Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್ 30 ವರದಿಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿದ ವಿಟಿಯು ವಿಸಿ; ಪ್ರತಿ ಜಿಲ್ಲೆಯಲ್ಲಿ ಎಂಜಿನಿಯರಿಂಗ್ ಕಾಲೇಜ ಅಭಿವೃದ್ಧಿಪಡಿಸಲು ನಿರ್ಧಾರ

ಪ್ರತಿ ಜಿಲ್ಲೆಯಲ್ಲಿ ಒಂದು ಎಂಜಿನಿಯರಿಂಗ್ ಕಾಲೇಜನ್ನು ಶ್ರೇಷ್ಠ ಗುಣಮಟ್ಟದ ಕಾಲೇಜು ಆಗಿ ಅಭಿವೃದ್ಧಿಪಡಿಸುವ ಸೂಪರ್ 30 ಯೋಜನೆಗೆ ಸಂಬಂಧಿಸಿದ ಉನ್ನತ ಮಟ್ಟದ ವರದಿಯನ್ನು ವಿಕಾಸಸೌಧದಲ್ಲಿ ವಿಟಿಯು ವಿಸಿ ಪ್ರೊ. ಕರಿಸಿದ್ದಪ್ಪ ಅವರು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರಿಗೆ ಹಸ್ತಾಂತರಿಸಿದ್ದಾರೆ.

ಸೂಪರ್ 30 ವರದಿಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿದ ವಿಟಿಯು ವಿಸಿ; ಪ್ರತಿ ಜಿಲ್ಲೆಯಲ್ಲಿ ಎಂಜಿನಿಯರಿಂಗ್ ಕಾಲೇಜ ಅಭಿವೃದ್ಧಿಪಡಿಸಲು ನಿರ್ಧಾರ
ಸಚಿವ ಅಶ್ವತ್​ ನಾರಾಯಣ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 21, 2022 | 12:22 PM

ಬೆಂಗಳೂರು: ಪ್ರತಿ ಜಿಲ್ಲೆಯಲ್ಲಿ ಒಂದು ಎಂಜಿನಿಯರಿಂಗ್ (Engineering) ಕಾಲೇಜನ್ನು ಶ್ರೇಷ್ಠ ಗುಣಮಟ್ಟದ ಕಾಲೇಜು ಆಗಿ ಅಭಿವೃದ್ಧಿಪಡಿಸುವ ಸೂಪರ್ 30 ಯೋಜನೆಗೆ ಸಂಬಂಧಿಸಿದ ಉನ್ನತ ಮಟ್ಟದ ವರದಿಯನ್ನು ವಿಕಾಸಸೌಧದಲ್ಲಿ (Vikassoudh) ವಿಟಿಯು (VTU) ವಿಸಿ ಪ್ರೊ. ಕರಿಸಿದ್ದಪ್ಪ ಅವರು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ (Ashwath Narayan) ಅವರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಡಾ. ಅಶ್ವಥ್ ನಾರಾಯಣ ಮಾತನಾಡಿ ಸೂಪರ್ 30 ಇಂಜಿನಿಯರಿಂಗ್ ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ. 30 ಇಂಜಿನಿಯರಿಂಗ್ ಕಾಲೇಜುಗಳ ಪೈಕಿ, 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ.

ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇಲ್ಲದ ಜಿಲ್ಲೆಗಳಲ್ಲಿ 16 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 30 ಕಾಲೇಜುಗಳನ್ನು ಇನ್ಕ್ಯುಬೇಷನ್, ಆಕ್ಸಲೇಟರ್ ಮತ್ತು ಸೂಪರ್ 30 ಅಂತ ಮೂರು ಹಂತಗಳಲ್ಲಿ ಗುರುತಿಸಲಾಗಿದೆ. ಸರ್ಕಾರಿ ಕಾಲೇಜುಗಳಿಗೆ ಗೌವರ್ನಿಂಗ್ ಕೌನ್ಸಿಲ್ ಮಾಡಲಾಗುತ್ತಿದೆ. ಸರ್ಕಾರಿ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ನೀಡುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು.

Koo App

? ರಾಜ್ಯದ ಆಯ್ದ 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ’Karnataka Institute of Technology’(KIT) ಗಳಾಗಿ ಉನ್ನತೀಕರಿಸಲು ನಿರ್ಧರಿಸಲಾಗಿದ್ದು ಈ ಯೋಜನೆಯ ವಿವರವಾದ ಯೋಜನಾ ವರದಿ ಸಿದ್ಧಪಡಿಸಲು ಪ್ರೊ.ಸದಗೋಪನ್ ನೇತೃತ್ವದ ಸಮಿತಿ ರಚಿಸಲಾಗಿದೆ. ಸಮಿತಿಯು 2 ತಿಂಗಳಲ್ಲಿ ವರದಿ ನೀಡಲಿದ್ದು ಅದರನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು. @BJP4Karnataka @CMOKarnataka @pmoind @nalinkumarkateel

Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 20 July 2022

ಟೆಕ್ನಾಲಜಿ ಬಳಸಿಕೊಂಡು ಉನ್ನತೀಕರಣ ಮಾಡಬೇಕಿದೆ. ಶೈಕ್ಷಣಿಕ ವಿಚಾರದಲ್ಲಿ ಐಐಟಿ ಸೇರಿದಂತೆ, ಇಡೀ ಭಾರತದಲ್ಲಿ ನಾವು ನಾಲ್ಕನೇ ಸ್ಥಾನದಲ್ಲಿದ್ದೇವೆ. 80 ಕಾಲೇಜುಗಳು ಎನ್​​ಬಿಎ ರ್ಯಾಂಕಿಂಗ್ ಪಡೆದುಕೊಂಡಿವೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಎಂದೂ ಎನ್​​ಬಿಎಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಇನ್ನು ಮುಂದೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಕೂಡ ಎನ್​​ಬಿಎಗೆ  ಅರ್ಜಿ ಸಲ್ಲಿಸುತ್ತವೆ ಎಂದು ಹೇಳಿದರು.

ಈ ಅಭಿವೃದ್ಧಿ ಆಗುತ್ತಿರುವ ಕಾಲೇಜುಗಳಲ್ಲಿ 50 ಜನ ಬಂದು ಓದುವಂತಾಗಬೇಕು. ಅವರಿಗೆ ಇಲ್ಲಿಯೇ ಪ್ಲೇಸ್ ಮೆಂಟ್ ಸಿಗುವಂತೆ ಮಾಡಲಾಗುವುದು. ಶೇ 33ರಷ್ಟು ಇಂಡಸ್ಟ್ರಿಗಳು ಶೇ 33 ರಷ್ಟು ವಿಟಿಯು ಹಾಗೂ ಶೇ 33 ರಷ್ಟು ಇನ್ಸ್ಟಿಟ್ಯೂಷನ್‌ಗಳು ಆರ್ಥಿಕ ಸಹಾಯ ಮಾಡಲಿವೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಸರ್ಕಾರವೇ ಸಂಪೂರ್ಣ ಆರ್ಥಿಕ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.

ಈ ವೇಳೆ ಉಪ ಸಮಿತಿ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಮತ್ತು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Published On - 3:21 pm, Tue, 19 July 22

ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
ಮಚ್ಚುಹಿಡಿದಿದ್ದ ಶ್ರೀನಿವಾಸ ಪೂಜಾರಿಯನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸ್
ಮಚ್ಚುಹಿಡಿದಿದ್ದ ಶ್ರೀನಿವಾಸ ಪೂಜಾರಿಯನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸ್
‘ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಇತ್ತೀಚೆಗೆ ಆಗಲೇ ಇಲ್ಲ’; ಸುಧಾರಾಣಿ
‘ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಇತ್ತೀಚೆಗೆ ಆಗಲೇ ಇಲ್ಲ’; ಸುಧಾರಾಣಿ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ