ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಸ್ತಾರ ವಿಮಾನದಲ್ಲಿ 2 ವರ್ಷದ ಮಗು ಏಕಾಏಕಿ ಉಸಿರಾಟ ನಿಲ್ಲಿಸಿಬಿಡ್ತು, ಮುಂದೇನಾಯ್ತು, ವಿವರ ಇಲ್ಲಿದೆ

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಸ್ತಾರ ವಿಮಾನದಲ್ಲಿ 2 ವರ್ಷದ ಮಗುವೊಂದು ಏಕಾಏಕಿ ಉಸಿರಾಟ ನಿಲ್ಲಿಸಿತ್ತು, ಪೋಷಕರು ಸೇರಿ ಎಲ್ಲರಲ್ಲೂ ಆತಂಕ ಮನೆಮಾಡಿತ್ತು. ಆದರೆ ವಿಮಾನದಲ್ಲಿ ಐವರು ವೈದ್ಯರು ಮಗುವಿನ ಪ್ರಾಣವನ್ನು ಕಾಪಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯನ್ನು ದೆಹಲಿಯ ಏಮ್ಸ್​ ಆಸ್ಪತ್ರೆ ದೃಢಪಡಿಸಿದೆ. ಮಗುವಿನ ಚಿತ್ರಗಳನ್ನು ಪೋಸ್ಟ್​ ಮಾಡಿದೆ.

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಸ್ತಾರ ವಿಮಾನದಲ್ಲಿ 2 ವರ್ಷದ ಮಗು ಏಕಾಏಕಿ ಉಸಿರಾಟ ನಿಲ್ಲಿಸಿಬಿಡ್ತು, ಮುಂದೇನಾಯ್ತು, ವಿವರ ಇಲ್ಲಿದೆ
ವೈದ್ಯರು
Image Credit source: India Today

Updated on: Aug 28, 2023 | 9:37 AM

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಸ್ತಾರ ವಿಮಾನದಲ್ಲಿ 2 ವರ್ಷದ ಮಗುವೊಂದು ಏಕಾಏಕಿ ಉಸಿರಾಟ ನಿಲ್ಲಿಸಿತ್ತು, ಪೋಷಕರು ಸೇರಿ ಎಲ್ಲರಲ್ಲೂ ಆತಂಕ ಮನೆಮಾಡಿತ್ತು. ಆದರೆ ವಿಮಾನದಲ್ಲಿ ಐವರು ವೈದ್ಯರು ಮಗುವಿನ ಪ್ರಾಣವನ್ನು ಕಾಪಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆಯನ್ನು ದೆಹಲಿಯ ಏಮ್ಸ್​ ಆಸ್ಪತ್ರೆ ದೃಢಪಡಿಸಿದೆ. ಮಗುವಿನ ಚಿತ್ರಗಳನ್ನು ಪೋಸ್ಟ್​ ಮಾಡಿದೆ.

ಇಂಡಿಯನ್ ಸೊಸೈಟಿ ಫಾರ್ ವಾಸ್ಕುಲರ್ ಅಂಡ್ ಇಂಟರ್ವೆನ್ಷನಲ್ ರೇಡಿಯಾಲಜಿ ವೈದ್ಯರ ತಂಡವು ಹಿಂದಿರುಗುತ್ತಿದ್ದಾಗ, ಹೀಗೆ ವಿಸ್ತಾರ ವಿಮಾನದಲ್ಲಿ ಮಗುವಿನ ಆರೋಗ್ಯದಲ್ಲಿ ಏರು ಪೇರಾಗಿರುವುದು ಕಂಡುಬಂತು. ವಿಮಾನದಲ್ಲಿದ್ದ ಐವರು ವೈದ್ಯರು ಮಗುವನ್ನು ಕಾಪಾಡಿದ್ದಾರೆ.
ವೈದ್ಯಕೀಯ ತುರ್ತುಸ್ಥಿತಿಯ ಕಾರಣ, ವಿಮಾನವನ್ನು ನಾಗ್ಪುರಕ್ಕೆ ತಿರುಗಿಸಲಾಯಿತು, ಅಲ್ಲಿ ಮಗುವನ್ನು ಮಕ್ಕಳ ವೈದ್ಯರಿಗೆ ಹಸ್ತಾಂತರಿಸಲಾಯಿತು.

ಮಗು ಬಂದಾಗ ನಾಡಿ ಮಿಡಿತವಿರಲಿಲ್ಲ, ಕೈಕಾಲುಗಳು ಕೂಡ ತಂಪಾಗಿದ್ದವು, ಮಗು ಉಸಿರಾಡುತ್ತಿರಲಿಲ್ಲ. 45 ನಿಮಿಷಗಳ ಬಳಿಕ ಮಗುವಿಗೆ ಉಸಿರು ಮತ್ತೆ ಬಂದಿತ್ತು.

ಶುಕ್ರವಾರ, ದೆಹಲಿಯಿಂದ ಟೇಕ್ ಆಫ್ ಆಗಿದ್ದ ಅಲಯನ್ಸ್ ಏರ್‌ನಿಂದ ಜಬಲ್‌ಪುರಕ್ಕೆ ಹೋಗುವ ವಿಮಾನವು 52 ವರ್ಷದ ಪ್ರಯಾಣಿಕ ಅನಾರೋಗ್ಯದ ನಂತರ ಜೈಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.

ಮತ್ತಷ್ಟು ಓದಿ: Air India: ದೆಹಲಿಯಿಂದ ಅಮೆರಿಕಕ್ಕೆ ಹೊರಟಿದ್ದ ಏರ್​ ಇಂಡಿಯಾ ವಿಮಾನ ಸ್ವೀಡನ್​ನಲ್ಲಿ ತುರ್ತು ಭೂಸ್ಪರ್ಶ

ಜೈಪುರ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದು, ಪ್ರಯಾಣಿಕನ ರಕ್ತದೊತ್ತಡ ಕಡಿಮೆಯಾಗುತ್ತಿತ್ತು ವಿಮಾನ ಕೆಳಗಿಳಿದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ