ಕೊರೊನಾ ಎಫೆಕ್ಟ್, PUBG ಗೀಳು ಹತ್ತಿಸಿಕೊಂಡ ಬಾಲಕ ಆತ್ಮಹತ್ಯೆಗೆ ಶರಣಾದ

|

Updated on: Jul 13, 2020 | 2:02 PM

ಪಲಮನೇರು(ಚಿತ್ತೂರು): ಕೊರೊನಾ ಎಫೆಕ್ಟ್ ನಾನಾ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಬಾಲಕನೊಬ್ಬ ಮೊಬೈಲ್ ಚಟಕ್ಕೆ ಬಿದ್ದು, ಆಟ ಆಡಲು ಬೇರೆ ದಾರಿ ಕಾಣದೆ PUBG ಗೀಳು ಹತ್ತಿಸಿಕೊಂಡಿದ್ದಾನೆ. ಕೊನೆಗೆ ಆ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿತ್ತೂರು ಜಿಲ್ಲೆಯ ಪಲಮನೇರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಚಿತ್ತೂರು ಜಿಲ್ಲೆಯ ಪಲಮನೇರುನ ಶ್ರೀನಗರ ಕಾಲೊನಿಯಲ್ಲಿ 14 ವರ್ಷದ ಬಾಲಕ 10ನೇ ತರಗತಿyಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದ್ರೆ ಮನೆಹಾಳು PUBG ಗೀಳು ಹತ್ತಿಸಿಕೊಂಡಿದ್ದಾನೆ. ದಿನಾ ಅದೇ ವ್ಯಸನದಲ್ಲಿದ್ದಾನೆ. ತಂದೆಯ ಮೊಬೈಲ್ ಹಿಡಿದು ಇಡೀ ದಿನ […]

ಕೊರೊನಾ ಎಫೆಕ್ಟ್, PUBG ಗೀಳು ಹತ್ತಿಸಿಕೊಂಡ ಬಾಲಕ ಆತ್ಮಹತ್ಯೆಗೆ ಶರಣಾದ
Follow us on

ಪಲಮನೇರು(ಚಿತ್ತೂರು): ಕೊರೊನಾ ಎಫೆಕ್ಟ್ ನಾನಾ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಬಾಲಕನೊಬ್ಬ ಮೊಬೈಲ್ ಚಟಕ್ಕೆ ಬಿದ್ದು, ಆಟ ಆಡಲು ಬೇರೆ ದಾರಿ ಕಾಣದೆ PUBG ಗೀಳು ಹತ್ತಿಸಿಕೊಂಡಿದ್ದಾನೆ. ಕೊನೆಗೆ ಆ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿತ್ತೂರು ಜಿಲ್ಲೆಯ ಪಲಮನೇರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಚಿತ್ತೂರು ಜಿಲ್ಲೆಯ ಪಲಮನೇರುನ ಶ್ರೀನಗರ ಕಾಲೊನಿಯಲ್ಲಿ 14 ವರ್ಷದ ಬಾಲಕ 10ನೇ ತರಗತಿyಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದ್ರೆ ಮನೆಹಾಳು PUBG ಗೀಳು ಹತ್ತಿಸಿಕೊಂಡಿದ್ದಾನೆ. ದಿನಾ ಅದೇ ವ್ಯಸನದಲ್ಲಿದ್ದಾನೆ. ತಂದೆಯ ಮೊಬೈಲ್ ಹಿಡಿದು ಇಡೀ ದಿನ PUBG ಆಡುವುದೇ ಅವನ ಕೆಲಸವಾಗಿಬಿಟ್ಟಿದೆ. ಅಮ್ಮ ಅದಕ್ಕೆ ಅಡ್ಡ ಬಂದಿದ್ದಾರೆ. ಮಗಾ ದಿನಾ PUBG ಅಂದ್ರೆ ಹೇಗೋ.. ಅದನ್ನು ಬಿಟ್ಟುಬಿಡು ಎಂದು ಗದರಿಕೊಂಡಿದ್ದಾರೆ.

ತಿರುಪತಿ ಆಸ್ಪತ್ರೆಯಲ್ಲಿ ಬಾಲಕನ ಪ್ರಾಣಪಕ್ಷಿ ಹಾರಿಹೋಗಿದೆ
ಅಷ್ಟೇ ಸುಪುತ್ರ ಸೀದಾ ತನ್ನ ಕೊಠಡಿಗೆ ಹೋಗಿ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಹೆತ್ತವರ ಆಶೋತ್ತರಗಳಿಗೆ ತಣ್ಣೀರು ಎರಚಿದ್ದಾನೆ. ಸ್ವಲ್ಪ ಸಮಯದ ನಂತರ ಮನೆಯವರು ಹೋಗಿ ನೋಡಲಾಗಿ, ಬಾಲಕ ಫ್ಯಾನಿಗೆ ನೇಣು ಹಾಕಿಕೊಂಡು ನೇತಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಕುಣಿಕೆಯಿಂದ ಇಳಿಸಿದ ಮನೆಯವರು ಪಲಮನೇರು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲಿಂದ ಮುಂದಕ್ಕೆ ತಿರುಪತಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಿರುಪತಿ ಆಸ್ಪತ್ರೆಯಲ್ಲಿ ಬಾಲಕನ ಪ್ರಾಣಪಕ್ಷಿ ಹಾರಿಹೋಗಿದೆ.

Published On - 1:53 pm, Mon, 13 July 20