2015ರ ಡ್ರಗ್ಸ್ ಪ್ರಕರಣ: ಪಂಜಾಬ್ ಕಾಂಗ್ರೆಸ್ ಶಾಸಕ ಸುಖಪಾಲ್ ಖೈರಾಗೆ 14 ದಿನಗಳ ಜೈಲು ಶಿಕ್ಷೆ

|

Updated on: Sep 30, 2023 | 8:21 PM

2015ರ ಮಾರ್ಚ್‌ನಲ್ಲಿ ಫಜಿಲ್ಕಾದ ಜಲಾಲಾಬಾದ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸುಖಪಾಲ್ ಖೈರಾ ಅವರ ಆಪ್ತರೆಂದು ಹೇಳಲಾದ ಗುರುದೇವ್ ಸಿಂಗ್ ಸೇರಿದಂತೆ ಒಂಬತ್ತು ಜನರ ವಿರುದ್ಧ ಪ್ರಕರಣವನ್ನು ದಾಖಲಿಸಲಾಯಿತು. ಇದಾದ ನಂತರ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯಡಿಯಲ್ಲಿ ಶಿಕ್ಷೆ ವಿಧಿಸಲಾಯಿತು.

2015ರ ಡ್ರಗ್ಸ್ ಪ್ರಕರಣ: ಪಂಜಾಬ್ ಕಾಂಗ್ರೆಸ್ ಶಾಸಕ ಸುಖಪಾಲ್ ಖೈರಾಗೆ 14 ದಿನಗಳ ಜೈಲು ಶಿಕ್ಷೆ
ಸುಖಪಾಲ್ ಖೈರಾ
Follow us on

ಚಂಡೀಗಢ ಸೆಪ್ಟೆಂಬರ್ 30: 2015ರ ಡ್ರಗ್ಸ್ ಪ್ರಕರಣಕ್ಕೆ (2015 Drugs Case) ಸಂಬಂಧಿಸಿದಂತೆ ಪಂಜಾಬ್‌ನ (Punjab) ಫಜಿಲ್ಕಾ ಜಿಲ್ಲೆಯ ನ್ಯಾಯಾಲಯವು ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ (Sukhpal Khaira) ಅವರನ್ನು ಶನಿವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಬಿಗಿ ಭದ್ರತೆಯ ನಡುವೆ, ಸುಖಪಾಲ್ ಖೈರಾ ಅವರ ಎರಡು ದಿನಗಳ ಪೊಲೀಸ್ ಕಸ್ಟಡಿ ಶನಿವಾರ ಕೊನೆಗೊಂಡ ನಂತರ ಜಲಾಲಾಬಾದ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೋಲಾತ್ ಶಾಸಕ ಸುಖಪಾಲ್ ಖೈರಾ ಅವರನ್ನು ಚಂಡೀಗಢದ ನಿವಾಸದಲ್ಲಿ ಗುರುವಾರ ಬಂಧಿಸಲಾಗಿತ್ತು.

2015ರ ಡ್ರಗ್ಸ್ ಪ್ರಕರಣದಲ್ಲಿ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಸ್ವಪನ್ ಶರ್ಮಾ ನೇತೃತ್ವದ ವಿಶೇಷ ತನಿಖಾ ತಂಡ ನಡೆಸಿದ ತನಿಖೆಯ ನಂತರ ಪಂಜಾಬ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.

2015ರ ಮಾರ್ಚ್‌ನಲ್ಲಿ ಫಜಿಲ್ಕಾದ ಜಲಾಲಾಬಾದ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸುಖಪಾಲ್ ಖೈರಾ ಅವರ ಆಪ್ತರೆಂದು ಹೇಳಲಾದ ಗುರುದೇವ್ ಸಿಂಗ್ ಸೇರಿದಂತೆ ಒಂಬತ್ತು ಜನರ ವಿರುದ್ಧ ಪ್ರಕರಣವನ್ನು ದಾಖಲಿಸಲಾಯಿತು. ಇದಾದ ನಂತರ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯಡಿಯಲ್ಲಿ ಶಿಕ್ಷೆ ವಿಧಿಸಲಾಯಿತು.

ಪೊಲೀಸರು ಅವರಿಂದ 2 ಕೆಜಿ ಹೆರಾಯಿನ್, 24 ಚಿನ್ನದ ಬಿಸ್ಕತ್ತುಗಳು, ಒಂದು ದೇಶ ನಿರ್ಮಿತ ಪಿಸ್ತೂಲ್, .315-ಬೋರ್ ಪಿಸ್ತೂಲ್ ಮತ್ತು ಎರಡು ಪಾಕಿಸ್ತಾನಿ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ತನಿಖೆಯ ಸಮಯದಲ್ಲಿ ಸುಖಪಾಲ್ ಖೈರಾ ಹೆಸರು ಕೇಳಿ ಬಂದಿತ್ತು.

ಆದಾಗ್ಯೂ, 2017 ರಲ್ಲಿ, ಈ ಪ್ರಕರಣದಲ್ಲಿ ಹೆಚ್ಚುವರಿ ಆರೋಪಿಯಾಗಿ ಸಮನ್ಸ್ ಪಡೆದಿದ್ದ ಸುಖಪಾಲ್ ಖೈರಾ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆಯನ್ನು ಸುಪ್ರೀಂಕೋರ್ಟ್ ತಡೆಹಿಡಿಯಿತು. 2015 ರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ 2021 ರಲ್ಲಿ ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು. 2022ರಲ್ಲಿ ಅವರಿಗೆ ಜಾಮೀನು ನೀಡಲಾಗಿತ್ತು.

ಇದನ್ನೂ ಓದಿ: ಆದಿತ್ಯ ಎಲ್ 1 ಭೂಮಿಯಿಂದ 9.2 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿದೆ: ಇಸ್ರೋ

ಫೆಬ್ರವರಿ 2023 ರಲ್ಲಿ, ಡ್ರಗ್ಸ್ ಪ್ರಕರಣದಲ್ಲಿ ಸುಖಪಾಲ್ ಖೈರಾ ವಿರುದ್ಧದ ಸಮನ್ಸ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಪಂಜಾಬ್ ಕಾಂಗ್ರೆಸ್ ಸುಖಪಾಲ್ ಖೈರಾ ವಿರುದ್ಧದ ಪೊಲೀಸ್ ಕ್ರಮವನ್ನು ರಾಜಕೀಯ ಸೇಡು ಎಂದಿದ್ದು, ಇದನ್ನು ಆಡಳಿತಾರೂಢ ಆಮ್ ಆದ್ಮಿ ಪಕ್ಷ ನಿರಾಕರಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ