ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ ಪ್ರಕರಣ: ಬಾಲಕನ ವಶಕ್ಕೆ ಪಡೆದ ಆರ್.ಆರ್. ನಗರ ಪೊಲೀಸರು

TV9kannada Web Team

| Edited By: sadhu srinath

Jul 19, 2022 | 3:23 PM

ಬೆಂಗಳೂರು: ರಾಜಧಾನಿಯಲ್ಲಿ ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ (National Hill View Public School, RR Nagar) ಬಾಂಬ್ ಬೆದರಿಕೆ (Bomb scare) ಪ್ರಕರಣದಲ್ಲಿ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದ ಬಾಲಕನೊಬ್ಬನನ್ನು (boy) ಆರ್.ಆರ್. ನಗರ ಪೊಲೀಸರು ವಶಕ್ಕೆ ಪಡೆದಿದ್ದು, ಬಾಲಕನ ವಿಚಾರಣೆ ನಡೆಸುತ್ತಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮಾಲೀಕತ್ವದ ಹಿಲ್​ ವ್ಯೂವ್​ ಶಾಲೆ ಇದಾಗಿದೆ. ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಕೃತ್ಯ ಎಸಗಿದ ಬಾಲಕನನ್ನು ಪತ್ತೆ ಮಾಡಿದ ಪೊಲೀಸರು ಬಾಲಕನ ಕರೆದು ವಿಚಾರಣೆ ನಡೆಸಿದ್ದಾರೆ. ಅದೇ ಶಾಲೆಯ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಈ ಕೃತ್ಯವೆಸಗಿದ್ದಾನೆ.

ಎಕ್ಸಾಂ ಬೇಡ ಅಂತಾ ಶಾಲೆಗೆ ಬಾಂಬ್ ಬೆದರಿಕೆಯಿಟ್ಟ ಬಾಲಕ

ಇದೆ ಜುಲೈ ತಿಂಗಳು 21 ರಂದು 10 ನೇ ತರಗತಿಯ ಮೊದಲನೆಯ ಸೆಮಿಸ್ಟರ್ ಪರೀಕ್ಷೆ ಇತ್ತು. ಹೀಗಾಗಿ ಪರೀಕ್ಷೆ ಮುಂದೂಡಲೆಂದು ಬಾಲಕ ಪ್ಲ್ಯಾನ್ ಮಾಡಿದ್ದನಂತೆ! ಮೊನ್ನೆಯೇ ಇಮೇಲ್ ಮೂಲಕ ಮೆಸೇಜ್ ಮಾಡಿ ಬಾಂಬ್ ಇಟ್ಟಿರೋದಾಗಿ ಬೆದರಿಕೆಯೊಡ್ಡಿದ್ದಾನೆ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಆರ್ ಆರ್ ನಗರ ಪೊಲೀಸರು ಹುಡುಗನನ್ನ ವಿಚಾರಣೆ ನಡೆಸಿ ಬಾಲ ಅಪರಾಧಿಗಳ ಪುನಃಶ್ಚೇತನ ಕೇಂದ್ರಕ್ಕೆ ಕಳುಹಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada