Liquid cocaine: ಲಿಕ್ವಿಡ್ ಕೊಕೇನ್: ಭಾರತದಲ್ಲಿ ಡ್ರಗ್ಸ್ ಕಳ್ಳಸಾಗಣೆಗೆ ಹೊಸ ತಂತ್ರ?

ಇದೇ ರೀತಿಯ ಘಟನೆಯಲ್ಲಿ  ಕಳೆದ ವರ್ಷ ನವೆಂಬರ್‌ನಲ್ಲಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊಕೇನ್ ಅನ್ನು ದ್ರವದಲ್ಲಿ ಕರಗಿಸಿದ ಎರಡು ವಿಸ್ಕಿ ಬಾಟಲಿಗಳೊಂದಿಗೆ ನೈಜೀರಿಯಾದ ವ್ಯಕ್ತಿಯನ್ನು ಬಂಧಿಸಲಾಯಿತು.

Liquid cocaine: ಲಿಕ್ವಿಡ್ ಕೊಕೇನ್: ಭಾರತದಲ್ಲಿ ಡ್ರಗ್ಸ್ ಕಳ್ಳಸಾಗಣೆಗೆ ಹೊಸ ತಂತ್ರ?
ಪ್ರಾತಿನಿಧಿಕ ಚಿತ್ರ
Follow us
|

Updated on:Jun 17, 2023 | 5:09 PM

ಕಳ್ಳಸಾಗಣೆದಾರರು ಮತ್ತು ಭಾರತೀಯ ಕಾನೂನು ಅಧಿಕಾರಿಗಳ ನಡುವಿನ ಟಾಮ್ ಆಂಡ್ ಜೆರಿ ಕಾದಾಟದ  ನಡುವೆಯೇ ದ್ರವ ಕೊಕೇನ್ (liquid cocaine) ಮಾದಕವಸ್ತುಗಳ ಕಳ್ಳಸಾಗಣೆ (smuggling )ಎಗ್ಗಿಲ್ಲದೆ ನಡೆಯುತ್ತಿದ್ದು, ಇದು ಹೆಚ್ಚು ಜನಪ್ರಿಯವಾಗಿದೆ. ಗುರುವಾರ, 25 ವರ್ಷದ ಕೀನ್ಯಾದ ಮಹಿಳೆಯನ್ನು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಬಳಿಯಿದ್ದ ಎರಡು ವಿಸ್ಕಿ ಬಾಟಲಿಗಳಲ್ಲಿ ಕೊಕೇನ್ ಕರಗಿಸಿ ಕಳ್ಳಸಾಗಣೆ ಮಾಡುತ್ತಿದ್ದಾಗ ಬಂಧಿಸಲಾಯಿತು. ಅಡಿಸ್ ಅಬಾಬಾ (ಇಥಿಯೋಪಿಯಾ) ದಿಂದ ಬಂದ ಆರೋಪಿಯನ್ನು ತಡೆಹಿಡಿಯಲಾಗಿದ್ದು, ಹೆಚ್ಚಿನ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.

ಆಕೆಯಿಂದ ಸುಮಾರು ₹13 ಕೋಟಿ ಮೌಲ್ಯದ ಕೊಕೇನ್‌ನ ಕರಗಿಸಿರುವ ಎರಡು ವಿಸ್ಕಿ ಬಾಟಲಿಗಳು ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಕೊಕೇನ್ ಹೊಂದಿರುವ ವಿಸ್ಕಿ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್‌ನಲ್ಲಿ ವಿಸ್ಕಿ ಬಾಟಲಿಗಳಲ್ಲಿ ಮದ್ಯದೊಂದಿಗೆ ಕೊಕೇನ್ ಅನ್ನು ಬೆರೆಸಿ ಕಳ್ಳಸಾಗಣೆ ಮಾಡುತ್ತಿದ್ದ ಟಾಂಜೇನಿಯಾದ ವ್ಯಕ್ತಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಮತ್ತು ಕಸ್ಟಮ್ಸ್ ಮಾಹಿತಿ ಆಧರಿಸಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವರು ಕೂಡ ಅಡಿಸ್ ಅಬಾಬಾದಿಂದ ಆಗಮಿಸಿದ್ದರು.

ಇದೇ ರೀತಿಯ ಘಟನೆಯಲ್ಲಿ  ಕಳೆದ ವರ್ಷ ನವೆಂಬರ್‌ನಲ್ಲಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊಕೇನ್ ಅನ್ನು ದ್ರವದಲ್ಲಿ ಕರಗಿಸಿದ ಎರಡು ವಿಸ್ಕಿ ಬಾಟಲಿಗಳೊಂದಿಗೆ ನೈಜೀರಿಯಾದ ವ್ಯಕ್ತಿಯನ್ನು ಬಂಧಿಸಲಾಯಿತು. ಭಾರತಕ್ಕೆ ಹೀಗೆ ಮಾದಕ ವಸ್ತುಗಳನ್ನು ದ್ರವರೂಪದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದು, ಇದನ್ನು ಪತ್ತೆ ಹಚ್ಚವುದು ಕಷ್ಟವಾಗುತ್ತಿದೆ.

ಮುಂಬೈನ ಡಿಆರ್‌ಐ, ಅಕ್ರಮ ಮಾರುಕಟ್ಟೆಯಲ್ಲಿ ₹20 ಕೋಟಿ ಮೌಲ್ಯದ ‘ಲಿಕ್ವಿಡ್ ಕೊಕೇನ್’ ಇರುವ ಬಾಟಲಿಗಳನ್ನು ವಶಪಡಿಸಿಕೊಂಡಿದೆ. ನೈಜೀರಿಯಾದ ಲಾಗೋಸ್‌ನಿಂದ ಅಡಿಸ್ ಅಬಾಬಾ ಮೂಲಕ ಮುಂಬೈಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಂದ ಭಾರತಕ್ಕೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವ ಬಗ್ಗೆ ಡಿಆರ್‌ಐ ನಿರ್ದಿಷ್ಟ ಗುಪ್ತಚರ ಮಾಹಿತಿ ಹೊಂದಿತ್ತು. ಅದರಂತೆ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳ ತಂಡದಿಂದ ಕಣ್ಗಾವಲು ಇರಿಸಲಾಗಿತ್ತು.

ಏನಿದು ಲಿಕ್ವಿಡ್ ಕೊಕೇನ್?

ನೀರು ಅಥವಾ ಇತರ ದ್ರಾವಕಗಳನ್ನು ಬಳಸಿ ಕೊಕೇನ್   ಪುಡಿಯನ್ನು ಕರಗಿಸುವ ಮೂಲಕ ಲಿಕ್ವಿಡ್ ಕೊಕೇನ್ ಅನ್ನು ತಯಾರಿಸಲಾಗುತ್ತದೆ. ಹೀಗೆ ದ್ರವರೂಪದಲ್ಲಿರುವ ಅದನ್ನು ಮತ್ತೆ ಪುಡಿ ರೂಪಕ್ಕೆ ಪರಿವರ್ತಿಸಬಹುದು. ಕೊಕೇನ್ ಅದರ ಪುಡಿ ರೂಪಕ್ಕಿಂತ ಅದರ ದ್ರವ ರೂಪದಲ್ಲಿ ಪತ್ತೆ ಮಾಡುವುದು ಕಷ್ಟ. ಅಧಿಕಾರಿಗಳ ಪ್ರಕಾರ, ಈ ರೀತಿಯ ಕಳ್ಳಸಾಗಣೆ ಅಪರೂಪವಾಗಿದೆ. ಕೊಕೇನ್ ದುರ್ಬಳಕೆಯ ಅತ್ಯಂತ ಸಾಮಾನ್ಯವಾದ ಡ್ರಗ್ಸ್ ಆಗಿದ್ದು, ಗಡಿಯಿಂದಾಟೆ ಕೊಕೇನ್ ಅನ್ನು ಕಳ್ಳಸಾಗಣೆ ಮಾಡುವ ವಿಧ ವಿಧದ ವಿಧಾನಗಳನ್ನು ಬಳಸಲಾಗುತ್ತದೆ.

ಇದನ್ನೂ ಓದಿ: Udupi News: ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಮೂವರು ಕಾನೂನು ವಿದ್ಯಾರ್ಥಿಗಳು; ಇಬ್ಬರು ಅರೆಸ್ಟ್, ಓರ್ವ ಎಸ್ಕೇಪ್​​

ಅದನ್ನು ಪತ್ತೆ ಹಚ್ಚುವುದು ಹೇಗೆ?

ಯುಕೆ ಮತ್ತು ಸ್ವಿಟ್ಜರ್ಲೆಂಡ್ ಎರಡು ತಂತ್ರಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ಇದು ಕಸ್ಟಮ್ಸ್ ಅಧಿಕಾರಿಗಳಿಗೆ ಬಾಟಲಿಯನ್ನು ತೆರೆಯದೆಯೇ ಡ್ರಗ್ಸ್ ಇದೆ ಎಂದು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Sat, 17 June 23

ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​