Venkaiah Naidu: ನ್ಯಾಯಾಂಗವು ಶಾಸನ ಮಾಡಲು ಸಾಧ್ಯವಿಲ್ಲ: ವೆಂಕಯ್ಯ ನಾಯ್ಡು

ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು (Venkaiah Naidu) ಅವರು ಕಾನೂನು ರಚನೆಯಲ್ಲಿ ಶಾಸಕಾಂಗದ ಪ್ರಾಬಲ್ಯವನ್ನು ಎತ್ತಿಹಿಡಿದಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ ನ್ಯಾಯಾಂಗದ ಪಾತ್ರವಿರಬಾರದು ಎಂದು ಹೇಳಿದರು

Venkaiah Naidu: ನ್ಯಾಯಾಂಗವು ಶಾಸನ ಮಾಡಲು ಸಾಧ್ಯವಿಲ್ಲ: ವೆಂಕಯ್ಯ ನಾಯ್ಡು
ಎಂ ವೆಂಕಯ್ಯ ನಾಯ್ಡು
Follow us
ಅಕ್ಷಯ್​ ಪಲ್ಲಮಜಲು​​
|

Updated on:Jun 17, 2023 | 4:01 PM

ದೆಹಲಿ: ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು (Venkaiah Naidu) ಅವರು ಕಾನೂನು ರಚನೆಯಲ್ಲಿ ಶಾಸಕಾಂಗದ ಪ್ರಾಬಲ್ಯವನ್ನು ಎತ್ತಿಹಿಡಿದಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ ನ್ಯಾಯಾಂಗದ ಪಾತ್ರವಿರಬಾರದು ಎಂದು ಹೇಳಿದರು, ಅವರು ಇಂದು ಇಲ್ಲಿ ನಡೆದ ರಾಷ್ಟ್ರೀಯ ಶಾಸಕರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ಸಂವಿಧಾನವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಪಾತ್ರಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ ಮತ್ತು ಯಾರೂ “ತಾವು ಸರ್ವೋಚ್ಚ ಎಂದು ಭಾವಿಸಬಾರದು ಮತ್ತು ಅವರ ಮಿತಿಗಳನ್ನು ಮೀರಬಾರದು ಎಂದು ಹೇಳಿದರು.

ಶಾಸಕಾಂಗದ ಅಧಿಕಾರವನ್ನು ಶಾಸಕಾಂಗ ಸಂಸ್ಥೆಗಳಿಗೆ ಮಾತ್ರ ನೀಡಲಾಗಿದೆ. ಶಾಸನವು ಸಾಂವಿಧಾನಿಕ ನಿಬಂಧನೆಗೆ ಅನುಗುಣವಾಗಿರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸಲಿ. ಆದರೆ, ನ್ಯಾಯಾಲಯಗಳು ಕಾನೂನು ಮಾಡಲು ಸಾಧ್ಯವಿಲ್ಲ, ನ್ಯಾಯಾಂಗವು ಶಾಸನ ಮಾಡಲು ಸಾಧ್ಯವಿಲ್ಲ, ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.

ಶಾಸಕಾಂಗವು ನಿರ್ಧರಿಸುತ್ತದೆ, ಕಾರ್ಯಾಂಗವು ಕಾರ್ಯಗತಗೊಳಿಸುತ್ತದೆ ಮತ್ತು ಅಂತಿಮವಾಗಿ ಯಾರಾದರೂ ನಿಬಂಧನೆಗಳನ್ನು ಉಲ್ಲಂಘಿಸಿದರೆ ಒಬ್ಬರು ನ್ಯಾಯಾಲಯಕ್ಕೆ ಹೋಗಬಹುದು. ನ್ಯಾಯಾಂಗವು ಕ್ರಿಯಾತ್ಮಕವಾಗಿರಬೇಕು ಮತ್ತು ಪರಿಶೀಲನೆ ಮಾಡಿ ತಕ್ಷಣ ತೀರ್ಮಾನ ನೀಡಬೇಕು ಎಂದು ಹೇಳಿದರು.

ಸಂಸತ್ತು ಕಾನೂನು ಜಾರಿಗೊಳಿಸುವವರೆಗೆ ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು ತ್ರಿಸದಸ್ಯ ಸಮಿತಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಸಾಂವಿಧಾನಿಕ ಅಧಿಕಾರಗಳ ಪ್ರತ್ಯೇಕತೆಯ ಕುರಿತಾದ ಗದ್ದಲಕ್ಕೆ ಸಂಬಂಧಿಸಿದಂತೆ ಹಿನ್ನೆಲೆಯಲ್ಲಿ ವೆಂಕಯ್ಯ ನಾಯ್ಡು ಅವರು ಈ ಹೇಳಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: Venkaiah Naidu Birthday: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಶಾಸಕರಿಗೆ ನೀತಿ ಸಂಹಿತೆಯನ್ನು ರೂಪಿಸಬೇಕು ಮತ್ತು ಶಾಸಕಾಂಗ ಸಭೆಗಳು, ಸಂಸತ್ತಿನಲ್ಲಿ ಅಶಿಸ್ತಿನ ದೃಶ್ಯಗಳು, ಪೇಪರ್‌ಗಳನ್ನು ಹರಿದು ಹಾಕುವುದು ಮತ್ತು ಮೈಕ್‌ಗಳನ್ನು ಒಡೆಯುವು, ಈ ಎಲ್ಲ ಅಸ್ತಿನ ವರ್ತನೆಗಳನ್ನು ತಪ್ಪಿಸಬೇಕು ಎಂದು ಅವರು ಸಲಹೆ ನೀಡಿದರು.

ಸದನದಲ್ಲಿ ವಿರೋಧ, ಭಿನ್ನಾಭಿಪ್ರಾಯಗಳು ಇರಬಾರದು ಎಂದು ನಾನು ಹೇಳುವುದಿಲ್ಲ. ವಾಸ್ತವವಾಗಿ, ಪ್ರತಿಭಟನೆಗಳು, ಭಿನ್ನಾಭಿಪ್ರಾಯಗಳು, ಸಮ್ಮತಿ-ಭಿನ್ನಾಭಿಪ್ರಾಯಗಳು, ವಾದಗಳು, ಚರ್ಚೆಗಳು ನಮ್ಮ ಪ್ರಜಾಪ್ರಭುತ್ವದ ಲಕ್ಷಣಗಳಾಗಿವೆ ಎಂದು ಹೇಳಿದರು. ಆದರೆ ಪ್ರತಿಭಟನೆಯು ಘನತೆ ಮತ್ತು ಸಂಸದೀಯ ನಿಯಮಗಳಿಗೆ ಅನುಗುಣವಾಗಿರಬೇಕು. ನಮ್ಮ ನಡವಳಿಕೆಯು ಪರಸ್ಪರ ಗೌರವವನ್ನು ಆಧರಿಸಿರಬೇಕು ಮತ್ತು ವಿಧಾನಸಭೆಯಲ್ಲಿ ಚರ್ಚೆ, ಪ್ರತಿಭಟನೆಯ ಸಮಯದಲ್ಲಿ ಇದನ್ನು ನಿರಂತರವಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:54 pm, Sat, 17 June 23