ಫರೀದಾಬಾದ್‌ನ ಪಾಳುಬಿದ್ದ ಕಟ್ಟಡದಲ್ಲಿ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಲೈಂಗಿಕ ದೌರ್ಜನ್ಯ ನಡೆದ ಒಂದು ತಿಂಗಳ ನಂತರ 13 ವರ್ಷದ ಬಾಲಕಿಯೊಬ್ಬಳು ತನ್ನ ಕುಟುಂಬಕ್ಕೆ ಘಟನೆಯ ಬಗ್ಗೆ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಫರೀದಾಬಾದ್ ಪ್ರದೇಶದ ಪಾಳುಬಿದ್ದ ಕಟ್ಟಡವೊಂದರಲ್ಲಿ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಆಗಸ್ಟ್ 24ರಂದು ನಡೆದಿದೆ. ಬಾಲಕಿಯು ತನ್ನ ಟ್ಯೂಷನ್ ತರಗತಿ ಮುಗಿಸಿ 16 ವರ್ಷದ ಬಾಲಕನನ್ನು ಭೇಟಿಯಾಗಲು ತೆರಳಿದ್ದಾಗ, ಯುವಕರ ಗುಂಪೊಂದು ಅವರನ್ನು ತಡೆದು, ಬೆದರಿಕೆ ಹಾಕಿ ಕರೆದೊಯ್ದಿತ್ತು. ಅಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ.

ಫರೀದಾಬಾದ್‌ನ ಪಾಳುಬಿದ್ದ ಕಟ್ಟಡದಲ್ಲಿ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
Harassment

Updated on: Oct 03, 2026 | 10:45 PM

ಫರೀದಾಬಾದ್, ಅಕ್ಟೋಬರ್ 3: ಫರೀದಾಬಾದ್‌ನ ಪಾಳುಬಿದ್ದ ಕಟ್ಟಡವೊಂದರಲ್ಲಿ 13 ವರ್ಷದ ಬಾಲಕಿಯ ಮೇಲೆ ಯುವಕರ ಗುಂಪೊಂದು ಸಾಮೂಹಿಕ ಅತ್ಯಾಚಾರ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ನಾಲ್ಕನೇ ಆರೋಪಿಯ ಪತ್ತೆಗೆ ಜಾಲ ಬೀಸಲಾಗಿದೆ. ಬಂಧಿತ ಆರೋಪಿಗಳನ್ನು ಕುನಾಲ್, ಯಶ್ ಮತ್ತು ದೀಪಕ್ ಎಂದು ಗುರುತಿಸಲಾಗಿದೆ. ಗೆಳೆಯನನ್ನು ಭೇಟಿಯಾಗಲು ಹೋಗಿದ್ದ ಬಾಲಕಿ ವಾಪಾಸ್ ಬರುವಾಗ ಈ ಅತ್ಯಾಚಾರ ನಡೆದಿದೆ.

ದೂರಿನ ಪ್ರಕಾರ, ಈ ಘಟನೆಯು ಆಗಸ್ಟ್ 24ರಂದು ನಡೆದಿದೆ. ಬಾಲಕಿಯು ತನ್ನ ಟ್ಯೂಷನ್ ತರಗತಿ ಮುಗಿಸಿ 16 ವರ್ಷದ ಸ್ನೇಹಿತನನ್ನು ಭೇಟಿಯಾಗಲು ತೆರಳಿದ್ದಳು. ಇಬ್ಬರೂ ಅಪ್ರಾಪ್ತರು ಗ್ರೇಟರ್ ಫರೀದಾಬಾದ್ ಪ್ರದೇಶದಲ್ಲಿದ್ದಾಗ, ಯುವಕರ ಗುಂಪೊಂದು ಅವರನ್ನು ತಡೆದು, ಬೆದರಿಕೆ ಹಾಕಿ ಹತ್ತಿರದ ಶಿಥಿಲಗೊಂಡ ಕಟ್ಟಡಕ್ಕೆ ಕರೆದೊಯ್ದಿದೆ. ಅಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಶಾಲೆಗೆ ಹೋಗುತ್ತಿದ್ದಾಗ ರಾಜಸ್ಥಾನದ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಸೆಪ್ಟೆಂಬರ್ 28ರಂದು ದೂರು ಸ್ವೀಕರಿಸಲಾಗಿದ್ದು, ತಕ್ಷಣವೇ ತನಿಖೆ ಆರಂಭಿಸಿ ಸೆಪ್ಟೆಂಬರ್ 29ರಂದು ಎಫ್‌ಐಆರ್ ದಾಖಲಿಸಲಾಗಿದೆ. 6 ಯುವಕರ ಗುಂಪು ಇಬ್ಬರೂ ಅಪ್ರಾಪ್ತರನ್ನು ಹಿಂಬಾಲಿಸಿ, ಬೆದರಿಕೆ ಹಾಕಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಇಬ್ಬರೂ ಅಪ್ರಾಪ್ತರು ಸುಮಾರು ಒಂದು ತಿಂಗಳ ಕಾಲ ಈ ಘಟನೆಯನ್ನು ತಮ್ಮ ಕುಟುಂಬದಿಂದ ಮುಚ್ಚಿಟ್ಟಿದ್ದರು. ಬಾಲಕಿಯು ತೀವ್ರ ಮಾನಸಿಕ ಖಿನ್ನತೆ ಮತ್ತು ಒತ್ತಡದ ಲಕ್ಷಣಗಳನ್ನು ಹೊಂದಿರುವುದನ್ನು ಗಮನಿಸಿದ ತಾಯಿ ಪ್ರೀತಿಯಿಂದ ವಿಚಾರಿಸಿದಾಗ, ಬಾಲಕಿಯು ತನಗಾದ ದೌರ್ಜನ್ಯವನ್ನು ಬಹಿರಂಗಪಡಿಸಿದ್ದಾಳೆ. ತಕ್ಷಣವೇ ಕುಟುಂಬಸ್ಥರು ಪೋಲೀಸರನ್ನು ಸಂಪರ್ಕಿಸಿದ್ದಾರೆ.

ಇದನ್ನೂ ಓದಿ: ಚೆನ್ನೈನ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ

16 ವರ್ಷದ ಬಾಲಕನ ಮೇಲೆಯೂ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆದರೆ, ಈ ಆರೋಪವಿನ್ನೂ ದೃಢಪಟ್ಟಿಲ್ಲ ಮತ್ತು ತನಿಖೆ ಹಂತದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಸಂತ್ರಸ್ತರನ್ನು ಆ ಸ್ಥಳದಲ್ಲಿ ಬಂಧಿಸಿಡಲಾಗಿತ್ತು. ಆರೋಪಿಗಳಲ್ಲೊಬ್ಬ ಬಲವಂತವಾಗಿ ಅವರ ಬ್ಯಾಂಕ್ ಖಾತೆಯಿಂದ 10,000 ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ ಎಂಬ ಆರೋಪಗಳ ಕುರಿತೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us