9 ವರ್ಷ ನಂತರ ‘ಅನಂತ’ ಸಂಪತ್ತಿನ ದೇಗುಲ ವಿವಾದ ಇತ್ಯರ್ಥ, ಸುಪ್ರೀಂ ಆದೇಶ ಏನು?

ಅನಂತಪದ್ಮನಾಭ ದೇಗುಲದಲ್ಲಿ ತಿರುವಾಂಕೂರು ರಾಜಮನೆತನಕ್ಕೆ ಸಭಾಹಿತ ಅಧಿಕಾರ ಅಂದ್ರೆ ಪೂಜೆ ನಡೆಸುವ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯೇ ಇನ್ನು ಮುಂದೆಯೂ ದೇವಾಲಯದ ಆಡಳಿತ ನೋಡಿಕೊಳ್ಳುತ್ತೆ ಎಂದು ಅನಂತಪದ್ಮನಾಭ ದೇಗುಲ ಬಗ್ಗೆ ಸುಪ್ರೀಂಕೋರ್ಟ್ ಇದೀಗತಾನೆ ಆದೇಶ ನೀಡಿದೆ. ದೇವಾಲಯಕ್ಕೆ ಆಡಳಿತಾತ್ಮಕ ಸಮಿತಿ ರಚಿಸಲು ಆದೇಶ ನೀಡಿರುವ ಸುಪ್ರೀಂ ಕೋರ್ಟ್, ತಿರುವನಂತಪುರಂ ಜಿಲ್ಲಾಧಿಕಾರಿ ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ ಎಂದು ತಿಳಿಸಿದೆ. 2009ರಲ್ಲಿ ಕೇರಳದ ತಿರುವನಂತಪುರದಲ್ಲಿರುವ ಶ್ರೀ ಅನಂತ ಪದ್ಮನಾಭ ಸ್ವಾಮಿಯ ಪುರಾತನ ದೇಗುಲದಲ್ಲಿ […]

9 ವರ್ಷ ನಂತರ ‘ಅನಂತ’ ಸಂಪತ್ತಿನ ದೇಗುಲ ವಿವಾದ ಇತ್ಯರ್ಥ, ಸುಪ್ರೀಂ ಆದೇಶ ಏನು?
sadhu srinath

|

Jul 13, 2020 | 12:48 PM

ಅನಂತಪದ್ಮನಾಭ ದೇಗುಲದಲ್ಲಿ ತಿರುವಾಂಕೂರು ರಾಜಮನೆತನಕ್ಕೆ ಸಭಾಹಿತ ಅಧಿಕಾರ ಅಂದ್ರೆ ಪೂಜೆ ನಡೆಸುವ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯೇ ಇನ್ನು ಮುಂದೆಯೂ ದೇವಾಲಯದ ಆಡಳಿತ ನೋಡಿಕೊಳ್ಳುತ್ತೆ ಎಂದು ಅನಂತಪದ್ಮನಾಭ ದೇಗುಲ ಬಗ್ಗೆ ಸುಪ್ರೀಂಕೋರ್ಟ್ ಇದೀಗತಾನೆ ಆದೇಶ ನೀಡಿದೆ.

ದೇವಾಲಯಕ್ಕೆ ಆಡಳಿತಾತ್ಮಕ ಸಮಿತಿ ರಚಿಸಲು ಆದೇಶ ನೀಡಿರುವ ಸುಪ್ರೀಂ ಕೋರ್ಟ್, ತಿರುವನಂತಪುರಂ ಜಿಲ್ಲಾಧಿಕಾರಿ ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ ಎಂದು ತಿಳಿಸಿದೆ.

2009ರಲ್ಲಿ ಕೇರಳದ ತಿರುವನಂತಪುರದಲ್ಲಿರುವ ಶ್ರೀ ಅನಂತ ಪದ್ಮನಾಭ ಸ್ವಾಮಿಯ ಪುರಾತನ ದೇಗುಲದಲ್ಲಿ ಅಗಾಧ ಪ್ರಮಾಣದ ಅತ್ಯಮೂಲ್ಯ ಸಂಪತ್ತು ಬಹಿರಂಗವಾಗಿತ್ತು. ಅದಾದ ಬಳಿಕ ‘ಅನಂತ’ ಸಂಪತ್ತಿನ ದೇಗುಲ ಯಾರಿಗೆ ಸೇರಬೇಕು ಎಂಬುದು ವಿವಾದದ ಗೂಡಾಗಿತ್ತು.

ಇನ್ನೂ ಓಪನ್ ಆಗಿಲ್ಲ ಒಂದು ಕೊಠಡಿ ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ ದೇಗುಲದಲ್ಲಿ 5 ಕೊಠಡಿಗಳಲ್ಲಿ 1 ಲಕ್ಷ ಕೋಟಿ ರೂ ಮೌಲ್ಯದ ಪುರಾತನ ಚಿನ್ನ ಬೆಳ್ಳಿ ವಜ್ರ ವೈಢೂರ್ಯ ಸಂಪತ್ತು ಪತ್ತೆಯಾಗಿತ್ತು. ಆದ್ರೆ ಇನ್ನೂ ಒಂದು ಕೊಠಡಿಯ ದ್ವಾರವನ್ನು ಇನ್ನೂ ತೆಗೆದು ಸಂಪತ್ತಿನ ಮೌಲ್ಯಮಾಪನ ನಡೆದಿಲ್ಲ. ಸುಪ್ರೀಂಕೋರ್ಟ್ ಅದಕ್ಕೆ ಈ ಹಿಂದೆ ತಡೆ ನೀಡಿದೆ.

2009ರಲ್ಲಿ ಮಾಜಿ IPS ಅಧಿಕಾರಿ ಟಿಪಿ ಸುಂದರರಾಜನ್ ಎಂಬುವವರು ಕೇರಳ ಹೈಕೋರ್ಟ್​ಗೆ ಮನವಿ ಸಲ್ಲಿಸಿ, ಅನಂತ ಪದ್ಮನಾಭ ಸ್ವಾಮಿ ದೇಗುಲದ ಮಾಲೀಕತ್ವವವನ್ನು ತಿರುವಾಂಕೂರು ರಾಜಮನೆತನದಿಂದ ವಾಪಸ್ ಪಡೆದು, ಕೇರಳ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಕೋರಿದ್ದರು. ಮಾಲೀಕತ್ವ ಮತ್ತು ಪೂಜೆ ಸಂಬಂಧ 1949ರಲ್ಲಿ ಭಾರತ ಸರ್ಕಾರ ಮತ್ತು ತಿರುವಾಂಕೂರು ರಾಜಮನೆತನ ಮಧ್ಯೆ ಒಪ್ಪಂದ ಏರ್ಪಟ್ಟಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada