿಲೇಶ್ ಯಾದವ್​​ಗೆ ಸಿಬಿಐ ಸಮನ್ಸ್

ವೈರಲ್ ಟ್ವೀಟ್ ತಪ್ಪು ಮಾಹಿತಿಯಿಂದ ಕೂಡಿದ್ದು

ಮಸೀದಿಗಳನ್ನು ಸ್ವಚ್ಛವಾಗಿಡಲು ಇಫ್ತಾರ್ ಕೂಟಗಳನ್ನು ನಡೆಸಬಾರದು ಮತ್ತು ರಂಜಾನ್‌ನಲ್ಲಿ ನೀಡಲಾಗುವ ತರಾವೀಹ್ ನಮಾಝಿನ ಸಮಯವನ್ನು ಹೆಚ್ಚಿಸುವುದನ್ನು ತಪ್ಪಿಸಲು ಇಮಾಮ್‌ಗಳನ್ನು ಒತ್ತಾಯಿಸಲಾಗಿದೆ ಎಂಬ ಟ್ವೀಟ್ ತಪ್ಪು ಮಾಹಿತಿಯಿಂದ ಕೂಡಿದ್ದಾಗಿದೆ ಎಂಬುದು ಇಲ್ಲಿ ಸ್ಪಷ್ಟ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್