ಇರಾನ್: ನೌಕಾ ಸಮರಾಭ್ಯಾಸದ ವೇಳೆ ಅಚಾತುರ್ಯದಿಂದ ತನ್ನದೇ ಯುದ್ಧ ಹಡಗನ್ನು ಇರಾನ್ ಸ್ಫೋಟಿಸಿದೆ. ಪರಿಣಾಮ 19 ಇರಾನ್ ನಾವಿಕರು ದುರ್ಮರಣ ಹೊಂದಿದ್ದು, ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ.
ಒಮಾನ್ ಕೊಲ್ಲಿಯಲ್ಲಿ ಸೇನಾ ಅಭ್ಯಾಸ ನಡೆಸುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಯುದ್ಧ ಹಡಗು ಸಂಪೂರ್ಣವಾಗಿ ಧ್ವಂಸವಾಗಿದೆ. ಟೆಹ್ರಾನ್ನ 790 ಮೈಲಿ ದೂರದಲ್ಲಿರುವ ಜಾಸ್ಕ್ ಬಂದರಿನಲ್ಲಿ ಭಾನುವಾರ ಈ ಅವಘಡ ಸಂಭವಿಸಿದೆ.
ಈ ವರ್ಷದ ಜನವರಿಯಲ್ಲಿ ಉಕ್ರೇನ್ಗೆ ಸೇರಿದ ವಿಮಾನವನ್ನು ಇರಾನ್ ಹೊಡೆದುರುಳಿಸಿತ್ತು. ಈ ಘಟನೆಯಲ್ಲಿ ಕನಿಷ್ಠ 176 ಮಂದಿ ಮೃತಪಟ್ಟಿದ್ದರು. ನಂತರ ತನ್ನ ತಪ್ಪನ್ನು ಇರಾನ್ ಒಪ್ಪಿಕೊಂಡಿತ್ತು.
Published On - 5:00 pm, Mon, 11 May 20