ಕೇಂದ್ರ ಸರ್ಕಾರಿ ಉದ್ಯೋಗಕ್ಕೆ 8 ವರ್ಷಗಳಲ್ಲಿ 22 ಕೋಟಿ ಜನರಿಂದ ಅರ್ಜಿ; ಕೆಲಸ ಸಿಕ್ಕಿದ್ದು 7.22 ಲಕ್ಷ ಮಂದಿಗೆ ಮಾತ್ರ

| Updated By: ಸುಷ್ಮಾ ಚಕ್ರೆ

Updated on: Jul 28, 2022 | 12:43 PM

 2014 ಮತ್ತು 2022ರ ಅವಧಿಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ 22.05 ಕೋಟಿ ಜನ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿದಾರರ ಪೈಕಿ 7.22 ಲಕ್ಷ ಜನರನ್ನು ನೇಮಕಾತಿ ಏಜೆನ್ಸಿಗಳು ಶಿಫಾರಸು ಮಾಡಿರುವುದಾಗಿ ಲೋಕಸಭೆಗೆ ತಿಳಿಸಲಾಗಿದೆ.

ಕೇಂದ್ರ ಸರ್ಕಾರಿ ಉದ್ಯೋಗಕ್ಕೆ 8 ವರ್ಷಗಳಲ್ಲಿ 22 ಕೋಟಿ ಜನರಿಂದ ಅರ್ಜಿ; ಕೆಲಸ ಸಿಕ್ಕಿದ್ದು 7.22 ಲಕ್ಷ ಮಂದಿಗೆ ಮಾತ್ರ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಕಳೆದ 8 ವರ್ಷಗಳಿಂದ ದೇಶದ ಯುವಕರು ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ, ಸರ್ಕಾರದ ಎಲ್ಲ ವಿಭಾಗಗಳಲ್ಲೂ ಧಾವಿಸುತ್ತಲೇ ಇದ್ದರೂ, ಸ್ವೀಕರಿಸಿದ ಅರ್ಜಿಗಳಲ್ಲಿ ಶೇ 1ಕ್ಕಿಂತ ಕಡಿಮೆ ಅರ್ಜಿಗಳು ಆಯ್ಕೆಯಾಗಿವೆ. 2014 ಮತ್ತು 2022ರ ಅವಧಿಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ 22.05 ಕೋಟಿ ಜನ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿದಾರರ ಪೈಕಿ 7.22 ಲಕ್ಷ ಜನರನ್ನು ನೇಮಕಾತಿ ಏಜೆನ್ಸಿಗಳು ಶಿಫಾರಸು ಮಾಡಿರುವುದಾಗಿ ಲೋಕಸಭೆಗೆ ಬುಧವಾರ ತಿಳಿಸಲಾಗಿದೆ.

ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ನೀಡಿದ ಲಿಖಿತ ಉತ್ತರದ ಪ್ರಕಾರ, 2014-15ರಿಂದ 2021-22ರವರೆಗೆ ವಿವಿಧ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ನೇಮಕಾತಿಗಾಗಿ 7,22,311 ಅಭ್ಯರ್ಥಿಗಳನ್ನು ನೇಮಕಾತಿ ಏಜೆನ್ಸಿಗಳಿಂದ ಶಿಫಾರಸು ಮಾಡಲಾಗಿದೆ.

ಇವರಲ್ಲಿ 2021-22ರಲ್ಲಿ 38,850, 2020-21ರಲ್ಲಿ 78,555, 2019-20ರಲ್ಲಿ 1,47,096, 2018-19ರಲ್ಲಿ 38,100, 2017- 18ರಲ್ಲಿ 76,147, 2016-17ರಲ್ಲಿ 1,01,333, 2015-16ರಲ್ಲಿ 1,11,807, 2014-15ರಲ್ಲಿ 1,30,423 ಅರ್ಜಿಗಳು ಬಂದಿದ್ದವು. ಈ 8 ವರ್ಷಗಳ ಅವಧಿಯಲ್ಲಿ ಒಟ್ಟು 22,05,99,238 ಅರ್ಜಿಗಳು ಬಂದಿದ್ದವು.

ಇದನ್ನೂ ಓದಿ: Pralhad Joshi: ಸಂಸತ್ತಲ್ಲಿ ಜನರ ಸಮಸ್ಯೆ ಹೇಳಲು ಯಾರೂ ತಡೆಯಲ್ಲ, ರಚನಾತ್ಮಕ ಪ್ರತಿಪಕ್ಷಗಳಿಗೆ ಸದಾ ಸ್ವಾಗತ: ಸಂದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ

ಈ ಪೈಕಿ 2021-22ರಲ್ಲಿ 1,86,71,121, 2020-21ರಲ್ಲಿ 1,80,01,469, 2019-20ರಲ್ಲಿ 1,78,39,752, 2018-19ರಲ್ಲಿ 5,09,36,479, 2017-18ರಲ್ಲಿ 76,878, 2016-17ರಲ್ಲಿ 2,28,99,612, 2015-16ರಲ್ಲಿ 2,95,51,844 ಮತ್ತು 2014-15ರಲ್ಲಿ 2,32,22,083 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

“ಉದ್ಯೋಗವನ್ನು ಸುಧಾರಿಸುವುದರ ಜೊತೆಗೆ ಉದ್ಯೋಗಾವಕಾಶವನ್ನು ಹೆಚ್ಚಿಸುವುದು ಸರ್ಕಾರದ ಆದ್ಯತೆಯಾಗಿದೆ. ಅದರಂತೆ, ಭಾರತ ಸರ್ಕಾರವು ದೇಶದಲ್ಲಿ ಉದ್ಯೋಗಗಳನ್ನು ಹೆಚ್ಚಿಸಲು ವಿವಿಧ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಜಿತೇಂದ್ರ ಸಿಂಗ್ ಹೇಳಿದರು.

ಸರ್ಕಾರ ಜಾರಿಗೊಳಿಸುತ್ತಿರುವ ಪಿಎಲ್‌ಐ ಯೋಜನೆಗಳು 60 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಸಚಿವರು ಹೇಳಿದ್ದಾರೆ. PMMY ಅಡಿಯಲ್ಲಿ, ಸೂಕ್ಷ್ಮ/ಸಣ್ಣ ವ್ಯಾಪಾರ ಉದ್ಯಮಗಳು ಮತ್ತು ವ್ಯಕ್ತಿಗಳಿಗೆ ತಮ್ಮ ವ್ಯಾಪಾರ ಚಟುವಟಿಕೆಗಳನ್ನು ಸ್ಥಾಪಿಸಲು ಅಥವಾ ವಿಸ್ತರಿಸಲು ಅನುವು ಮಾಡಿಕೊಡಲು 10 ಲಕ್ಷ ರೂ.ವರೆಗೆ ಸಾಲಗಳನ್ನು ವಿಸ್ತರಿಸಲಾಗಿದೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Railway Recruitment 2022: SSLC ಪಾಸಾದವರಿಗೆ ರೈಲ್ವೇಯಲ್ಲಿದೆ ಉದ್ಯೋಗಾವಕಾಶ

2020ರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಆತ್ಮನಿರ್ಭರ್ ಭಾರತ್ ರೋಜ್​ಗಾರ್ ಯೋಜನೆ (ABRY)ಯನ್ನು ಹೊಸ ಉದ್ಯೋಗ ಸೃಷ್ಟಿಗೆ ಉದ್ಯೋಗದಾತರನ್ನು ಉತ್ತೇಜಿಸಲು ಮತ್ತು ಸಾಂಕ್ರಾಮಿಕ ಸಮಯದಲ್ಲಿ ಉದ್ಯೋಗ ನಷ್ಟವನ್ನು ಮರುಸ್ಥಾಪಿಸಲು ಪ್ರಾರಂಭಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಇದಿಷ್ಟು ಮಾತ್ರವಲ್ಲದೆ, ಸರ್ಕಾರದ ವಿವಿಧ ಪ್ರಮುಖ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್-ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ ಮಿಷನ್, ನಗರ ಪರಿವರ್ತನೆಗಾಗಿ ಅಟಲ್ ಮಿಷನ್, ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ (PMEGP) ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎಸ್), ಮುಂತಾದವುಗಳಲ್ಲಿ ಕೂಡ ಉದ್ಯೊಗ ಅವಕಾಶಗಳನ್ನು ನೀಡಲಾಗುತ್ತಿದೆ.