ಬೆಂಗಳೂರಿನಲ್ಲಿ ಫ್ರೀ ಕೋರ್ಸ್​​ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ; ಆಂಧ್ರಪ್ರದೇಶ ಮೂಲದ ಶ್ರೀನಿವಾಸಲು ಅರೆಸ್ಟ್

ಫ್ರೀ ಕೋರ್ಸ್​​ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿದ ಆರೋಪದ ಮೇಲೆ ಆಂಧ್ರಪ್ರದೇಶ ಮೂಲದ ಶ್ರೀನಿವಾಸಲುನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಫ್ರೀ ಕೋರ್ಸ್​​ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ; ಆಂಧ್ರಪ್ರದೇಶ ಮೂಲದ ಶ್ರೀನಿವಾಸಲು ಅರೆಸ್ಟ್
ಆರೋಪಿ ಶ್ರೀನಿವಾಸಲು
Follow us
ಕಿರಣ್ ಹನುಮಂತ್​ ಮಾದಾರ್
|

Updated on: Jun 01, 2023 | 3:19 PM

ಬೆಂಗಳೂರು: ಫ್ರೀ ಕೋರ್ಸ್​​ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿದ ಆಂಧ್ರಪ್ರದೇಶ(Andhra Pradesh) ಮೂಲದ ಶ್ರೀನಿವಾಸಲುನನ್ನು ಪೊಲೀಸರು ಬಂಧಿಸಿದ್ದಾರೆ. ಜಯನಗರ(Jayanagara)ದಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆದಿದ್ದ ಅರೋಪಿ ಶ್ರೀನಿವಾಸಲು, ಡೇಟಾ ಸೈನ್ಸ್​​ ಅನಲೈಸ್ ಹೆಸರಿನಲ್ಲಿ ಕೋರ್ಸ್​ ತೆರೆದಿದ್ದು, ಶಿಕ್ಷಣ ಸಂಸ್ಥೆಗೆ ಸುಮಾರು 2,500 ವಿದ್ಯಾರ್ಥಿಗಳು ದಾಖಲಾಗಿದ್ದರು. ಮಕ್ಕಳ ದಾಖಲಾತಿ ಪಡೆದು ಪ್ರವೇಶ​ ಮಾಡಿಸಿಕೊಂಡಿದ್ದ ಆರೋಪಿ. ದಾಖಲಾತಿ ಬಳಸಿ ಬ್ಯಾಂಕ್​​ನಲ್ಲಿ ಲೋನ್ ಮಾಡಿ, ನಂತರ ವಿದ್ಯಾರ್ಥಿಗಳ ಖಾತೆಗೆ ಬರುತ್ತಿದ್ದ ಲೋನ್​ ಹಣ ಪಡೆದುಕೊಳ್ಳುತ್ತಿದ್ದ. ಇದೀಗ ಲೋನ್ ಕಟ್ಟದೆ ಬ್ಯಾಂಕ್​ಗಳಿಗೆ ಶ್ರೀನಿವಾಸಲು ವಂಚನೆ ಮಾಡಿದ್ದ ಆರೋಪದ ಮೇಲೆ ಅರೆಸ್ಟ್​ ಮಾಡಲಾಗಿದೆ.

ಶ್ರೀನಿವಾಸಲು ವಿರುದ್ಧ ಸುಮಾರು 46 ವಿದ್ಯಾರ್ಥಿಗಳು ದೂರು

ಹೌದು ಆತನ ಬಂಡವಾಳ ವಿದ್ಯಾರ್ಥಿಗಳಿಗೆ ತಿಳಿಯುತ್ತಿದ್ದಂತೆ ಶ್ರೀನಿವಾಸಲು ವಿರುದ್ಧ ಸುಮಾರು 46 ವಿದ್ಯಾರ್ಥಿಗಳು ದೂರು ನೀಡಿದ್ದರು. ಈ ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿ, ತನಿಖೆ ವೇಳೆ ಸುಮಾರು 18 ಕೋಟಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಕೋಡಲೇ ಆರೋಪಿ ಶ್ರೀನಿವಾಸಲುನನ್ನ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ:Jacqueline Fernandez: 200 ಕೋಟಿ ರೂ. ವಂಚನೆ ಕೇಸ್​ನ ಚಿಂತೆ ಬಿಟ್ಟು ವಿದೇಶಕ್ಕೆ ಹಾರಲಿರುವ ಜಾಕ್ವೆಲಿನ್​ ಫರ್ನಾಂಡಿಸ್​

ಬೆಂಗಳೂರಿನಲ್ಲಿ ಪೊಲೀಸರ ಕಾರ್ಯಾಚರಣೆ; ಮಾದಕ ವಸ್ತು ಸೇವಿಸುತ್ತಿದ್ದ 18 ಜನ ಸೇರಿ 3 ಡ್ರಗ್ ಪೆಡ್ಲರ್​ಗಳ ಬಂಧನ

ಬೆಂಗಳೂರು: ರಾಜ್ಯ ಇತ್ತೀಚೆಗೆ ಡ್ರಗ್ಸ್​ , ಗಾಂಜಾ ಜಾಲಗಳು ಪತ್ತೆಯಾಗುತ್ತಿದ್ದು, ಈ ಹಿನ್ನಲೆ ಕಟ್ಟುನಿಟ್ಟಿನ ಕ್ರಮವಹಿಸಿದ್ದ ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು, ಡ್ರಗ್ಸ್ ದಂಧೆ ವಿರುದ್ಧ ವಿಶೇಷ ಕಾರ್ಯಾಚರಣೆ ಮಾಡಿದ್ದಾರೆ. ಹೌದು ಇಂದು(ಜೂ.1) ನಗರದ ವಿವಿಧೆಡೆ ದಾಳಿ ನಡೆಸಿದ್ದ ಪೊಲೀಸರು ಗಾಂಜಾ, ಇತರೆ ಮಾದಕ ವಸ್ತು ಸೇವಿಸುತ್ತಿದ್ದ 18 ಜನ ಸೇರಿ 3 ಡ್ರಗ್ ಪೆಡ್ಲರ್​ಗಳ ಬಂಧಿಸಿದ್ದಾರೆ. ಡ್ರಗ್​ ಪೆಡ್ಲರ್​ಗಳ ಬಳಿಯಿದ್ದ 2.5 ಕೆಜಿ ಗಾಂಜಾ, 11 ಗ್ರಾಂ ಎಂಡಿಎಂಎ, 7 ಗ್ರಾಂ ಹೈಡ್ರಾ ಮ್ಯಾಂಗೋ ವಶಕ್ಕೆ ಪಡೆದಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್