ಬೆಂಗಳೂರಿಗರೇ ಗಮನಿಸಿ; ನಿಮ್ಮ ಮನೆಗೆ ಉಚಿತ ಡಿಜಿಟಲ್ ಮೀಟರ್ ಅಳವಡಿಸಲಿದೆ ಬೆಸ್ಕಾಂ

BESCOM: ಬೆಂಗಳೂರು ನಗರ ಪ್ರದೇಶದ ಗ್ರಾಹಕರ ಮನೆಗಳಲ್ಲಿ ಇರುವಂತಹ ಹಳೆಯ ಮೀಟರ್‌ಗಳನ್ನು ಬದಲಾಯಿಸಿ, ಹೊಸ ಡಿಜಿಟಲ್ ಮೀಟರ್ ಅಳವಡಿಸಲು ಬೆಸ್ಕಾಂ ಮುಂದಾಗಿದೆ.

ಬೆಂಗಳೂರಿಗರೇ ಗಮನಿಸಿ; ನಿಮ್ಮ ಮನೆಗೆ ಉಚಿತ ಡಿಜಿಟಲ್ ಮೀಟರ್ ಅಳವಡಿಸಲಿದೆ ಬೆಸ್ಕಾಂ
ಬೆಸ್ಕಾಂ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 19, 2022 | 4:13 PM

ಬೆಂಗಳೂರು: ವಿದ್ಯುತ್ ಸೋರಿಕೆಯನ್ನು ತಡೆಗಟ್ಟಲು ಮಹತ್ವದ ಹೆಜ್ಜೆಯಿಟ್ಟಿರುವ ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ (ಬೆಸ್ಕಾಂ) ಬೆಂಗಳೂರಿನ ಎಲ್ಲ ಮನೆಗಳಲ್ಲೂ ಉಚಿತವಾಗಿ ಡಿಜಿಟಲ್ ಮೀಟರ್ ಅಳವಡಿಸಲಿದೆ. ಹಳೆಯ ಮೆಕ್ಯಾನಿಕಲ್ ಮೀಟರ್ ಬದಲಾಗಿ ನೀವು ಉಚಿತವಾಗಿ ಟಿಜಿಟಲ್ ಮೀಟರ್ ಪಡೆಯಬಹುದು.

ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ನಗರ ಪ್ರದೇಶದಲ್ಲಿ ಗ್ರಾಹಕರ ಮನೆಗಳಲ್ಲಿ ಇರುವಂತಹ ಹಳೆಯ ಮೀಟರ್‌ಗಳನ್ನು ಬದಲಾಯಿಸಿ, ಹೊಸ ಡಿಜಿಟಲ್ ಮೀಟರ್ ಅಳವಡಿಸಲು ಬೆಸ್ಕಾಂ ಮುಂದಾಗಿದೆ.

ನಿಮ್ಮ ಮನೆಯ ಹಳೆಯ ಮೆಕ್ಯಾನಿಕಲ್ ಮೀಟರ್​ಗಳನ್ನು ಬೆಸ್ಕಾಂ ಉಚಿತವಾಗಿ ನೂತನ ಡಿಜಿಟಲ್ ಮೀಟರ್​ಗಳಿಗೆ ಬದಲಾಯಿಸುತ್ತಿದೆ ಎಂದು ‘ನಮ್ಮ ಬೆಸ್ಕಾಂ’ ಕೂ ಮಾಡಿದೆ. ಅಂದಹಾಗೆ, ಈ ಮೀಟರ್ ಬದಲಾವಣೆಗೆ ಗ್ರಾಹಕರು ಯಾವುದೇ ರೀತಿಯ ಹಣವನ್ನು ಪಾವತಿಸುವ ಅವಶ್ಯಕತೆಯಿರುವುದಿಲ್ಲ ಎಂದೂ ಸಹ ಬೆಸ್ಕಾಂ ಸ್ಪಷ್ಟಪಡಿಸಿದೆ.