AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramanagara News: ಚುನಾವಣೆಗೂ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಾಯ

ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ (Congress) ಅಭ್ಯರ್ಥಿ ಹಂಚಿದ್ದ ಕುಕ್ಕರ್ (Cooker) ಅಡುಗೆ ಮಾಡುವಾಗ ಸ್ಫೋಟಗೊಂಡು ಮಹಾಲಕ್ಷ್ಮೀ ಎಂಬ ಬಾಲಕಿ ಗಾಯಗೊಂಡ ಘಟನೆ ರಾಮನಗರ (Ramanagara) ಜಿಲ್ಲೆಯ ಮಾಗಡಿ ಕ್ಷೇತ್ರ ವ್ಯಾಪ್ತಿಯ ಕೂನಮುದ್ದನಹಳ್ಳಿಯಲ್ಲಿ ನಡೆದಿದೆ.

Ramanagara News: ಚುನಾವಣೆಗೂ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಾಯ
ಕುಕ್ಕರ್ ಸ್ಫೋಟ
Ganapathi Sharma
|

Updated on:May 26, 2023 | 7:29 PM

Share

ರಾಮನಗರ: ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ (Congress) ಅಭ್ಯರ್ಥಿ ಹಂಚಿದ್ದ ಕುಕ್ಕರ್ (Cooker) ಅಡುಗೆ ಮಾಡುವಾಗ ಸ್ಫೋಟಗೊಂಡು ಮಹಾಲಕ್ಷ್ಮೀ ಎಂಬ ಬಾಲಕಿ ಗಾಯಗೊಂಡ ಘಟನೆ ರಾಮನಗರ (Ramanagara) ಜಿಲ್ಲೆಯ ಮಾಗಡಿ ಕ್ಷೇತ್ರ ವ್ಯಾಪ್ತಿಯ ಕೂನಮುದ್ದನಹಳ್ಳಿಯಲ್ಲಿ ನಡೆದಿದೆ. ಇದರ ಬೆನ್ನಲ್ಲೇ, ಕೂನಮುದ್ದನಹಳ್ಳಿ ನಿವಾಸಿಗಳು ಆತಂಕದಿಂದ ಕುಕ್ಕರ್​ಗಳನ್ನು ರಸ್ತೆಗೆಸೆದಿದ್ದಾರೆ. ಪರಿಣಾಮವಾಗಿ ಅನೇಕ ಕುಕ್ಕರ್​​ಗಳು ರಸ್ತೆಯಲ್ಲಿ ಬಿದ್ದಿವೆ. ಇವುಗಳು ಹಾಲಿ ಶಾಸಕ ಇಕ್ಬಾಲ್ ಹುಸೇನ್ ಪರವಾಗಿ ಹಂಚಲಾಗಿದ್ದ ಕುಕ್ಕರ್​​ಗಳು ಎನ್ನಲಾಗಿದೆ.

ಕುಕ್ಕರ್​ ಸ್ಫೋಟದ ನಂತರ ಬೆಚ್ಚಿಬಿದ್ದ ಕೂನಮುದ್ದನಹಳ್ಳಿ ನಿವಾಸಿಗಳು ನಿಮ್ಮ ಕುಕ್ಕರ್​ ಬೇಡ, ನಿಮ್ಮ ಸಹವಾಸ ನಮಗೆ ಬೇಡವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲೆಕ್ಷನ್ ಗಿಫ್ಟ್ ಕುಕ್ಕರ್ ಬಳಸಿದರೆ ನಮಗೂ ಇಂತಹ ಸ್ಥಿತಿ ಬರುತ್ತೆ ಎಂದು ಅವುಗಳನ್ನು ರಸ್ತೆಗೆ ಎಸೆದಿದ್ದಾರೆ.

ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಭರ್ಜರಿ ಜಯ ಸಾಧಿಸಿದ್ದಾರೆ. ಇಕ್ಬಾಲ್ ಒಟ್ಟು 87,690 ಮತಗಳನ್ನು ಪಡೆದರೆ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 76,975 ಮತಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ: Chikmagalur News; ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್; ಮುಸ್ಲಿಂ ಯುವತಿ ಮನೆಯ ಕಬೋರ್ಡ್​​ನಲ್ಲಿ ಸಿಕ್ಕಿಬಿದ್ದ ಬಿಜೆಪಿ ಕಾರ್ಯಕರ್ತ!

ಚುನಾವಣೆಗೆ ಮುಂಚೆ ರಾಜ್ಯದ ಹಲವೆಡೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಕುಕ್ಕರ್ ಹಂಚಿದ್ದ ಬಗ್ಗೆ ವರದಿಗಳಾಗಿದ್ದವು. ಬೆಂಗಳೂರು, ರಾಮನಗರ, ಕೋಲಾರ, ತುಮಕೂರ ಸೇರಿದಂತೆ ಅನೇಕ ಕಡೆ ಕುಕ್ಕರ್​​ಗಳನ್ನು ಹಂಚಲಾಗಿತ್ತು. ಕೆಲವು ಕಡೆ ಈಗಾಗಲೇ ಕುಕ್ಕರ್ ಸ್ಫೋಟಗೊಂಡ ಬಗ್ಗೆಯೂ ವರದಿಯಾಗಿತ್ತು. ಇನ್ನು ಕೆಲವು ಕಡೆ ಕುಕ್ಕರ್​ಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Fri, 26 May 23