
ಇಟಾನಗರ, ಡಿಸೆಂಬರ್ 11: ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯಿಂದ ದಿನಗೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಇಂದು (ಗುರುವಾರ) ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಕಂದಕಕ್ಕೆ ಉರುಳಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ. ಟ್ರಕ್ (Truck Accident) ಬೆಟ್ಟದ ರಸ್ತೆಯಿಂದ ಜಾರಿ ಸುಮಾರು 1,000 ಅಡಿಗಳಷ್ಟು ಕಡಿದಾದ ಕಮರಿಗೆ ಬಿದ್ದಿದ್ದರಿಂದ ಈ ದುರಂತ ಸಂಭವಿಸಿದೆ. ಟಿನ್ಸುಕಿಯಾದ ಗೆಲಾಪುಖುರಿ ಟೀ ಎಸ್ಟೇಟ್‌ನ ಕಾರ್ಮಿಕರು ಕೆಲಸಕ್ಕಾಗಿ ಹಯುಲಿಯಾಂಗ್‌ಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ನಡೆದಿದೆ. ಇನ್ನೂ ಎಲ್ಲ ಮೃತದೇಹಗಳನ್ನು ಹೊರತೆಗೆದಿಲ್ಲ. ಆದರೆ ಅವರೆಲ್ಲರೂ ಮೃತರಾಗಿದ್ದಾರೆ ಎನ್ನಲಾಗಿದೆ.
ಗುಡ್ಡಗಾಡು ಪ್ರದೇಶದ ಮೂಲಕ ಹೋಗುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದಾಗ ಈ ಅಪಘಾತ ಸಂಭವಿಸಿದೆ. ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿದವು. ಸ್ಥಳೀಯ ಅಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಆ ಟ್ರಕ್ನಲ್ಲಿದ್ದವರನ್ನು ಹುಡುಕಲು ಆ ಸ್ಥಳಕ್ಕೆ ತಲುಪಿದ್ದಾರೆ.
ಇದನ್ನೂ ಓದಿ: ದೇವನಹಳ್ಳಿ: ಲಾಲಗೊಂಡನಹಳ್ಳಿ ಗೇಟ್ ಬಳಿ ಭೀಕರ ಅಪಘಾತ, ಮೂವರು ಸ್ಥಳದಲ್ಲೇ ಸಾವು
ಡಿಸೆಂಬರ್ 7ರಂದು ಇದೇ ರೀತಿಯ ಮತ್ತೊಂದು ಘಟನೆ ನಡೆದಿತ್ತು. ನಾಸಿಕ್‌ನ ಕಲ್ವಾನ್ ತಾಲ್ಲೂಕಿನ ಸಪ್ತಶ್ರಿಂಗ್ ಗರ್ ಘಾಟ್‌ನಲ್ಲಿ ಕಾರು 600 ಅಡಿ ಆಳದ ಕಂದಕಕ್ಕೆ ಬಿದ್ದು 6 ಜನರು ಸಾವನ್ನಪ್ಪಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ