ಆಂಧ್ರ ಪ್ರದೇಶ: 10 ಕೆಜಿಗೂ ಹೆಚ್ಚು ಕಳ್ಳಸಾಗಣೆ ಚಿನ್ನ ವಶಪಡಿಸಿದ DRI ಅಧಿಕಾರಿಗಳು

ಶನಿವಾರ ಡಿಆರ್‌ಐ ಬಿಡುಗಡೆ ಮಾಡಿದ ಪ್ರಕಟಣೆ ಪ್ರಕಾರ, ನಿರ್ದಿಷ್ಟ ಗುಪ್ತಚರ ಆಧಾರದ ಮೇಲೆ ಅಧಿಕಾರಿಗಳು ಬುಧವಾರ ರಾತ್ರಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ವೆಂಕಟಾಚಲಂ ಟೋಲ್ ಪ್ಲಾಜಾ ಬಳಿ ಹೆದ್ದಾರಿಯಲ್ಲಿ ಕಾರನ್ನು ತಡೆದರು

ಆಂಧ್ರ ಪ್ರದೇಶ: 10 ಕೆಜಿಗೂ ಹೆಚ್ಚು ಕಳ್ಳಸಾಗಣೆ ಚಿನ್ನ ವಶಪಡಿಸಿದ DRI ಅಧಿಕಾರಿಗಳು
ಕಳ್ಳಸಾಗಣೆಯಲ್ಲಿ ವಶಪಡಿಸಿದ ಚಿನ್ನ
Follow us
| Updated By: ರಶ್ಮಿ ಕಲ್ಲಕಟ್ಟ

Updated on:Jun 10, 2023 | 6:52 PM

ಹೈದರಾಬಾದ್: ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು 10.27 ಕೆಜಿ ಕಳ್ಳಸಾಗಣೆ(smuggled gold) ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಶನಿವಾರ ಡಿಆರ್‌ಐ ಬಿಡುಗಡೆ ಮಾಡಿದ ಪ್ರಕಟಣೆ ಪ್ರಕಾರ, ನಿರ್ದಿಷ್ಟ ಗುಪ್ತಚರ ಆಧಾರದ ಮೇಲೆ ಅಧಿಕಾರಿಗಳು ಬುಧವಾರ ರಾತ್ರಿ ಆಂಧ್ರಪ್ರದೇಶದ (Andhra Pradesh) ನೆಲ್ಲೂರು ಜಿಲ್ಲೆಯ ವೆಂಕಟಾಚಲಂ ಟೋಲ್ ಪ್ಲಾಜಾ ಬಳಿ ಹೆದ್ದಾರಿಯಲ್ಲಿ ಕಾರನ್ನು ತಡೆದರು. 7.798 ಕೆಜಿ ಕಳ್ಳಸಾಗಾಣಿಕೆ ವಿದೇಶಿ ಮೂಲದ ಚಿನ್ನವನ್ನು ಕಾರಿನ ಹಿಂಬದಿಯ ಸೀಟಿನಲ್ಲಿರುವ ಬಚ್ಚಿಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ತ್ವರಿತ ಕ್ರಮದಿಂದಾಗಿ ಹೈದರಾಬಾದ್‌ನಲ್ಲಿ ಈ ಕಳ್ಳಸಾಗಣೆ ಚಿನ್ನವನ್ನು ಸ್ವೀಕರಿಸುವವರನ್ನು ಗುರುತಿಸಲು ಮತ್ತು ಹೆಚ್ಚುವರಿ 2.471 ಕೆಜಿ ಕಳ್ಳಸಾಗಣೆ ಮಾಡಿದ ವಿದೇಶಿ ಚಿನ್ನವನ್ನು ವಶಪಡಿಸಿಕೊಳ್ಳಲು ಕಾರಣವಾಯಿತು.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಕ್ಯಾರಿಯರ್‌ಗಳು ಮತ್ತು ರಿಸೀವರ್ ಅನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:52 pm, Sat, 10 June 23