ಹೊಸ ಲುಕ್ನಲ್ಲಿ ಪ್ರಧಾನಿ; ಧುರಂಧರ್ ಸ್ಟೈಲ್ನ ಮೋದಿ ಮಾಂಟೇಜ್ ವೈರಲ್
'ಧುರಂಧರ್' ಶೈಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವ್ಲಾಡಿಮಿರ್ ಪುಟಿನ್ ಜೊತೆಗಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ಈ ವೀಡಿಯೊದಲ್ಲಿ ಜಿ20, ಜಪಾನ್, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಮತ್ತು ಯುರೋಪಿಯನ್ ಒಕ್ಕೂಟದೊಂದಿಗಿನ ಪ್ರಧಾನಿ ಮೋದಿಯವರ ಸಂವಹನದ ದೃಶ್ಯವೂ ಇದೆ. ಈ ವೀಡಿಯೊ ಕ್ಲಿಪ್, ಕಪ್ಪು ಕನ್ನಡಕ ಮತ್ತು ಕಪ್ಪು ಪಫರ್ ಜಾಕೆಟ್ ಧರಿಸಿ, ನೇರವಾಗಿ ಕ್ಯಾಮೆರಾ ಕಡೆಗೆ ನಡೆದುಕೊಂಡು ಬರುತ್ತಿರುವ ಪ್ರಧಾನಿ ಮೋದಿಯವರ ಸಿನಿಮೀಯ ಫೋಟೋದೊಂದಿಗೆ ಕೊನೆಗೊಳ್ಳುತ್ತದೆ.
ನವದೆಹಲಿ, ಡಿಸೆಂಬರ್ 11: ಇದೀಗ ಬಾಲಿವುಡ್ ಸಿನಿಮಾ ಧುರಂಧರ್ (Dhurandhar) ಹವಾ ಜೋರಾಗಿದೆ. ಅಕ್ಷಯ್ ಖನ್ನಾ ಭರ್ಜರಿಯಾಗಿ ಕಂಬ್ಯಾಕ್ ಮಾಡಿರುವ ಈ ಸಿನಿಮಾದ ರೀತಿಯಲ್ಲೇ ಅನೇಕ ರೀಲ್ಸ್ಗಳು ವೈರಲ್ ಆಗಿವೆ. ಮಧ್ಯಪ್ರದೇಶ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯವರ ‘ಧುರಂಧರ್ ಶೈಲಿ’ಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನಡೆದುಕೊಂಡು ಹೋಗುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಶೇಕ್ ಹ್ಯಾಂಡ್, ಮಾತುಕತೆ ನಡೆಸುವುದನ್ನು ನೋಡಬಹುದು.
ಇದಾದ ನಂತರ ವಿಡಿಯೋದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗಿನ ಅವರ ಆತ್ಮೀಯ ಸಂಭಾಷಣೆಯ ವೈರಲ್ ಕ್ಷಣವೂ ಮಾಂಟೇಜ್‌ನಲ್ಲಿದೆ. ಈ ವಿಡಿಯೋದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗಿನ ಸಭೆಗಳ ಒಂದು ಸಣ್ಣ ದೃಶ್ಯವೂ ಇದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

