ಶಿವಾಜಿಯಂತೆ ಹಿಂದೂ ಸಾಮ್ರಾಜ್ಯ ಕಟ್ಟಿದ ಮೋದಿ ಭಾರತವನ್ನ ಶ್ರೇಷ್ಠ ದೇಶವಾಗಿ ಮಾಡುತ್ತಿದ್ದಾರೆ: ಸಿಎಂ ಬೊಮ್ಮಾಯಿ
ಆದಿಲ್ ಶಾಹಿಗಳ ಮಧ್ಯೆ ಹೆಚ್ಚು ಧೈರ್ಯ ಶೌರ್ಯದಿಂದ ಹೋರಾಡಿ ಮೊಗಲ್ ಸಾಮ್ರಾಜ್ಯ ಬರದಂತೆ ಮಾಡಿ ಹಿಂದೂ ಸಾಮ್ರಾಜ್ಯ ಕಟ್ಟಿದವರು ಶಿವಾಜಿ. ನಮ್ಮ ಸ್ವಾಭಿಮಾನದಲ್ಲಿ ನಮ್ಮ ಅಸ್ತಿತ್ವವಿದೆ. ನಮ್ಮ ಪೂರ್ವಜರು ಮಾಡಿದ ಹೋರಾಟದಿಂದ ನಮಗೆ ಅಸ್ಮಿತೆ ಇದೆ. ಇವತ್ತು ನರೇಂದ್ರ ಮೋದಿಯಿಂದ ಅಭಿವೃದ್ಧಿ ಪರ್ವ ಶುರುವಾಗಿದೆ. ಜಗತ್ತಿನಲ್ಲಿ ಶ್ರೇಷ್ಠ ದೇಶವನ್ನ ಮಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದರು.

ಬೆಂಗಳೂರು: ರಾಜ್ಯ ಮರಾಠ ಅಭಿವೃದ್ಧಿ ನಿಗಮದ ಕಚೇರಿ, ಲಾಂಛನ ಉದ್ಘಾಟನೆ (Marata development corporation) ಕಾರ್ಯಕ್ರಮಕ್ಕೆ ಅರಮನೆ ಮೈದಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಚಾಲನೆ ನೀಡಿದರು. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಮರಾಠ ಜನರು ಇವತ್ತು ಲವಲವಿಕೆಯಿಂದ ಭಾರೀ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಿ. ಈ ಸಮಾಜವನ್ನ ಗುರುತಿಸುವಂತಹ ಕೆಲಸವನ್ನ ನಮ್ಮ ನಿಕಟಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾಡಿದ್ದಾರೆ. ಉತ್ತಮವಾದ ಚರಿತ್ರೆ ಇರುವ ಯಾವುದೇ ದೇಶಕ್ಕೂ ಭವಿಷ್ಯವಿದೆ. ಅಂತಹ ಉತ್ತಮವಾದ ಭವಿಷ್ಯ ನಮ್ಮ ಭಾರತಕ್ಕೆ ಇದೆ. ಹಿಂದೂ ಸಾಮ್ರಾಜ್ಯಕ್ಕಾಗಿ ಛತ್ರಪತಿ ಶಿವಾಜಿ ಹೋರಾಡಿದ್ದಾರೆ. ಮರಾಠ ಸಮಾಜ ಗಟ್ಟಿಗೊಳಿಸಿದ್ರೆ ದೇಶವನ್ನ ಗಟ್ಟಿಗೊಳಿಸಿದಂತೆ. ಮರಾಠ ಅಭಿವೃದ್ಧಿ ನಿಗಮ ಮಾಡಿ ಋಣ ತೀರಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ದೊಡ್ಡ ಬದಲಾವಣೆಯಾಗಿರೋದು ನೋಡಿದ್ದೇವೆ. ಅಷ್ಟೇ ಪ್ರಾಬಲ್ಯ ಇಲ್ಲೂ ಸಿಗಬೇಕು ಅಂತಾ ನಿಗಮ ಮಾಡಿದ್ದೇವೆ. ಬೋರ್ವೆಲ್, ಶಿಕ್ಷಣ, ಉದ್ಯೋಗ, ಮಹಿಳೆಯರ ಸಬಲೀಕರಣಕ್ಕಾಗಿ ನಾವು ಮರಾಠ ಅಭಿವೃದ್ಧಿ ನಿಗಮ ಮಾಡಿದ್ದೇವೆ ಹೆಮ್ಮೆಯಿಂದ ಹೇಳಿದರು.
ಯಾವ ದೇಶಕ್ಕೆ ಉತ್ತಮವಾದ ಚರಿತ್ರೆ ಇರುತ್ತದೆಯೋ ಆ ದೇಶಕ್ಕೆ ಉತ್ತಮವಾದ ಭವಿಷ್ಯವಿರುತ್ತದೆ – ಅದು ಈ ದೇಶಕ್ಕಿದೆ. 5 ಸಾವಿರ ವರ್ಷಗಳ ಇತಿಹಾಸವಿದೆ. ಅದರಲ್ಲಿ ಕೆಲವೇ ಕೆಲವು ಮಿನುಗು ನಕ್ಷತ್ರಗಳಿವೆ. ಅಂತಹದ್ರಲ್ಲಿ ದೇಶಕ್ಕಾಗಿ ಜನರಿಗಾಗಿ ಹೋರಾಡಿದವರು ಹಿಂದೂ ಸಾಮ್ರಾಜ್ಯಕ್ಕಾಗಿ ಹೋರಾಡಿದವರ ಶ್ರೇಷ್ಠ ಮಿನುಗುತಾರೆ ಛತ್ರಪತಿ ಶಿವಾಜಿ. ಶಿವಾಜಿ ಇಡೀ ಅವತ್ತಿನ ರಾಜಕೀಯ ಚರಿತ್ರೆಯನ್ನ ಮಾಡಿದರು. ಮೊಗಲರು, ಆದಿಲ್ ಶಾಹಿಗಳ ಮಧ್ಯೆ ಹೆಚ್ಚು ಧೈರ್ಯ ಶೌರ್ಯದಿಂದ ಹೋರಾಡಿ ಮೊಗಲ್ ಸಾಮ್ರಾಜ್ಯ ಬರದಂತೆ ಮಾಡಿ ಹಿಂದೂ ಸಾಮ್ರಾಜ್ಯ ಕಟ್ಟಿದವರು ಶಿವಾಜಿ. ನಮ್ಮ ಸ್ವಾಭಿಮಾನದಲ್ಲಿ ನಮ್ಮ ಅಸ್ತಿತ್ವವಿದೆ. ನಮ್ಮ ಪೂರ್ವಜರು ಮಾಡಿದ ಹೋರಾಟದಿಂದ ನಮಗೆ ಅಸ್ಮಿತೆ ಇದೆ. ಅಂತಹ ಚರಿತ್ರೆಯನ್ನ ಬರೆದು ನಿರ್ಮಾಣ ಮಾಡಿದವರು ಛತ್ರಪತಿ ಶಿವಾಜಿ. ಇವತ್ತು ನರೇಂದ್ರ ಮೋದಿಯಿಂದ ಅಭಿವೃದ್ಧಿ ಪರ್ವ ಶುರುವಾಗಿದೆ. ಜಗತ್ತಿನಲ್ಲಿ ಶ್ರೇಷ್ಠ ದೇಶವನ್ನ ಮಾಡಿದ್ದಾರೆ. ಅಮೃತ ಕಾಲ ಅಂತಾ ಮಾಡ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದರು.
ಪ್ರಸ್ತುತ ಮರಾಠ ಅಭಿವೃದ್ಧಿ ನಿಗಮದ ಮೂಲಕ ಬೋರ್ ವೆಲ್, ಶಿಕ್ಷಣಕ್ಕಾಗಿ ಉದ್ಯೋಗಕ್ಕಾಗಿ, ಮಹಿಳೆಯರ ಸಬಲೀಕರಣಕ್ಕೆ ಈ ನಿಗಮ ಮಾಡಿದ್ದೇವೆ. ಇದನ್ನ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಿ, ಇನ್ನೂ ಬೇಕಾದರೂ ಬನ್ನಿ ಕೊಡುತ್ತೇವೆ. ಗಡಿಭಾಗದ ಪ್ರತಿಯೊಂದು ಗ್ರಾಮ ಪಂಚಾಯ್ತಿಯನ್ನ ಅಭಿವೃದ್ಧಿ ಮಾಡುತ್ತೇವೆ. ಗಡಿ ಪ್ರಾಧಿಕಾರಕ್ಕೆ ಹೆಚ್ಚು ಅನುದಾನವನ್ನ ಕೆಲವೇ ದಿನಗಳಲ್ಲಿ ನೀಡುತ್ತೇನೆ. ಈಗಾಗಲೇ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ರೈತರ ಮಕ್ಕಳು ವಿದ್ಯಾವಂತವರಾಗಿ ಬೇರೆ ಬೇರೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ನೀವೂ ಹಲವು ಬೇಡಿಕೆಗಳನ್ನ ಇಟ್ಟಿದ್ದೀರಿ. 3ಬಿ ಯಿಂದ 2ಎ ಗೆ ಸೇರಿಸಬೇಕು ಅನ್ನುವುದು ಹಲವು ವರ್ಷಗಳ ಬೇಡಿಕೆಯಾಗಿದೆ. ಹಿಂದುಳಿದ ವರ್ಗಕ್ಕೆ ಸೇರಿಸುವುದು ಶಾಶ್ವತವಾಗಬೇಕು. ಹಿಂದುಳಿದ ವರ್ಗಗಳ ಆಯೋಗದ ಚೇರಮನ್ ಜೊತೆ ಈಗಾಗಲೇ ಮಾತನಾಡಿದ್ದೇನೆ. ಒಂದು ವರದಿ ಕೊಡುವಂತೆ ಹೇಳಿದ್ದೇನೆ. ನಾವೂ ಏನೇ ಮಾಡಿದ್ರು ಸಂವಿಧಾನದೊಳಗೆ ಮಾಡಬೇಕು. ಸಂವಿಧಾನದ ಒಳಗೆ ನ್ಯಾಯ ಕೊಡುವ ಸಮಯ ಬಂದಾಗ ನಿಮಗೆ ಖಂಡಿತಾ ನ್ಯಾಯ ಸಿಗುತ್ತೆ. ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ನ್ಯಾಯ ಕೊಡುವ ಕೆಲಸವಾಗುತ್ತದೆ. ವರದಿ ಬಂದ ಮೆಲೆ ಸಂವಿಧಾನದ ಚೌಕಟ್ಟಿನಲ್ಲಿ ಮಾಡ್ತೀವಿ. ಜೊತೆಗೆ ಹಲವು ಅಭಿವೃದ್ಧಿ ವಿಚಾರಗಳ ಬಗ್ಗೆ ಮನವಿ ಮಾಡಿದ್ದೀರಿ. ಈ ಎಲ್ಲಾ ಅಭಿವೃದ್ಧಿ ಮಾಡುವ ಸಲುವಾಗಿ ಡಿಪಿಆರ್ ಮಾಡಬೇಕಿದೆ. ಅದಕ್ಕಾಗಿ ವಿಶೇಷವಾಗಿ 10 ಕೋಟಿ ರೂಪಾಯಿ ಬಿಡುಗಡೆ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
Published On - 4:06 pm, Tue, 19 July 22




