PT Usha: ಕೇಂದ್ರ ಸಚಿವ ಪ್ರಲ್ಹಾದ ಜೋಶಿಯ ಭೇಟಿಯಾಗಿ ಕೃತಜ್ಞತೆ ಅರ್ಪಿಸಿದ ನೂತನ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ
Pralhad Joshi: ಸಂಸತ್ ಭವನದ ಕೇಂದ್ರ ಸಚಿವರ ಕಚೇರಿಯಲ್ಲಿ ನಡೆದ ಈ ಸೌಜನ್ಯದ ಭೇಟಿ ವೇಳೆ ಪಿಟಿ ಉಷಾ ಅವರು ಕೇಂದ್ರ ಸಚಿವರಿಗೆ ಧನ್ಯವಾದ ಅರ್ಪಿಸಿದರು. ಈ ವೇಳೆ ಪ್ರಲ್ಹಾದ ಜೋಶಿಯವರು ಪಿ.ಟಿ. ಉಷಾ ಅವರನ್ನು ಅಭಿನಂದಿಸಿದರು.
ರಾಜ್ಯಸಭಾ ಸದಸ್ಯರಾಗಿ ನೂತನವಾಗಿ ನಾಮನಿರ್ದೇಶನಗೊಂಡ “ಒಲಿಂಪಿಕ್ಸ್ ರಾಣಿ” (Queen of Olympics) ಪಿ.ಟಿ. ಉಷಾ (PT Usha) ಇಂದು ನವದೆಹಲಿಯ ಸಂಸತ್ ಭವನದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರನ್ನು (Union Minister Pralhad Joshi) ಭೇಟಿಯಾಗಿ ಚರ್ಚೆ ನಡೆಸಿದರು.
ಸಂಸತ್ ಭವನದ ಕೇಂದ್ರ ಸಚಿವರ ಕಚೇರಿಯಲ್ಲಿ ನಡೆದ ಈ ಸೌಜನ್ಯದ ಭೇಟಿ ವೇಳೆ ಪಿಟಿ ಉಷಾ ಅವರು ಕೇಂದ್ರ ಸಚಿವರಿಗೆ ಧನ್ಯವಾದ ಅರ್ಪಿಸಿದರು. ಈ ವೇಳೆ ಪ್ರಲ್ಹಾದ ಜೋಶಿಯವರು ಪಿ.ಟಿ. ಉಷಾ ಅವರನ್ನು ಅಭಿನಂದಿಸಿದರು.
ಪಿ.ಟಿ. ಉಷಾ ಅವರು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ನ್ಯಾಯ ಸಲ್ಲಿಸುವ ನಿಟ್ಟಿನಲ್ಲಿ ತಮ್ಮ ಕರ್ತವ್ಯಗಳನ್ನು ಹೃದಯಪೂರ್ವಕವಾಗಿ ಹಾಗೂ ಅಷ್ಟೇ ಸರಾಗವಾಗಿ ನೆರವೇರಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಆಶಾಭಾವ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟ್ವೀಟ್:
Met newly nominated #RajyaSabha member @PTUshaOfficial ji, the "Queen of Olympics" in my office in Parliament.
Just like conquering the track, sprint queen #ptusha will undoubtedly serve the nation whole-heartedly and smoothly!#oathtaking pic.twitter.com/wG4Phwlqg2
— Pralhad Joshi (@JoshiPralhad) July 19, 2022
Published On - 4:18 pm, Tue, 19 July 22