ನೂತನ ಸಂಸತ್ ಉದ್ಘಾಟನೆ ಬಹಿಷ್ಕರಿಸಲು ನಿರ್ಧರಿಸಿದ ಕಾಂಗ್ರೆಸ್​​ನ್ನು ಖಂಡಿಸಿ 270 ಗಣ್ಯ ನಾಗರಿಕರಿಂದ ಬಹಿರಂಗ ಪತ್ರ

|

Updated on: May 26, 2023 | 7:44 PM

ಪ್ರಧಾನಿ ನರೇಂದ್ರ ಮೋದಿಯವರಿಂದ ಸಂಸತ್ತಿನ ಉದ್ಘಾಟನೆಯನ್ನು ಬಹಿಷ್ಕರಿಸುವವರಿಗೆ ಅವರು ಹೇಗೆ ಪ್ರಜಾಪ್ರಭುತ್ವದ ಆತ್ಮವನ್ನು ಹೀರುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಅವರು ತಮ್ಮದೇ ಆದ ಪ್ರಜಾಸತ್ತಾತ್ಮಕವಲ್ಲದ, ವಾಡಿಕೆಯ ಮತ್ತು ಆಧಾರರಹಿತವಾದ ಬಹಿಷ್ಕಾರಗಳನ್ನು ಅನುಸರಿಸುತ್ತಿದ್ದಾರೆ

ನೂತನ ಸಂಸತ್ ಉದ್ಘಾಟನೆ ಬಹಿಷ್ಕರಿಸಲು ನಿರ್ಧರಿಸಿದ ಕಾಂಗ್ರೆಸ್​​ನ್ನು ಖಂಡಿಸಿ 270 ಗಣ್ಯ ನಾಗರಿಕರಿಂದ ಬಹಿರಂಗ ಪತ್ರ
ನೂತನ ಸಂಸತ್ ಭವನ
Follow us on

ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ನೂತನ ಸಂಸತ್ ಭವನದ ಉದ್ಘಾಟನೆಗೆ ಕಾಂಗ್ರೆಸ್(Congress) ನೇತೃತ್ವದ ವಿರೋಧ ಪಕ್ಷಗಳ ಬಹಿಷ್ಕಾರವನ್ನು ಖಂಡಿಸಿ 270 ಗಣ್ಯ ನಾಗರಿಕರು ಬಹಿರಂಗ ಪತ್ರ ಬರೆದಿದ್ದಾರೆ. ಪತ್ರಕ್ಕೆ ಸಹಿ ಮಾಡಿದ 270 ಮಂದಿಯಲ್ಲಿ 88 ನಿವೃತ್ತ ಅಧಿಕಾರಿಗಳು (10 ರಾಯಭಾರಿಗಳು ಸೇರಿದಂತೆ), 100 ನಿವೃತ್ತ ಸಶಸ್ತ್ರ ಪಡೆ ಅಧಿಕಾರಿಗಳು ಮತ್ತು 82 ಶಿಕ್ಷಣತಜ್ಞರು ಸೇರಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರದ ಮುಖ್ಯಸ್ಥೆ ಮಾತ್ರವಲ್ಲ, ಸಂಸತ್ತಿನ ಅವಿಭಾಜ್ಯ ಅಂಗವಾಗಿರುವುದರಿಂದ ಅವರಿಗೆ ಗೌರವ ನೀಡಬೇಕೆಂದು ವಿರೋಧ ಪಕ್ಷಗಳು ವಾದಿಸಿವೆ.

ಎಲ್ಲಾ ಭಾರತೀಯರು ಸ್ವಯಂ ಅರ್ಥ ಮಾಡಿಕೊಳ್ಳಬಲ್ಲರು. ಆದರೆ ವಿರೋಧ ಪಕ್ಷವು ಅನಗತ್ಯ ವಾದಗಳು, ಅಪಕ್ವ, ಹುಚ್ಚಾಟಿಕೆ ಮತ್ತು ಟೊಳ್ಳಾದ ತಾರ್ಕಿಕತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರಜಾಸತ್ತಾತ್ಮಕವಲ್ಲದ ರೀತಿಯ ಸ್ಪಷ್ಟ ಪ್ರದರ್ಶನ ಮಾಡುತ್ತದೆ, ಇದು ಮಾತ್ರ ಅರ್ಥವಾಗುತ್ತಿಲ್ಲ ಎಂದು ಬಹಿರಂಗ ಪತ್ರದಲ್ಲಿ ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರಿಂದ ಸಂಸತ್ತಿನ ಉದ್ಘಾಟನೆಯನ್ನು ಬಹಿಷ್ಕರಿಸುವವರಿಗೆ ಅವರು ಹೇಗೆ ಪ್ರಜಾಪ್ರಭುತ್ವದ ಆತ್ಮವನ್ನು ಹೀರುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಅವರು ತಮ್ಮದೇ ಆದ ಪ್ರಜಾಸತ್ತಾತ್ಮಕವಲ್ಲದ, ವಾಡಿಕೆಯ ಮತ್ತು ಆಧಾರರಹಿತವಾದ ಬಹಿಷ್ಕಾರಗಳನ್ನು ಅನುಸರಿಸುತ್ತಿದ್ದಾರೆ

Parliament Inauguration Boycott by Rashmi Kasargod on Scribd

2017 ರಲ್ಲಿ ಸರಕು ಮತ್ತು ಸೇವಾ ತೆರಿಗೆಯ ಜಾರಿಗಾಗಿ ಐತಿಹಾಸಿಕ ಮಧ್ಯರಾತ್ರಿಯ ಅಧಿವೇಶನ ಸೇರಿದಂತೆ ಸಂಸತ್ತು ಬಹಿಷ್ಕಾರದ ಇತ್ತೀಚಿನ ನಿದರ್ಶನಗಳನ್ನು ವಿವರಿಸುತ್ತಾ, ಅವರು ಗೌರವಾನ್ವಿತರನ್ನು, ಅದು ರಾಷ್ಟ್ರಪತಿ ಮುರ್ಮುವೇ ಆಗಿರಲಿ ಸೈಡ್ ಲೈನಿಂಗ್ ಮಾಡುವವರು ಎಂದು ಅವರು ಅರ್ಥಮಾಡಿಕೊಳ್ಳುವುದಿಲ್ಲ. 2023 ರಲ್ಲಿ, ಅವರು ಕೇಂದ್ರ ಬಜೆಟ್‌ಗೆ ಮುಂಚಿತವಾಗಿ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಅವರು ಸಾಂಪ್ರದಾಯಿಕ ಭಾಷಣವನ್ನು ಬಹಿಷ್ಕರಿಸಿದರು.

ಇದನ್ನೂ ಓದಿ: ಮೋದಿ ಸರ್ಕಾರಕ್ಕೆ 9 ವರ್ಷ, ಆ ದಿನವನ್ನು ಮಾಫಿ ದಿವಸ್ ಆಗಿ ಗುರುತಿಸಿ; 9 ಪ್ರಶ್ನೆಗಳನ್ನು ಕೇಳಿದ ಕಾಂಗ್ರೆಸ್

ಪ್ರಸ್ತುತ ಕಾಂಗ್ರೆಸ್ ಪಕ್ಷದ ಸ್ವಭಾವವು ಯಾವಾಗಲೂ ಪ್ರಜಾಸತ್ತಾತ್ಮಕವಾಗಿಲ್ಲ. ರಾಷ್ಟ್ರದ ಪ್ರಗತಿಯ ಹಾದಿಯಲ್ಲಿರುವಾಗ ಅವರದ್ದು ಕೊಂಕು ಇರುತ್ತದೆ. ಯಾವುದು ಕಾಂಗ್ರೆಸ್ ಪಕ್ಷವು ತನ್ನ ಮಿತ್ರಪಕ್ಷಗಳೊಂದಿಗೆ ಪಡೆಯುವುದಿಲ್ಲವೋ ಅದನ್ನು ಭಾರತೀಯರು ಪಡೆಯುತ್ತಾರೆ ಎಂದು ಪತ್ರದಲ್ಲಿ ಇದೆ.

ಕಾಂಗ್ರೆಸ್ ಸೇರಿದಂತೆ 20 ವಿರೋಧ ಪಕ್ಷಗಳು ಮೋದಿಯವರ ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ. ಮತ್ತೊಂದೆಡೆ, 25 ಪಕ್ಷಗಳು ಉದ್ಘಾಟನೆಯಲ್ಲಿ ಭಾಗವಹಿಸುವುದಾಗಿ ಹೇಳಿವೆ ಮತ್ತು ಇವುಗಳಲ್ಲಿ ಏಳು ಎನ್‌ಡಿಎಯೇತರ ಪಕ್ಷಗಳು ಸೇರಿವೆ. ಬಿಎಸ್‌ಪಿ, ಶಿರೋಮಣಿ ಅಕಾಲಿದಳ, ಜನತಾ ದಳ (ಜಾತ್ಯತೀತ), ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ವೈಎಸ್‌ಆರ್ ಕಾಂಗ್ರೆಸ್, ಬಿಜೆಡಿ ಮತ್ತು ಟಿಡಿಪಿ ಏಳು ಎನ್‌ಡಿಎಯೇತರ ಪಕ್ಷಗಳಾಗಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:37 pm, Fri, 26 May 23