ಡ್ರಗ್ಸ್​ ಪ್ರಕರಣದಲ್ಲಿ ಪಂಜಾಬ್​ನ ಕಾಂಗ್ರೆಸ್​ ಶಾಸಕ ಸುಖ್ಪಾಲ್​ ಸಿಂಗ್ ಖೈರಾ ಬಂಧನ

ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂಯೆ ಪಂಜಾಬ್​ನ ಕಾಂಗ್ರೆಸ್​ ಶಾಸಕ ಸುಖ್ಪಾಲ್​ ಸಿಂಗ್​ರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಶೀಘ್ರದಲ್ಲೇ ಜಲಾಲಾಬಾದ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ. ಪಂಜಾಬ್‌ನ ಭುಲಾತ್‌ನ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೇಹ್ರಾ ಅವರನ್ನು ಜಲಾಲಾಬಾದ್ ಪೊಲೀಸರು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ.

ಡ್ರಗ್ಸ್​ ಪ್ರಕರಣದಲ್ಲಿ ಪಂಜಾಬ್​ನ ಕಾಂಗ್ರೆಸ್​ ಶಾಸಕ ಸುಖ್ಪಾಲ್​ ಸಿಂಗ್ ಖೈರಾ ಬಂಧನ
ಸುಖ್​ಪಾಲ್ ಸಿಂಗ್Image Credit source: Amarujala.com
Follow us
ನಯನಾ ರಾಜೀವ್
|

Updated on:Sep 28, 2023 | 8:31 AM

ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂಯೆ ಪಂಜಾಬ್​ನ ಕಾಂಗ್ರೆಸ್​ ಶಾಸಕ ಸುಖ್ಪಾಲ್​ ಸಿಂಗ್​ರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಶೀಘ್ರದಲ್ಲೇ ಜಲಾಲಾಬಾದ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ. ಪಂಜಾಬ್‌ನ ಭುಲಾತ್‌ನ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಜಲಾಲಾಬಾದ್ ಪೊಲೀಸರು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ.

ಜಲಾಲಾಬಾದ್ ಪೊಲೀಸರು ಚಂಡೀಗಢದಲ್ಲಿರುವ ಖೈರಾ ಅವರ ನಿವಾಸವನ್ನು ತಲುಪಿದ್ದಾರೆ. ಅವರ ವಿರುದ್ಧ ಹಳೆಯ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣವಿದ್ದು, ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಲಾಲಾಬಾದ್ ಪೊಲೀಸರು ಗುರುವಾರ ಮುಂಜಾನೆ ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಆರೋಪಿಸಿದ್ದಾರೆ. ಪೊಲೀಸರು 10 ಗಂಟೆಯ ಸುಮಾರಿಗೆ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಪೊಲೀಸರು ಅವರ ಮನೆಗೆ ಬಂದಿದ್ದಾಗ, ಖೈರಾ ಫೇಸ್​ಬುಕ್ ಲೈವ್ ಬಂದಿದ್ದರು. ಅದರಲ್ಲಿ ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿದ್ದರು. ವೀಡಿಯೋದಲ್ಲಿ ಅವರು ವಾರೆಂಟ್ ಕೇಳುವುದು ಮತ್ತು ಬಂಧನಕ್ಕೆ ಕಾರಣವೇನು ಎಂದು ಕೇಳುವುದನ್ನು ಕೇಳಬಹುದು.

ಮತ್ತಷ್ಟು ಓದಿ: ಉದ್ಯಮಿ ಕುಟುಂಬದ ಭೀಕರ ಆತ್ಮಹತ್ಯೆ ಪ್ರಕರಣ; ತೆಲಂಗಾಣ ಆಡಳಿತ ಪಕ್ಷ ಟಿಆರ್​ಎಸ್ ಶಾಸಕನ ಪುತ್ರ ವನಮಾ ರಾಘವೇಂದ್ರ ರಾವ್​ ಬಂಧನ

ಡಿಎಸ್​ಪಿ  ಜಲಾಲಾಬಾದ್ ಅಚ್ಚ್ರು ರಾಮ್ ಶರ್ಮಾ ಅವರು ಮಾತನಾಡಿ, ಖೈರಾರನ್ನು ಹಳೆಯ NDPS ಪ್ರಕರಣಕ್ಕಾಗಿ ಬಂಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಮತ್ತು ಬಂಧನವನ್ನು ವಿರೋಧಿಸುತ್ತದೆ ಎಂದು ಖೈರಾ ಹೇಳಿಕೊಂಡಿದ್ದಾರೆ. ಈ ನಡೆ ರಾಜಕೀಯ ಪ್ರೇರಿತ ಎಂದು ಅವರು ಆರೋಪಿಸಿದ್ದಾರೆ. ಮೂಲಗಳ ಪ್ರಕಾರ ಅವರನ್ನು ಜಲಾಲಾಬಾದ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:23 am, Thu, 28 September 23