ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ 150 ಸೇನಾ ಸಿಬ್ಬಂದಿಗೆ ಕೊರೊನಾ ಸೋಂಕು

| Updated By: KUSHAL V

Updated on: Dec 27, 2020 | 5:06 PM

ಗಣರಾಜ್ಯೋತ್ಸವ ಮತ್ತು ಜನವರಿ 15ರಂದು ಆಚರಿಸಲಾಗುವ ಸೇನಾ ದಿವಸ್​ದಂದು ಪಥಸಂಚಲನದಲ್ಲಿ ಭಾಗವಹಿಸಲು ದೇಶದ ವಿವಿಧೆಡೆಯಿಂದ ರಾಷ್ಟ್ರ ರಾಜಧಾನಿಗೆ ಆಗಮಿಸಿದ 150 ಸೇನಾ ಸಿಬ್ಬಂದಿಯಲ್ಲಿ ಲಕ್ಷಣ ರಹಿತ ಕೊರೊನಾ ಸೋಂಕು ಪತ್ತೆಯಾಗಿದೆ.

ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ 150 ಸೇನಾ ಸಿಬ್ಬಂದಿಗೆ ಕೊರೊನಾ ಸೋಂಕು
ಸಾಂಕೇತಿಕ ಚಿತ್ರ
Follow us on

ದೆಹಲಿ: ಗಣರಾಜ್ಯೋತ್ಸವ ಮತ್ತು ಜನವರಿ 15ರಂದು ಆಚರಿಸಲಾಗುವ ಸೇನಾ ದಿವಸ್​ದಂದು ಪಥಸಂಚಲನದಲ್ಲಿ ಭಾಗವಹಿಸಲು ದೇಶದ ವಿವಿಧೆಡೆಯಿಂದ ರಾಷ್ಟ್ರ ರಾಜಧಾನಿಗೆ ಆಗಮಿಸಿದ 150 ಸೇನಾ ಸಿಬ್ಬಂದಿಯಲ್ಲಿ ಲಕ್ಷಣ ರಹಿತ ಕೊರೊನಾ ಸೋಂಕು ಪತ್ತೆಯಾಗಿದೆ. ಹಾಗಾಗಿ, ಎಲ್ಲಾ 150 ಸಿಬ್ಬಂದಿ ಸೋಂಕಿಗೆ ಚಿಕಿತ್ಸೆ ಪಡೆದು ಕೊರೊನಾ ನೆಗೆಟಿವ್ ಎಂದು ವರದಿ ಬಂದ ನಂತರ  ಡಿಸ್ಚಾರ್ಜ್​ ಮಾಡಲಾಗುವುದು ಎಂಬ ಮಾಹಿತಿ ಸಿಕ್ಕಿದೆ.

ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸೇನಾ ಸಿಬ್ಬಂದಿಗೆ ಕೊವಿಡ್​ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ನವೆಂಬರ್ ಅಂತ್ಯದ ವೇಳೆಗೆ ದೆಹಲಿಗೆ ಆಗಮಿಸಿದ್ದ 2,000 ಸೇನಾ ಸಿಬ್ಬಂದಿಗೆ ಈಗಾಗಲೇ ಕೊರೊನಾ ಪರೀಕ್ಷೆ ನಡೆಸಿ ಪ್ರತ್ಯೇಕವಾಗಿ ಸೇಫ್​ ಬಬಲ್​ ವ್ಯವಸ್ಥೆಯಲ್ಲಿ ಇರಿಸಲಾಗಿದೆ. ಪ್ರತಿ ಸಿಬ್ಬಂದಿಗೂ ಕೊರೊನಾ ಪರೀಕ್ಷೆ ನಡೆಸಿ, ನೆಗೆಟಿವ್ ಬಂದವರಿಗೆ ಮಾತ್ರ ಪ್ರತ್ಯೇಕ ಸುರಕ್ಷತಾ ವಾಸ ಕಲ್ಪಿಸಲಾಗಿದೆ. ಕಂಟೇನ್ಮೆಂಟ್ ವಲಯದಲ್ಲಿರುವವರಿಗೆ ಜನವರಿ 26ರವರೆಗೂ ಪ್ರತ್ಯೇಕ ವಾಸ ನೀಡಲಾಗಿದೆ.

 

ಗಣರಾಜ್ಯೋತ್ಸವ ದಿನಾಚರಣೆಯಂದೇ ಅಯೋಧ್ಯಾ ಮಸೀದಿಗೆ ಶಂಕು ಸ್ಥಾಪನೆ; ಇದು ಬಾಬ್ರಿ ಮಸೀದಿಗಿಂತಲೂ ವಿಶಾಲ, ವಿಭಿನ್ನ