AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pralhad Joshi: ಸಂಸತ್ತಲ್ಲಿ ಜನರ ಸಮಸ್ಯೆ ಹೇಳಲು ಯಾರೂ ತಡೆಯಲ್ಲ, ರಚನಾತ್ಮಕ ಪ್ರತಿಪಕ್ಷಗಳಿಗೆ ಸದಾ ಸ್ವಾಗತ: ಸಂದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ

Rahul Gandhi Tweet: ಸಂಸತ್ ನಲ್ಲಿ ಚರ್ಚಗೆ ಅವಕಾಶ ನೀಡುತ್ತಿಲ್ಲ ಎನ್ನುವ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದ್ದಾರೆ.

Pralhad Joshi: ಸಂಸತ್ತಲ್ಲಿ ಜನರ ಸಮಸ್ಯೆ ಹೇಳಲು ಯಾರೂ ತಡೆಯಲ್ಲ, ರಚನಾತ್ಮಕ ಪ್ರತಿಪಕ್ಷಗಳಿಗೆ ಸದಾ ಸ್ವಾಗತ: ಸಂದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ
ಸಂಸತ್ತಲ್ಲಿ ಜನರ ಸಮಸ್ಯೆ ಹೇಳಲು ಯಾರೂ ತಡೆಯಲ್ಲ, ರಚನಾತ್ಮಕ ಪ್ರತಿಪಕ್ಷಗಳಿಗೆ ಸದಾ ಸ್ವಾಗತ: ಸಂದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ
TV9 Web
| Edited By: |

Updated on:Jul 19, 2022 | 5:32 PM

Share

ನವದೆಹಲಿ: ಸಂಸತ್ ನಲ್ಲಿ ಚರ್ಚಗೆ ಅವಕಾಶ ನೀಡುತ್ತಿಲ್ಲ ಎನ್ನುವ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದ್ದಾರೆ. ಸಂಸತ್ ನಲ್ಲಿ ಚರ್ಚೆಗೆ ಯಾವುದೇ ನಿರ್ಬಂಧಗಳು ಇಲ್ಲ. 1975 ರಲ್ಲಿ ಮಾತ್ರ ಜನರ ವಿಷಯ ಪ್ರಸ್ತಾಪಿಸಲು ಸಂಸತ್ ನಲ್ಲಿ ನಿರ್ಬಂಧ ಇತ್ತು. ರಚನಾತ್ಮಕ ವಿರೋಧ ಪಕ್ಷಗಳ ಉತ್ತಮ ಚರ್ಚೆಗೆ ಯಾವಾಗಲೂ ಸ್ವಾಗತವಿರುತ್ತದೆ ಎಂದು ಟ್ವೀಟರ್ ಮೂಲಕ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಬೆಲೆ ಏರಿಕೆ ವಿರುದ್ಧ ಟೀಕಿಸಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ರೂಪಾಯಿ ಮೌಲ್ಯ ಡಾಲರ್ ಎದುರು 80 ರೂಪಾಯಿ ದಾಟಿದೆ. ಎಲ್.ಪಿ.ಜಿ. ಸಿಲಿಂಡರ್ ಬೆಲೆ ಒಂದು ಸಾವಿರ ರೂಪಾಯಿ ದಾಟಿದೆ. ಜೂನ್ ತಿಂಗಳಲ್ಲಿ 1.3 ಕೋಟಿ ನಿರುದ್ಯೋಗ ಇದೆ. ದವಸ ಧಾನ್ಯಗಳ ಮೇಲೂ ಜಿ.ಎಸ್.ಟಿ. ಹಾಕಲಾಗಿದೆ. ಜನರ ವಿಷಯ ಪ್ರಸ್ತಾಪಿಸಲು ನಮ್ಮನ್ನು ಯಾರೂ ತಡೆಯಲಾಗಲ್ಲ. ಸರ್ಕಾರ ಉತ್ತರ ಕೊಡಲೇಬೇಕು. ಸಂಸತ್ ನಲ್ಲಿ ಚರ್ಚೆ, ಪ್ರಶ್ನೆಗಳಿಂದ ಓಡಿ ಹೋಗುವುದು ಅಸಂಸದೀಯ ಪ್ರಧಾನ ಮಂತ್ರಿಗಳೇ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ​ ಕಿಡಿಕಾರಿದ್ದರು.

ಪ್ರಲ್ಹಾದ ಜೋಶಿ ಟ್ವೀಟ್

ರಾಹುಲ್ ಗಾಂಧಿ ಟ್ವೀಟ್

Published On - 5:04 pm, Tue, 19 July 22