AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಠ್ಯಕ್ರಮದಿಂದ ಸಾವರ್ಕರ್ ಪಠ್ಯ ಕೈಬಿಡುವ ಕಾಂಗ್ರೆಸ್ ನಿರ್ಧಾರ ವ್ಯತಿರಿಕ್ತ ಪರಿಣಾಮ ಬೀರಲಿದೆ: ಮೊಮ್ಮಗ ರಂಜಿತ್

ಸಾಮಾಜಿಕ ಜಾಲತಾಣಗಳಲ್ಲಿ ಸಾವರ್ಕರ್ ಅವರ ಕುರಿತು ಸಾಕಷ್ಟು ಮಾಹಿತಿ ಲಭ್ಯವಾಗಿದೆ.ಸಾವರ್ಕರ್ ಸ್ಮಾರಕ್ ಅವರ ಸಾಹಿತ್ಯವನ್ನು ತಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.ನಾವು ಅವುಗಳನ್ನು ಕನ್ನಡದಲ್ಲೂ ಪ್ರಕಟಿಸುತ್ತಿದ್ದೇವೆ ಎಂದು ರಂಜಿತ್ ಹೇಳಿದ್ದಾರೆ.

ಪಠ್ಯಕ್ರಮದಿಂದ ಸಾವರ್ಕರ್ ಪಠ್ಯ ಕೈಬಿಡುವ ಕಾಂಗ್ರೆಸ್ ನಿರ್ಧಾರ ವ್ಯತಿರಿಕ್ತ ಪರಿಣಾಮ ಬೀರಲಿದೆ: ಮೊಮ್ಮಗ ರಂಜಿತ್
ರಂಜಿತ್ ಸಾವರ್ಕರ್
ರಶ್ಮಿ ಕಲ್ಲಕಟ್ಟ
|

Updated on:Jun 17, 2023 | 1:54 PM

Share

ಪಣಜಿ: ಶಾಲಾ ಪಠ್ಯಪುಸ್ತಕಗಳಿಂದ ಹಿಂದುತ್ವ ಸಿದ್ಧಾಂತವಾದಿ ವಿ.ಡಿ.ಸಾವರ್ಕರ್  (VD Savarkar) ಅವರ ಅಧ್ಯಾಯವನ್ನು ಕೈಬಿಡುವ ಕರ್ನಾಟಕದ ಕಾಂಗ್ರೆಸ್(Congress) ಸರ್ಕಾರದ ನಿರ್ಧಾರವು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅವರ ಮೊಮ್ಮಗ ರಂಜಿತ್ ಸಾವರ್ಕರ್ (Ranjit Savarkar) ಹೇಳಿದ್ದಾರೆ.  ಗೋವಾದಲ್ಲಿ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ರಂಜಿತ್ ಸಾವರ್ಕರ್, ಅಧ್ಯಾಯವನ್ನು ಅಳಿಸುವ ಮೂಲಕ ಸಾವರ್ಕರ್ ಬಗ್ಗೆ ಕಲಿಯುವ ವಿದ್ಯಾರ್ಥಿಗಳ ಅವಕಾಶವನ್ನು ಕಸಿದುಕೊಳ್ಳಬಹುದು ಎಂದು ಕಾಂಗ್ರೆಸ್ ಭಾವಿಸುತ್ತದೆ. ಆದರೆ ವಿದ್ಯಾರ್ಥಿಗಳು ತುಂಬಾ ತೀಕ್ಷ್ಣಮತಿಗಳು ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾವರ್ಕರ್ ಅವರ ಕುರಿತು ಸಾಕಷ್ಟು ಮಾಹಿತಿ ಲಭ್ಯವಾಗಿದೆ.ಸಾವರ್ಕರ್ ಸ್ಮಾರಕ್ ಅವರ ಸಾಹಿತ್ಯವನ್ನು ತಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.ನಾವು ಅವುಗಳನ್ನು ಕನ್ನಡದಲ್ಲೂ ಪ್ರಕಟಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಪಠ್ಯಕ್ರಮದಿಂದ ಅಧ್ಯಾಯವನ್ನು ಅಳಿಸಿದರೆ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ರಂಜಿತ್ ಸಾವರ್ಕರ್ ಹೇಳಿದ್ದಾರೆ.

ನೀವು ಯಾವುದನ್ನು ಹೆಚ್ಚು ನಿಗ್ರಹಿಸುತ್ತಿರೋ ಅದು ಹೆಚ್ಚು ಮರುಕಳಿಸುತ್ತದೆ ಎಂದು ನಾನು ಹೇಳುತ್ತೇನೆ. ಅದು ಸಹಜ ಪ್ರತಿಕ್ರಿಯೆ. ಪ್ರತಿಯೊಂದು ಕ್ರಿಯೆಯು ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆಯನ್ನು ಹೊಂದಿರುತ್ತದೆ ಎಂದು ಅವರು ನ್ಯೂಟನ್‌ನ ಮೂರನೇ ನಿಯಮವನ್ನು ಉಲ್ಲೇಖಿಸಿದರು.

ಇದನ್ನೂ ಓದಿ: ಕರ್ನಾಟಕದ ಶಾಲಾ ಪಠ್ಯಕ್ರಮದಿಂದ ಸಾವರ್ಕರ್, ಹೆಡ್ಗೆವಾರ್ ಪಠ್ಯಕ್ಕೆ ಕೊಕ್; ಈಗ ನಿಮ್ಮ ಸಿದ್ಧಾಂತ ಎಲ್ಲಿ ಹೋಯ್ತು?: ಉದ್ಧವ್ ಠಾಕ್ರೆ ವಿರುದ್ಧ ಫಡ್ನವೀಸ್ ವಾಗ್ದಾಳಿ

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಈ ಶೈಕ್ಷಣಿಕ ವರ್ಷಕ್ಕೆ ರಾಜ್ಯದಲ್ಲಿ 6 ರಿಂದ 10 ನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ಅನುಮೋದಿಸಿದ್ದು, ಆರೆಸ್ಸೆಸ್ ಸಂಸ್ಥಾಪಕ ಕೆಬಿ ಹೆಡ್ಗೆವಾರ್ ಮತ್ತು ವಿಡಿ ಸಾವರ್ಕರ್ ಸೇರಿದಂತೆ ಇತರರ ಅಧ್ಯಾಯಗಳನ್ನು ತೆಗೆದುಹಾಲು ನಿರ್ಧರಿಸಿದೆ. ಇದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:50 pm, Sat, 17 June 23