Love-Dhoka Case: ಕಾರವಾರದಲ್ಲೊಂದು ಪ್ರೀತಿ-ಪ್ರೇಮ-ವಂಚನೆ ಪ್ರಕರಣ, ಯುವಕನ ಮನೆ ಮುಂದೆ ಧರಣಿ ಕೂತ ಯುವತಿ!
ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ, ಅವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವ ಯುವತಿ ಎರಡು ದಿನಗಳಿಂದ ಅನ್ನ ನೀರಿಲ್ಲದೆ ಪ್ರತಿಭಟನೆ ಮಾಡುತ್ತಿದ್ದಾಳೆ.
ಕಾರವಾರ: ಇದು ಮತ್ತೊಂದು ಲವ್ (love), ಲೈಂಗಿಕ ಶೋಷಣೆ ಮತ್ತು ವಂಚನೆಯ (betrayal) ಕತೆ. ಇಲ್ಲಿ ಕೂತಿರುವ ಹಾವೇರಿಯ ಯುವತಿಯೊಬ್ಬಳು ಕಾರವಾರದ ಮುಂಡಗೋಡ ತಾಲ್ಲೂಕಿನ ಮೈನಳ್ಳಿಯ ಪ್ರಕಾಶ್ ಕಲಾಲ್ ಬದಶಂಕರ್ (Prakash Kalal Badashankar) ಹೆಸರಿನ ಯುವಕನಿಂದ ಮೋಸ ಹೋಗಿರುವುದಾಗಿ ಆರೋಪಿಸಿ ಅವನ ಮನೆಯ ಮುಂದೆ ಕೂತು ಮೌನವಾಗಿ ಪ್ರತಿಭಟಿಸುತ್ತಿದ್ದಾಳೆ. ಹಾವೇರಿಯ ರಾಣೆಬೆನ್ನೂರಿನಲ್ಲಿ ಅವರಿಬ್ಬರೂ ಯಾವುದೋ ಕೋರ್ಸಿನ ತರಬೇತಿಗೆ ಅಂತ ಹೋದಾಗ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿ ಅಂಕುರಿಸಿದೆ. ಯುವತಿಯ ಹೇಳುವ ಹಾಗೆ ಅವರಿಬ್ಬರು ಬೆಂಗಳೂರಿಗೆ ಹೋಗಿ ಸುತ್ತಾಡಿದ್ದಾರೆ ಮತ್ತು ಅಲ್ಲೇ ಅವರ ನಡುವೆ ದೈಹಿಕ ಸಂಬಂಧವೇರ್ಪಟ್ಟಿದೆ. ನಂತರ ಯುವತಿ ಮದುವೆ ಪ್ರಸ್ತಾಪ ಮಾಡಿದಾಗ, ಪ್ರಕಾಶ್, ನಿನ್ನೊಂದಿಗೆ ಟೈಂಪಾಸ್ ಮಾಡಿದ್ದು ಅನ್ನುತ್ತಿದ್ದಾನಂತೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ, ಅವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವ ಯುವತಿ ಎರಡು ದಿನಗಳಿಂದ ಅನ್ನ ನೀರಿಲ್ಲದೆ ಪ್ರತಿಭಟನೆ ಮಾಡುತ್ತಿದ್ದಾಳೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
