AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಿಗೆ ನಿಗಮಗಳ ಪುನ:ಶ್ಚೇತನಗೊಳಿಸಲು ಸರ್ಕಾರಕ್ಕೆ 130 ಪುಟಗಳ ವರದಿ ಸಲ್ಲಿಕೆ: ಹಲವಾರು ಮಹತ್ವದ ಬದಲಾವಣೆಗಳಿಗೆ ಸೂಚನೆ

ಸಂಸ್ಥೆಗಳ ಉತ್ತಮ ಸೇವೆಯ ಮೂಲಕ ಲಾಭದಾಯಕವಾಗಿ ಕಾರ್ಯನಿರ್ವಹಿಸುವುದು. ನಾಲ್ಕೂ ಸಾರಿಗೆ ಸಂಸ್ಥೆಗಳ ಸುಸ್ಥಿರ ಕಾರ್ಯ ನಿರ್ವಹಣೆ ಕುರಿತು ವರದಿಯಲ್ಲಿ‌ ಹಲವು ಶಿಫಾರಸುಗಳನ್ನು ಸಮಿತಿ ಮಾಡಿದೆ.

ಸಾರಿಗೆ ನಿಗಮಗಳ ಪುನ:ಶ್ಚೇತನಗೊಳಿಸಲು ಸರ್ಕಾರಕ್ಕೆ 130 ಪುಟಗಳ ವರದಿ ಸಲ್ಲಿಕೆ: ಹಲವಾರು ಮಹತ್ವದ ಬದಲಾವಣೆಗಳಿಗೆ ಸೂಚನೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 19, 2022 | 4:05 PM

Share

ಬೆಂಗಳೂರು: ಸಾರಿಗೆ ನಿಗಮಗಳನ್ನು ಪುನಶ್ಚೇತನಗೊಳಿಸುವ ಸಂಬಂಧ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆ ಮಾಡಲಾಗಿದೆ. ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಂ.ಆರ್. ಶ್ರೀನಿವಾಸ ಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿ ಅಂತಿಮ ವರದಿ ಸಲ್ಲಿಸಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಎಂ‌.ಆರ್. ಶ್ರೀನಿವಾಸ ಮೂರ್ತಿ ವರದಿ ಸಲ್ಲಿಸಿದ್ದಾರೆ.

ಸಾರಿಗೆ ವ್ಯವಸ್ಥೆಯ ಸೋರಿಕೆ ತಡೆಗಟ್ಟುವುದು, ಸಂಪನ್ಮೂಲ ಸೃಜನೆತೆಗೆ ಒತ್ತು ನೀಡುವುದು, ಸಂಸ್ಥೆಗಳ ಉತ್ತಮ ಸೇವೆಯ ಮೂಲಕ ಲಾಭದಾಯಕವಾಗಿ ಕಾರ್ಯನಿರ್ವಹಿಸುವುದು. ನಾಲ್ಕೂ ಸಾರಿಗೆ ಸಂಸ್ಥೆಗಳ ಸುಸ್ಥಿರ ಕಾರ್ಯ ನಿರ್ವಹಣೆ ಕುರಿತು ವರದಿಯಲ್ಲಿ‌ ಹಲವು ಶಿಫಾರಸುಗಳನ್ನು ಸಮಿತಿ ಮಾಡಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕಾರ್ಯದರ್ಶಿ ಜಯರಾಂ ರಾಯಪುರ, ಸಾರಿಗೆ ಇಲಾಖೆ ಕಾರ್ಯದರ್ಶಿ ಪ್ರಸಾದ್, ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿಯ ಕೆಲ ಅಂಶಗಳು

  1.  ಸಾರಿಗೆ ನಿಗಮಗಳ ಆರ್ಥಿಕ ನಷ್ಟ ದೂರ ಮಾಡಲು ಹಲವು ಶಿಫಾರಸು
  2.  ನಾಲ್ಕೂ ಸಾರಿಗೆ ನಿಗಮಗಳಿಗೆ ಮಧ್ಯವರ್ತಿ ಸಂಸ್ಥೆಯಿಂದ ಹಣಕಾಸು ಸಾಲ
  3.  ನಿಗಮಗಳು ತಮ್ಮ ಆದಾಯದಲ್ಲೇ ಮುಂದುವರೆಯುವಂತೆ ಮಾಡುವ ಬಗ್ಗೆ ಸಲಹೆ
  4.  ಸದ್ಯ ನಾಲ್ಕೂ ನಿಗಮಗಳ ಬಳಿ 24 ಸಾವಿರ ಬಸ್ ಗಳಿವೆ
  5.  2030 ರ ಹೊತ್ತಿಗೆ ಬಸ್ ಗಳ ಸಂಖ್ಯೆ 40 ಸಾವಿರಕ್ಕೆ ಏರಿಸಲು ಕ್ರಮವಹಿಸಲು ಶಿಫಾರಸು
  6.  ಬಸ್ ಗಳ ಖರೀದಿಗೆ ಸರ್ಕಾರ ಹಣ ನೀಡದೇ ಮಧ್ಯವರ್ತಿ ಸಂಸ್ಥೆಯಿಂದ ಹಣಕಾಸು ಒದಗಿಸಬೇಕು
  7.  ಒಂದು ಬಸ್ ಗೆ ಚಾಲಕ ಮಾತ್ರ ಸಾಕು. ಚಾಲಕನೇ ನಿರ್ವಾಹಕನ ಕೆಲಸ ಮಾಡುವಂತಿರಬೇಕು
  8.  ಬಸ್ ಗಳನ್ನು ಸ್ಟಾಪ್ ಟು ಸ್ಟಾಪ್ ಮಾತ್ರ ನಿಲ್ಲಿಸುವಂತಿರಬೇಕು
  9.  ಹೀಗೆ 130 ಪುಟಗಳ ವರದಿ ಸಲ್ಲಿಕೆ ಮಾಡಲಾಗಿದೆ