ನ್ಯೂ ಇಯರ್ ಹಿಂದಿನ ದಿನ.. PoKಯಿಂದ ಗಡಿ ದಾಟಿ ಬಂದ ಪೋರನಿಗೆ ಸಿಕ್ತು ಭಾರತದ ರಾಜಾತಿಥ್ಯ

|

Updated on: Jan 08, 2021 | 11:53 PM

ಡಿಸೆಂಬರ್​ 31ರಂದು ಪಾಕ್​​ ಆಕ್ರಮಿತ ಕಾಶ್ಮೀರದಿಂದ ಅರಿವಿಲ್ಲದೆ LoC ಗಡಿ ದಾಟಿ ಬಂದ 14 ವರ್ಷದ ಪೋರನೊಬ್ಬನನ್ನು ಭಾರತೀಯ ಸೇನೆ ಪಾಕಿಸ್ತಾನದ ಅಧಿಕಾರಿಗಳಿಗೆ ಒಪ್ಪಿಸಿದೆ.

ನ್ಯೂ ಇಯರ್ ಹಿಂದಿನ ದಿನ.. PoKಯಿಂದ ಗಡಿ ದಾಟಿ ಬಂದ ಪೋರನಿಗೆ ಸಿಕ್ತು ಭಾರತದ ರಾಜಾತಿಥ್ಯ
ಅಲಿ ಹೈದರ್ (ಎಡ); ಬಾಲಕನನ್ನು ಪಾಕ್​ ಅಧಿಕಾರಿಗಳೊಂದಿಗೆ ಕಳುಹಿಸಿಕೊಟ್ಟ ಭಾರತೀಯ ಸೇನಾ ಸಿಬ್ಬಂದಿ
Follow us on

ದೆಹಲಿ: ಡಿಸೆಂಬರ್​ 31ರಂದು ಪಾಕ್​​ ಆಕ್ರಮಿತ ಕಾಶ್ಮೀರದಿಂದ (PoK) ಅರಿವಿಲ್ಲದೆ LoC ಗಡಿ ದಾಟಿ ಬಂದ 14 ವರ್ಷದ ಪೋರನೊಬ್ಬನನ್ನು ಭಾರತೀಯ ಸೇನೆ ಪಾಕಿಸ್ತಾನದ ಅಧಿಕಾರಿಗಳಿಗೆ ಒಪ್ಪಿಸಿದೆ.

14 ವರ್ಷದ ಬಾಲಕ ಅಲಿ ಹೈದರ್ ಡಿಸೆಂಬರ್ 31 ರಂದು ಸ್ಥಳದ ಅರಿವಿಲ್ಲದೆ ಪೂಂಚ್​ ಬಳಿಯಿರುವ ರಂಗರ್ ನಾಲಾದ ಬಳಿ ಗಡಿ ದಾಟಿ ಇತ್ತ ಬಂದಿದ್ದ. ಈ ವೇಳೆ, ಅಲಿ ಹೈದರ್​ನನ್ನು ವಶಕ್ಕೆ ಪಡೆದಿದ್ದ ಭಾರತೀಯ ಸೇನೆ ನಂತರ ಆತನ ಪರಿಸ್ಥಿತಿ ಅರಿತು ರಾಜಾತಿಥ್ಯ ನೀಡಿದೆ. ಬಳಿಕ, ಪೋರನಿಗೆ ಉಡುಗೊರೆಗಳನ್ನು ನೀಡಿ ಪಾಕಿಸ್ತಾನದ ಸೇನಾ ಅಧಿಕಾರಿಗಳೊಂದಿಗೆ ಇಂದು ಕಳುಹಿಸಿಕೊಟ್ಟಿದೆ.

ಗೋವಾ ಬೀಚ್​ನಲ್ಲಿ ಕುಳಿತು ಮದ್ಯ ಹೀರಿದರೆ 10 ಸಾವಿರ ದಂಡ!