15 ನಗರಗಳಿಗೆ ರೈಲು ಸಂಚಾರ ಶುರು! ಬುಕ್ಕಿಂಗ್ ಮಾಡೋದು ಹೇಗೆ?

ದೆಹಲಿ: ಲಾಕ್​ಡೌನ್​​ನಿಂದ ಜನರು ಬೆಂದು ಹೋಗಿದ್ದಾರೆ. ಕೊರೊನಾ ಕಾಟಕ್ಕೆ ಸಿಲುಕಿ ಕಕ್ಕಾಬಿಕ್ಕಿಯಾಗಿದ್ದಾರೆ. ಲಾಕ್​​ಡೌನ್​ ರಿಲೀಫ್ ಕೊಟ್ಟಿದ್ರು ಬಸ್​, ರೈಲು ಓಡಾಟವೇ ಇಲ್ಲದೇ ಕಂಗೆಟ್ಟಿದ್ದಾರೆ. ಒಂದೂರಿನಿಂದ ಒಂದೂರಿನ ಸಂಪರ್ಕಕ್ಕೆ ಬ್ರೇಕ್ ಬಿದ್ದಿದೆ. ಹಳಿ ಮೇಲೆ ಹೆಜ್ಜೆಯೂರ್ತಿದ್ದ ರೈಲು ಸೈಲೆಂಟಾಗೇ ನಿಂತಿದೆ. ಲಾಕ್​ಡೌನ್​ ವಿನಾಯಿತಿ ಕನ್ಫ್ಯೂಸ್​​​ ನಡುವೆ ಪ್ರಧಾನಿ ಮೋದಿ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಲಾಕ್​ಡೌನ್ ಬಳಿಕ ದೇಶದ ಜನರಿಗೆ ಮತ್ತೊಂದು ರಿಲೀಫ್! ಯೆಸ್​.. ದೇಶದಲ್ಲಿ ಅದೆಷ್ಟೋ ಜನರು ರೈಲ್ವೆ ಸಂಚಾರವನ್ನೇ ನಂಬಿಕೊಂಡಿದ್ರು. ರೈಲ್ವೆ ಸಂಚಾರವಿಲ್ಲದೇ ಅದೆಷ್ಟೋ […]

15 ನಗರಗಳಿಗೆ ರೈಲು ಸಂಚಾರ ಶುರು! ಬುಕ್ಕಿಂಗ್ ಮಾಡೋದು ಹೇಗೆ?
ಪ್ರಾತಿನಿಧಿಕ ಚಿತ್ರ
Follow us
ಸಾಧು ಶ್ರೀನಾಥ್​
|

Updated on:May 11, 2020 | 11:04 AM

ದೆಹಲಿ: ಲಾಕ್​ಡೌನ್​​ನಿಂದ ಜನರು ಬೆಂದು ಹೋಗಿದ್ದಾರೆ. ಕೊರೊನಾ ಕಾಟಕ್ಕೆ ಸಿಲುಕಿ ಕಕ್ಕಾಬಿಕ್ಕಿಯಾಗಿದ್ದಾರೆ. ಲಾಕ್​​ಡೌನ್​ ರಿಲೀಫ್ ಕೊಟ್ಟಿದ್ರು ಬಸ್​, ರೈಲು ಓಡಾಟವೇ ಇಲ್ಲದೇ ಕಂಗೆಟ್ಟಿದ್ದಾರೆ. ಒಂದೂರಿನಿಂದ ಒಂದೂರಿನ ಸಂಪರ್ಕಕ್ಕೆ ಬ್ರೇಕ್ ಬಿದ್ದಿದೆ. ಹಳಿ ಮೇಲೆ ಹೆಜ್ಜೆಯೂರ್ತಿದ್ದ ರೈಲು ಸೈಲೆಂಟಾಗೇ ನಿಂತಿದೆ. ಲಾಕ್​ಡೌನ್​ ವಿನಾಯಿತಿ ಕನ್ಫ್ಯೂಸ್​​​ ನಡುವೆ ಪ್ರಧಾನಿ ಮೋದಿ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ.

ಲಾಕ್​ಡೌನ್ ಬಳಿಕ ದೇಶದ ಜನರಿಗೆ ಮತ್ತೊಂದು ರಿಲೀಫ್! ಯೆಸ್​.. ದೇಶದಲ್ಲಿ ಅದೆಷ್ಟೋ ಜನರು ರೈಲ್ವೆ ಸಂಚಾರವನ್ನೇ ನಂಬಿಕೊಂಡಿದ್ರು. ರೈಲ್ವೆ ಸಂಚಾರವಿಲ್ಲದೇ ಅದೆಷ್ಟೋ ಕಾರ್ಮಿಕರು ನಡೆದೇ ಸಾಗಿದ್ರೂ. ದೂರದೂರಿನ ಪ್ರಯಾಣ ಮರೀಚಿಕೆಯಂತಾಗಿತ್ತು. ಆದ್ರೀಗ ಲಾಕ್​ಡೌನ್​​ನಿಂದ ಸಂಚಾರ ನಿಲ್ಲಿಸಿದ್ದ ಚುಕುಬುಕು ನಾಳೆಯಿಂದಲೇ ಹಳಿಗೆ ಮರಳಲಿದೆ. ಭಾರತೀಯ ರೈಲ್ವೆ ಸೇವೆ ನಾಳೆಯಿಂದಲೇ ಪುನಾರಂಭಗೊಳ್ಳಲಿದೆ.

ಅಬ್ಬಾ.. ನಾಳೆಯಿಂದ ರೈಲ್ವೆ ಓಡಾಟ ಆರಂಭವೇನೋ ಆಗುತ್ತೆ ಅಂತ ಜನರು ಖುಷ್ ಆಗಿದ್ದಾರೆ. ಅದ್ರಲ್ಲೂ ಹತ್ತಿರದ ಊರಿಗೆ ಹೋಗಿ ಬರ್ಬೋದು ಅಂತ ಪ್ಲ್ಯಾನ್ ಮಾಡ್ಕೊಳ್ಳೋಕು ಮುನ್ನ ಪ್ರಯಾಣಿಕರು ಸ್ವಲ್ಪ ಇದನ್ನ ಗಮನವಿಟ್ಟು ನೋಡಿ.

ದೆಹಲಿಯಿಂದ 15 ನಗರಗಳಿಗೆ ಸಂಚರಿಸಲಿದೆ ಟ್ರೇನ್! ಇನ್ನು, ಮಂಗಳವಾರದಿಂದ ರೈಲು ಸೇವೆ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೆಹಲಿಯಿಂದ ಪ್ರಮುಖ 15 ನಗರಗಳಿಗೆ ರೈಲ್ವೆ ಸೇವೆ ಆರಂಭವಾಗಲಿದೆ. ಮಂಗಳವಾರದ ನಂತರ ಹಂತ ಹಂತವಾಗಿ ರೈಲು ಸೇವೆ ಸ್ಟಾರ್ಟ್ ಮಾಡೋಕೆ ಮೋದಿ ಸರ್ಕಾರ ಪ್ಲ್ಯಾನ್ ಮಾಡಿದೆ. ಹಾಗಿದ್ರೆ, ಎಲ್ಲೆಲ್ಲಿಗೆ ರೈಲ್ವೆ ಓಡಾಟ ಆರಂಭಿಸಲಿದೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ಯಾವ್ಯಾವ ಕಡೆ ಟ್ರೇನ್ ಹೆಜ್ಜೆ ಇಡಲಿದೆ ಅನ್ನೋದನ್ನ ನೋಡೋದಾದ್ರೆ.

ರಾಷ್ಟ್ರ ರಾಜಧಾನಿ ದೆಹಲಿಯಿಂದ ಬೆಂಗಳೂರಿಗೆ ರೈಲು ಸಂಚರಿಸಲಿದೆ. ಇನ್ನು ದೆಹಲಿಯಿಂದ ಮುಂಬೈ, ದೆಹಲಿಯಿಂದ ಪಾಟ್ನಾಗೂ ಹಳಿ ಮೇಲೆ ರೈಲು ಓಡಾಡಲಿದೆ. ಜೊತೆಗೆ ದೆಹಲಿಯಿಂದ ಲಖನೌ, ದೆಹಲಿಯಿಂದ ತಿರುವನಂತಪುರ, ದೆಹಲಿಯಿಂದ ಚೈನ್ನೆಗೂ ರೈಲು ಸಂಚಾರ ಆರಂಭಿಸಲಿದೆ. ಇಷ್ಟೇ ಅಲ್ಲದೆ, ಸಿಕಂದರಬಾದ್, ಪಶ್ಚಿಮ ಬಂಗಾಳ, ಅಹಮದಾಬಾದ್, ಜಮ್ಮುವಿನ ತಾವಿ, ಅಗರ್ತಲಾ, ರಾಂಚಿ ಸೇರಿದಂತೆ ಒಟ್ಟು 15 ಪ್ರಮುಖ ನಗರಗಳಿಗೆ ರೈಲು ಸಂಚಾರ ಮಾಡಲಿದೆ.

ಇಂದಿನಿಂದ ಆನ್​​ಲೈನ್​ ಟಿಕೆಟ್​ ಬುಕಿಂಗ್ ಸ್ಟಾರ್ಟ್! ಇನ್ನು, ಕೊರೊನಾ ಹಿನ್ನೆಲೆಯಲ್ಲಿ ಕೌಂಟರ್​​ನಲ್ಲಿ ಟಿಕೆಟ್ ಮಾರಾಟ ಮಾಡದಿರಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇಂದಿನಿಂದಲೇ ಐಆರ್​ಸಿಟಿಸಿ ವೆಬ್​ಸೈಟ್​ ಮೂಲಕ ಟಿಕೆಟ್ ಬುಕಿಂಗ್​ಗೆ ಅವಕಾಶ ನೀಡಲಾಗಿದೆ.

ರೈಲಿನಲ್ಲಿ ಪ್ರಯಾಣಿಸುವ ಎಲ್ಲರಿಗೂ ಸ್ಕ್ರೀನಿಂಗ್​ ಮಾಡಲು ಪ್ಲ್ಯಾನ್! ಇನ್ನೊಂದೆಡೆ ರೈಲು ಪ್ರಯಾಣ ವೇಳೆ ಫೇಸ್ ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು ಮತ್ತು ಸ್ಕ್ರೀನಿಂಗ್ ಕಡ್ಡಾಯ ಎಂತಾ ಷರತ್ತು ವಿಧಿಸಲಾಗಿದೆ. ರೈಲ್ವೆ ಪ್ರಯಾಣಕ್ಕೂ ನಡೆಸುವ ಸ್ಕ್ರೀನಿಂಗ್​ನಲ್ಲಿ ರೋಗದ ಗುಣಲಕ್ಷಣಗಳು ಕಂಡು ಬಂದರೇ ಪ್ರಯಾಣದ ಅವಕಾಶವಿರಲ್ಲ. ಎಸಿ ಕೋಚ್​​​​​​ ಪ್ರಯಾಣ ಮತ್ತು ಸೀಮಿತ ನಿಲ್ದಾಣಗಳಲ್ಲಿ ನಿಲುಗಡೆ ಬಗ್ಗೆ ರೈಲ್ವೆ ಇಲಾಖೆ ಸದ್ಯದಲ್ಲೇ ಮಾಹಿತಿ ನೀಡಲಿದೆ.

ಮೇ 15 ರ ಬಳಿಕ ದೇಶಿಯ ವಿಮಾನ ಹಾರಾಟ? ಲಾಕ್​ಡೌನ್ 3.0 ಡೆಡ್​​ಲೈನ್ ಮುಗಿಯೋಕೆ ಒಂದು ವಾರ ಮುಂಚಿತವಾಗೇ ರೈಲ್ವೆ ಪ್ರಯಾಣಿಕರಿಗೆ ಕೇಂದ್ರ ಸಿಹಿ ಸುದ್ದಿ ನೀಡಿದೆ. ಇತ್ತ, ಮೇ 15 ಕ್ಕೂ ಮುಂಚಿತವಾಗಿ ದೇಶಿಯ ವಿಮಾನಯಾನ ಸಂಚಾರ ಸ್ಟಾರ್ಟ್ ಮಾಡೋಕೆ ಮೋದಿ ಸರ್ಕಾರ ತಯಾರಿ ನಡೆಸ್ತಿದೆ. ಈ ನಿಟ್ಟಿನಲ್ಲಿ ಹಲವು ಸಿದ್ಧತೆ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಯಾರಿ ನಡೀತಿದೆ. ದೇಶೀಯ ವಿಮಾನ ಸೇವೆ ಆರಂಭಿಸೋ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್‌ ಸಿಂಗ್ ಪೂರಿ ಈ ಹಿಂದೆಯೇ ಸುಳಿವು ಕೂಡ ನೀಡಿದ್ರು.

ಒಟ್ನಲ್ಲಿ, ಲಾಕ್​ಡೌನ್ ನಡುವೆ ಕಂಗೆಟ್ಟಿದ್ದ ಜನರಿಗೆ ಮೋದಿ ಸರ್ಕಾರ ಬಿಗ್ ಗಿಫ್ಟ್ ನೀಡಿದೆ. ಟ್ರೇನ್ ಸೇವೆ ಯಾವಾಗಪ್ಪ ಸ್ಟಾರ್ಟ್ ಆಗುತ್ತೆ ಅಂತಿದ್ದೋರ ಕನಸು ಕೊನೆಗೂ ಈಡೇರಿದೆ. ದೇಶದಲ್ಲಿ ಹಂತ ಹಂತವಾಗಿ ಕೊರೊನಾ ದಿಗ್ಬಂಧನಕ್ಕೆ ರಿಲೀಫ್ ಸಿಕ್ತಿರೋದು ಜನರ ಮೊಗದಲ್ಲಿ ಕೊಂಚ ಮಂದಹಾಸ ಮೂಡಿದೆ.

Published On - 9:01 am, Mon, 11 May 20

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!