North Sikkim: ನಿರಂತರ ಮಳೆಯಿಂದ ಉತ್ತರ ಸಿಕ್ಕಿಂನಲ್ಲಿ ಸಿಲುಕಿಕೊಂಡ 2,000 ಪ್ರವಾಸಿಗರು

|

Updated on: Jun 17, 2023 | 2:58 PM

ಉತ್ತರ ಸಿಕ್ಕಿಂನಲ್ಲಿ ಗುರುವಾರದಿಂದ ನಿರಂತರ ಮಳೆ ಸುರಿಯುತ್ತಿದ್ದು, ರಸ್ತೆಗಳು ಮಳೆಗೆ ಕೊಚ್ಚಿಕೊಂಡು ಹೋಗಿದೆ, ಇದೀಗ ಉತ್ತರ ಸಿಕ್ಕಿಂನಲ್ಲಿ 2,000 ಕ್ಕೂ ಹೆಚ್ಚು ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಂಗ್ತೊಕ್: ಉತ್ತರ ಸಿಕ್ಕಿಂನಲ್ಲಿ (North Sikkim) ಗುರುವಾರದಿಂದ ನಿರಂತರ ಮಳೆ ಸುರಿಯುತ್ತಿದ್ದು, ರಸ್ತೆಗಳು ಮಳೆಗೆ ಕೊಚ್ಚಿಕೊಂಡು ಹೋಗಿದೆ, ಇದೀಗ ಉತ್ತರ ಸಿಕ್ಕಿಂನಲ್ಲಿ 2,000 ಕ್ಕೂ ಹೆಚ್ಚು ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಸಿಕ್ಕಿಂ ಜಿಲ್ಲಾ ಕೇಂದ್ರವಾದ ಮಂಗನ್‌ನಿಂದ ಚುಂಗ್‌ಥಾಂಗ್‌ಗೆ ಹೋಗುವ ರಸ್ತೆಯನ್ನು ಪೆಗಾಂಗ್ ಸಪ್ಲೈ ಖೋಲಾದಲ್ಲಿ ನಿರ್ಬಂಧಿಸಲಾಗಿದೆ, ವಾಹನ ಸಂಚಾರಕ್ಕೆ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಪರಿಣಾಮವಾಗಿ, 1,975 ದೇಶೀಯ ಮತ್ತು 36 ವಿದೇಶಿ ಪ್ರವಾಸಿಗರು ಲಾಚೆನ್ ಮತ್ತು ಲಾಚುಂಗ್ ಪ್ರದೇಶಗಳಲ್ಲಿನ ಹೋಟೆಲ್‌ಗಳಲ್ಲಿ ಸಿಲುಕಿಕೊಂಡಿದ್ದಾರೆ. ವಿದೇಶಿ ಪ್ರವಾಸಿಗರಲ್ಲಿ 23 ಮಂದಿ ಬಾಂಗ್ಲಾದೇಶದಿಂದ, 10 ಮಂದಿ ಅಮೆರಿಕದಿಂದ ಮತ್ತು ಮೂವರು ಸಿಂಗಾಪುರದಿಂದ ಬಂದಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Sikkim Avalanche: ಸಿಕ್ಕಿಂನಲ್ಲಿ ಭಾರಿ ಹಿಮಕುಸಿತ: 6 ಪ್ರವಾಸಿಗರು ಸಾವು

ಉತ್ತರ ಸಿಕ್ಕಿಂನ ವಿವಿಧ ಸ್ಥಳಗಳಲ್ಲಿ 345 ನಾಲ್ಕು ಚಕ್ರದ ವಾಹನಗಳು ಮತ್ತು 11 ಮೋಟರ್‌ಬೈಕ್‌ಗಳು ಸಿಲುಕಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆ ನಿಂತ ನಂತರ ರಸ್ತೆ ತೆರವು ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Sat, 17 June 23