News 9 Plus World Exclusive: 1993 ಸರಣಿ ಸ್ಫೋಟ: ಭಾರತಕ್ಕೆ ISI ಸ್ಫೋಟಕಗಳನ್ನು ತಂದಿದ್ದು ಹೇಗೆ?

|

Updated on: Mar 11, 2023 | 8:00 PM

12 ಸರಣಿ ಸ್ಫೋಟಗಳು ಬಾಂಬೆಯನ್ನು ಅಲುಗಾಡಿಸಿದವು. 257 ಜನರು ಈ ಸ್ಪೋಟದಲ್ಲಿ ಬಲಿಯಾಗಿದ್ದರು,1400 ಜನರು ಗಾಯಗೊಂಡರು. ಹಾಗಾದರೆ ಈ ಭಾರಿ ಸ್ಫೋಟಕಗಳು ಭಾರತಕ್ಕೆ ಬಂದದ್ದು ಹೇಗೆ?

News 9 Plus World Exclusive: 1993 ಸರಣಿ ಸ್ಫೋಟ: ಭಾರತಕ್ಕೆ ISI ಸ್ಫೋಟಕಗಳನ್ನು ತಂದಿದ್ದು ಹೇಗೆ?
1993 India Bomb Blast
Image Credit source: BBC
Follow us on

ಫೆಬ್ರವರಿ 2, 1993 ರ ಮಧ್ಯರಾತ್ರಿಯ ಹೊತ್ತಿಗೆ, ಗುರುತಿಸಲಾಗದ ವಾಣಿಜ್ಯ ಹಡಗು (Commercial Boat) ಬಂದು ಮುಂಬೈ (Mumbai) ನಿಂದ ಸುಮಾರು 100 ಕಿಮೀ ದಕ್ಷಿಣದಲ್ಲಿರುವ ರಾಯಗಡದ ಕರಾವಳಿಯನ್ನು ತಲುಪಿತು. ದಡದಲ್ಲಿ ಕಾಯುತ್ತಿದ್ದ ದಾವೂದ್ ಇಬ್ರಾಹಿಂ (Dawood Ibrahim), ಲೆಫ್ಟಿನೆಂಟ್ ಟೈಗರ್ ಮೆಮನ್, ಈ ಹಡಗನ್ನು ವಾಕಿ ಟಾಕಿ ಮೂಲಕ ಸಂಪರ್ಕಿಸಿದರು. ಈ ಹಡಗು ಒಂದು ಚಿಕ್ಕ ಮೋಟಾರು ದೋಣಿಯನ್ನು ರವಾನಿಸಿ, ಹಲವಾರು ಮರದ ಮತ್ತು ರಟ್ಟಿನ ಪೆಟ್ಟಿಗೆಗಳನ್ನು ಸಾಗಿಸಿತು. ಅಂದು ಈ ದೋಣಿ, ಹಡಗು ಮತ್ತು ತೀರದ ನಡುವೆ ಅನೇಕ ಬಾರಿ ಪ್ರಯಾಣ ಬೆಳೆಸಿತ್ತು.

ಒಂದು ತಿಂಗಳ ನಂತರ, 12 ಸರಣಿ ಸ್ಫೋಟಗಳು ಬಾಂಬೆಯನ್ನು ಅಲುಗಾಡಿಸಿದವು. 257 ಜನರು ಈ ಸ್ಪೋಟದಲ್ಲಿ ಬಲಿಯಾಗಿದ್ದರು,1400 ಜನರು ಗಾಯಗೊಂಡರು. ಬಾಕ್ಸ್‌ಗಳಲ್ಲಿ ಆರ್‌ಡಿಎಕ್ಸ್, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳಿದ್ದವು, ಇದನ್ನು ಪಾಕಿಸ್ತಾನ ಸೇನೆಯ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ) ನಗರಕ್ಕೆ ರವಾನಿಸಿತ್ತು.

ನ್ಯೂಸ್ 9 ಪ್ಲಸ್ ತನಿಖೆಯು ಆಗಿನ ಡೈರೆಕ್ಟರ್ ಜನರಲ್ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ISI) ಲೆಫ್ಟಿನೆಂಟ್ ಜನರಲ್ ಜಾವೇದ್ ನಾಸಿರ್ 1993 ರ ಸ್ಫೋಟಗಳ ಮಾಸ್ಟರ್ ಮೈಂಡ್ ಎಂದು ಬಹಿರಂಗಪಡಿಸಿದೆ. ಅಂದು ಸ್ಫೋಟಗಳನ್ನು ಮಿಲಿಟರಿ ಯೋಜಿಸಿದರೆ, ದಾವೂದ್ ಇಬ್ರಾಹಿಂ ಇದನ್ನು ಕಾರ್ಯ ರೂಪಕ್ಕೆ ತಂದನು. ಹಿಂದೆಂದೂ ಭಾರತ ಇಂತಹ ಭಯಾನಕ ಸ್ಫೋಟವನ್ನು ಕಂಡಿರಲಿಲ್ಲ.

ಅಂದು ಉಪಯೋಗಿಸಿದ್ದು 2 ಟನ್‌ಗಳಿಗಿಂತ ಹೆಚ್ಚು ಆರ್‌ಡಿಎಕ್ಸ್, 62 ಟೈಪ್ 56 ಅಸಾಲ್ಟ್ ರೈಫಲ್‌ಗಳು ಮತ್ತು 691 ಆರ್ಜಿಇಎಸ್ – ಹ್ಯಾಂಡ್ ಗ್ರೆನೇಡ್‌ಗಳು. TNT ಯಂತಹ ವಾಣಿಜ್ಯ ದರ್ಜೆಯ ಸ್ಫೋಟಕಗಳಿಗಿಂತ ಒಂದೂವರೆ ಪಟ್ಟು ಹೆಚ್ಚು ಶಕ್ತಿಯುತವಾದ ಸ್ಫೋಟಕವನ್ನು ಸೂಟ್‌ಕೇಸ್‌ಗಳಲ್ಲಿ ತುಂಬಿಸಿ ಹೋಟೆಲ್ ಕೋಣೆಗಳಲ್ಲಿ ತರಲಾಯಿತು. ಸಾಮಾನ್ಯ ಕಾರುಗಳು ಮತ್ತು ಸ್ಕೂಟರ್‌ಗಳನ್ನು ವಾಹನದ ಸುಧಾರಿತ ಸ್ಫೋಟಕ ಸಾಧನಗಳಾಗಿ (VBIEDs) ಪರಿವರ್ತಿಸಿ, ಅದರಿಂದ ಕಟ್ಟಡಗಳನ್ನು ಛಿದ್ರಗೊಳಿಸಲಾಯಿತು.

ಅಂದು RDX ಅನ್ನು ರಸ್ತೆಯ ಮೂಲಕ ನಗರಕ್ಕೆ ತರಲಾಯಿತು. ಆದರೆ ಭಯೋತ್ಪಾದಕರು ರಾಯಗಡದಿಂದ ಹೇಗೆ ಬಂದರು ಎಂಬುದು ಸ್ಫೋಟದ ಮೂವತ್ತು ವರ್ಷಗಳ ನಂತರವೂ ನಿಗೂಢವಾಗಿಯೇ ಉಳಿದಿದೆ. ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಎಂ.ಎನ್ ಸಿಂಗ್ ಅವರು ಸ್ಫೋಟದ ಬಗ್ಗೆ ಪೊಲೀಸರು ತನಿಖೆ ನಡೆಸಲಿಲ್ಲ ಎಂದು ಹೇಳುತ್ತಾರೆ. “ಇದನ್ನು ಮಾಡುವುದು ಕೇಂದ್ರ ಏಜೆನ್ಸಿಗಳ ಕೆಲಸ”. ಯಾವುದೇ ಏಜೆನ್ಸಿಗಳು ಈ ಪ್ರಶ್ನೆಗಳನ್ನು ಕೇಳಲಿಲ್ಲ ಎಂದು ವಿಚಾರಣೆಯಿಂದ ತಿಳಿದುಬಂದಿದೆ.

ಭಾರತೀಯ ನೌಕಾಪಡೆಯ ಮೆಟೀರಿಯಲ್‌ನ ಮಾಜಿ ಮುಖ್ಯಸ್ಥ ವೈಸ್ ಅಡ್ಮಿರಲ್ ಬಿ.ಎಸ್ ರಾಂಧವಾ ಹೇಳುವ ಪ್ರಕಾರ, “RDx ಮತ್ತು ನಂತರದ ಸ್ಫೋಟಗಳನ್ನು ಯೋಜಿಸಿದ ಮಾಸ್ಟರ್‌ಮೈಂಡ್ ಅನ್ನು ತನಿಖೆ ಮಾಡಬೇಕಿತ್ತು. ಈ ವ್ಯಕ್ತಿಯನ್ನು ಬಂಧಿಸುವುದು ಮತ್ತು ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ಇತರ ಭಯೋತ್ಪಾದಕರಿಗೆ ಸರಿಯಾದ ಪಾಠ ಕಲಿಸಿದಂತಾಗುತ್ತಿತ್ತು. ಐಎಸ್ಐ, ಎಲ್‌ಟಿಟಿಇ ಅಥವಾ ಯಾವುದೇ ಇತರ ಭಯೋತ್ಪಾದಕ ಸಂಘಟನೆಯ ಪ್ರವೃತ್ತಿ ನೋಡಿದರೆ ಭಾರತವು ಇದಕ್ಕೆ ಉತ್ತರಿಸಲೇ ಬೇಕಾದ ಸಮಯ ಬರುತ್ತದೆ.” ಎಂದು ಮಾಜಿ ವೈಸ್ ಅಡ್ಮಿರಲ್ ಬಿ.ಎಸ್ ರಾಂಧವಾ ಹೇಳಿದರು.

ಎಸ್. ಹುಸೇನ್ ಜೈದಿ ಅವರ ‘ಬ್ಲಾಕ್ ಫ್ರೈಡೇ’ ಪುಸ್ತಕದಲ್ಲಿ ‘ದೊಡ್ಡ ಕೆಂಪು ಸ್ಪೀಡ್ ಬೋಟ್’ ಸ್ಫೋಟಕಗಳನ್ನು ತಂದಿದೆ ಎಂದು ಬರೆದಿದ್ದರೆ. ಇದು ಅಸಂಭವವೆಂದು ತೋರುತ್ತದೆ, ಏಕೆಂದರೆ ‘ಸ್ಪೀಡ್‌ಬೋಟ್’ ಕರಾಚಿ ಮತ್ತು ರಾಯಗಡ ನಡುವಿನ 500 ಮೈಲಿಗಳನ್ನು ದಾಟಲು ಸಾಧ್ಯವಿಲ್ಲ. ಹಾಗೆಂದು ಪಾಕಿಸ್ತಾನದ ಮೇಲೆ ರಹಸ್ಯ ಮಿಲಿಟರಿ ದಾಳಿ ಮಾಡಿದರೆ ಪಾಕಿಸ್ತಾನ ಇಂದಿಗೂ ತಾವು ಈ ದಾಳಿಗೆ ಸ್ಪೋನ್ಸೆರ್ ಮಾಡಿದ್ದಾರೆ ಎಂದು ಒಪ್ಪಿಕೊಳ್ಳುವುದಿಲ್ಲ. ಅಂದು ಬಂದ ವ್ಯಾಪಾರೀ ಹಡಗು, ಪಾಕಿಸ್ತಾನಕ್ಕೆ ಸೇರಿದ್ದು ಎಂಬುದನ್ನು ತೆಗೆದು ಹಾಕುತ್ತದೆ.

ನ್ಯೂಸ್ 9 ವರದಿ ಪ್ರಕಾರ, ಲೆಫ್ಟಿನೆಂಟ್ ಜನರಲ್ ನಾಸಿರ್ LTTEಗೆ ಶಸ್ತ್ರಾಸ್ತ್ರ ಸಾಗಿಸಲು ಚಾನೆಲ್ ಒಂದನ್ನು ತೆರೆದಿದ್ದರು. 1993 ರ ಜನವರಿಯಲ್ಲಿ ಚೆನ್ನೈನಿಂದ ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‌ಗಳು ತಡೆಹಿಡಿದ MV ಅಹತ್, ISI ಒದಗಿಸಿದ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿತ್ತು. ಆದರೆ IPKF ಮಾಜಿ ಗುಪ್ತಚರ ಮುಖ್ಯಸ್ಥ ಕರ್ನಲ್ ಆರ್. ಹರಿಹರನ್, ಎಲ್‌ಟಿಟಿಇ ಒಳಗೊಳ್ಳುವಿಕೆಯನ್ನು ತಳ್ಳಿಹಾಕುತ್ತಾರೆ. “LTTE ಸ್ಫೋಟಕಗಳನ್ನು ಪೂರೈಸಲು ಸಾಧ್ಯವಿಲ್ಲ, ಏಕೆಂದರೆ ಅಂದು LTTE ಈಳಂ ಯುದ್ಧ-2 ಹೋರಾಟದಲ್ಲಿ ನಿರತವಾಗಿತ್ತು.”ಎಂಬುದು ಆರ್. ಹರಿಹರನ್ ವಾದ 

ಇದರ ಕುರಿತು ಮಾತನಾಡಿದ ವಿಆರ್ ಮ್ಯಾರಿಟೈಮ್ ಸರ್ವಿಸಸ್ ಪ್ರೈವೇಟ್‌ನ ಸಂಸ್ಥಾಪಕ ಮತ್ತು CEO ಕ್ಯಾಪ್ಟನ್ ಸಂಜಯ್ ಪರಾಶರ್, “ನನ್ನ ಅನುಮಾನ ISI ಸ್ಕ್ರ್ಯಾಪ್ ಆಗಬೇಕಿದ್ದ ಹಡಗನ್ನು ಬಳಸಿದೆ, ಆದ್ದರಿಂದ ಯಾವುದೇ ಕುರುಹು ಇಲ್ಲ. ಸ್ಪೋಟಕಗಳನ್ನು ಇಳಿಸಿ ದೋಣಿಗಳಿಗೆ ವರ್ಗಾಯಿಸಿ ನಂತರ ಸಾಗಿಸಲು ಗರಿಷ್ಠ ಅರ್ಧ ಗಂಟೆ ತೆಗೆದುಕೊಳ್ಳುತ್ತದೆ. ಈ ಶಸ್ತ್ರಾಸ್ತ್ರಗಳ ಸರಕುಗಳು ಹೇಗೆ ಬಂದವು ಎಂಬುದು 1993 ರಲ್ಲಿ ನಿಜವಾಗಿಯೂ ತನಿಖೆ ಮಾಡದ ಕೋನವಾಗಿದೆ. ಇದು ತನಿಖೆಯ ದೊಡ್ಡ ಲೋಪ ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ಏಕೆ ಯೋಚಿಸಲಿಲ್ಲ ಎಂದು ನಾನು ಆಶ್ಚರ್ಯ ಪಡುತ್ತೇನೆ, ”ಎಂದು ಕ್ಯಾಪ್ಟನ್ ಪರಾಶರ್ ಹೇಳುತ್ತಾರೆ.

1993 ರಲ್ಲಿ ಅಂತಹ ಭಾರಿ ಸ್ಫೋಟಕಗಳು ಭಾರತಕ್ಕೆ ಹೇಗೆ ಬಂತು ಎಂಬುದು ಇಂದಿಗೂ ಕಾಡುತ್ತಿರುವ ಅತಿ ದೊಡ್ಡ ಪ್ರಶ್ನೆ. ಕೆಲವರು ಪಾಕಿಸ್ತಾನದ LTTE ಸ್ಪೋಟಕಗಳನ್ನು ಭಾರತಕ್ಕೆ ಸಾಗಿಸಿದೆ ಎಂದರೇ ಇನ್ನು ಕೆಲವರು ಅದನ್ನು ಒಪ್ಪಲ್ಲು ಸಿದ್ದವಿಲ್ಲ. ಒಟ್ಟಿನಲ್ಲಿ ಅಂದೇ ಇದರ ಕುರಿತು ಭಾರತ ಸರ್ಕಾರ ಸರಿಯಾದ ತನಿಖೆ ನಡೆಸಿದ್ದರೆ ಈ ಪ್ರಶ್ನೆಗೆ ಉತ್ತರ ಸಿಗುತ್ತಿತ್ತೇನೋ ಎಂದು ನಾವು ಭಾವಿಸಬಹುದಷ್ಟೆ.