29 Years of Babri Masjid Demolition: ಬಾಬರಿ ಮಸೀದಿ ಧ್ವಂಸಕ್ಕೆ 29 ವರ್ಷ, 1992 ಡಿಸೆಂಬರ್ 6ರಂದು ಅಲ್ಲಿ ನಡೆದದ್ದೇನು?

| Updated By: ರಶ್ಮಿ ಕಲ್ಲಕಟ್ಟ

Updated on: Dec 06, 2021 | 1:44 PM

ಡಿಸೆಂಬರ್ 6, 1992 ರಂದು, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅಯೋಧ್ಯೆಯ ಬಾಬರಿ ಮಸೀದಿಯ ಬಳಿ ಲಕ್ಷಗಟ್ಟಲೆ ಹಿಂದೂ ಕರಸೇವಕರನ್ನು ಒಳಗೊಂಡ ರ್ಯಾಲಿಯನ್ನು ಆಯೋಜಿಸಿತು. ಇದು ಭಗವಾನ್ ರಾಮನ ಜನ್ಮಸ್ಥಳ ಎಂದು ಹಿಂದೂಗಳು ಹೇಳಿಕೊಳ್ಳುತ್ತಾರೆ.

29 Years of Babri Masjid Demolition: ಬಾಬರಿ ಮಸೀದಿ ಧ್ವಂಸಕ್ಕೆ 29 ವರ್ಷ, 1992 ಡಿಸೆಂಬರ್ 6ರಂದು ಅಲ್ಲಿ ನಡೆದದ್ದೇನು?
ಬಾಬರಿ ಮಸೀದಿ
Follow us on

ಬಾಬರಿ ಮಸೀದಿಯ ಧ್ವಂಸ (Babri Masjid demolition) ಘಟನೆಗೆ 29 ವರ್ಷ. 1992 ರಲ್ಲಿ ಹಿಂದೂ ಕರಸೇವಕರು ಬಾಬರಿ ಮಸೀದಿ ಧ್ವಂಸ ಮಾಡಿದ್ದು ದೇಶಾದ್ಯಂತ ಕೋಮು ಹಿಂಸಾಚಾರವನ್ನು ಪ್ರಚೋದಿಸಿತು. ಇದು 2,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು. ಬಾಬರಿ ಮಸೀದಿ ಧ್ವಂಸಗೊಂಡು 29 ವರ್ಷಗಳಾಗಿದ್ದರೂ, ಈ ಘಟನೆಯನ್ನು ಸ್ವಾತಂತ್ರ್ಯದ ನಂತರ ಭಾರತದ ಕರಾಳ ದಿನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ದೇಶದ ರಾಜಕೀಯದ ದಿಶೆಯನ್ನೇ ಬದಲಾಯಿಸಿತ್ತು.ಬಾಬರಿ ಮಸೀದಿ ಧ್ವಂಸದ 29 ನೇ ವಾರ್ಷಿಕೋತ್ಸವವಾದ ಇಂದು ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ಹಿಂದೂ ಬಲಪಂಥೀಯ ಗುಂಪುಗಳು ಕಳೆದ ತಿಂಗಳು ಮಥುರಾದ (Mathura) ಶಾಹಿ ಈದ್ಗಾದಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಲು ಮತ್ತು ಸ್ಥಳದಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಸ್ಥಾಪಿಸಲು ಕರೆ ನೀಡಿದ್ದವು. ಇದು ಕೃಷ್ಣನ “ಮೂಲ ಜನ್ಮಸ್ಥಳ” ಎಂದು ಅವರು ಪ್ರತಿಪಾದಿಸಿದರು. ಇದಲ್ಲದೆ, ಧ್ವಂಸ ಪ್ರಕರಣದ ಪ್ರಮುಖ ಪ್ರಾಸಿಕ್ಯೂಷನ್ ಸಾಕ್ಷಿ ಹಾಜಿ ಮೆಹಬೂಬ್ ಅವರು 6 ಡಿಸೆಂಬರ್ 1992 ರಂದು ಕೊಲ್ಲಲ್ಪಟ್ಟ ಮುಸ್ಲಿಂ ಸಮುದಾಯದವರಿಗೆ ಕುರಾನ್ ಖಾನಿ (ಪಠಣ) ಹೊರತುಪಡಿಸಿ ಯಾವುದೇ ಕಾರ್ಯಕ್ರಮವನ್ನು ಇಂದು ನಡೆಸಲಾಗುವುದಿಲ್ಲ ಎಂದು ಹೇಳಿದ್ದಾರೆ.

1992ರಂದು ನಡೆದಿದ್ದು ಏನು?
ಡಿಸೆಂಬರ್ 6, 1992 ರಂದು, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅಯೋಧ್ಯೆಯ ಬಾಬರಿ ಮಸೀದಿಯ ಬಳಿ ಲಕ್ಷಗಟ್ಟಲೆ ಹಿಂದೂ ಕರಸೇವಕರನ್ನು ಒಳಗೊಂಡ ರ್ಯಾಲಿಯನ್ನು ಆಯೋಜಿಸಿತು. ಇದು ಭಗವಾನ್ ರಾಮನ ಜನ್ಮಸ್ಥಳ ಎಂದು ಹಿಂದೂಗಳು ಹೇಳಿಕೊಳ್ಳುತ್ತಾರೆ. ಆದಾಗ್ಯೂ, ಗುಂಪು ಹಿಂಸಾಚಾರಕ್ಕೆ ತಿರುಗಿತು ಮತ್ತು ಆ ದಿನದ ಮಧ್ಯಾಹ್ನ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿತು. ಅವರು ಕ್ರಮೇಣ ಭದ್ರತಾ ಪಡೆಗಳನ್ನು ತಳ್ಳಿ ಬಾಬರಿ ಮಸೀದಿಯನ್ನು ಕೆಡವಿದರು. ಈ ಘಟನೆಯು ದೇಶಾದ್ಯಂತ ವ್ಯಾಪಕ ಗಲಭೆಗೆ ಕಾರಣವಾಯಿತು. ಈ ಘಟನೆಯಲ್ಲಿ ನೂರಾರು ಜನರು ಸಾವನ್ನಪ್ಪಿದರು ಮತ್ತು ಸಾವಿರಾರು ಜನರು ಗಾಯಗೊಂಡರು ಮತ್ತು ಸ್ಥಳಾಂತರಗೊಂಡರು.

ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಉಮಾಭಾರತಿ ಸೇರಿದಂತೆ ಹಲವಾರು ಉನ್ನತ ರಾಜಕಾರಣಿಗಳು ಅಂದು ಜನಸಮೂಹವನ್ನು ಪ್ರಚೋದಿಸಿದರು ಎಂದು ಆರೋಪಿಸಲಾಗಿತ್ತು. ಆದಾಗ್ಯೂ, ಈ ವರ್ಷದ ಸೆಪ್ಟೆಂಬರ್ 30 ರಂದು ಲಖನೌದ ವಿಶೇಷ ಸಿಬಿಐ ನ್ಯಾಯಾಲಯವು ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತು, ಧ್ವಂಸವು “ಪೂರ್ವ ಯೋಜಿತವಲ್ಲ” ಅವರ ವಿರುದ್ಧ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಏನಿದು ಪ್ರಕರಣ?

ಇಡೀ ಪ್ರಕರಣವು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2.77 ಎಕರೆ ಅಳತೆಯ ಜಮೀನಿನ ಸುತ್ತ ಸುತ್ತುತ್ತದೆ. ಹಿಂದೂಗಳು ಈ ಭೂಮಿ ರಾಮನ ಜನ್ಮಸ್ಥಳ ಎಂದು ಹೇಳಿದರೆ, ಮುಸ್ಲಿಮರು ಬಾಬರಿ ಮಸೀದಿಯನ್ನು ಹೊಂದಿದೆ ಎಂದು ಹೇಳುತ್ತಾರೆ. ಆದಾಗ್ಯೂ, ಬಾಬರಿ ಮಸೀದಿಯನ್ನು 1528 ರಲ್ಲಿ ಮೊಘಲ್ ಚಕ್ರವರ್ತಿ ಬಾಬರ್ “ರಾಮ ಜನ್ಮಭೂಮಿ” ಯಲ್ಲಿ ನಿರ್ಮಿಸಿದನು ಮತ್ತು ಅಲ್ಲಿ ಮೊದಲು ಅಸ್ತಿತ್ವದಲ್ಲಿರುವ ರಾಮನ ದೇವಾಲಯವನ್ನು ನಾಶಪಡಿಸಿದನು ಎಂದು ಹಿಂದೂಗಳು ವಾದಿಸುತ್ತಾರೆ.

1885 ರಲ್ಲಿ ನಿರ್ಮೋಹಿ ಅಖಾಡ ಅವರು ಫೈಜಾಬಾದ್‌ನಲ್ಲಿ ಅರ್ಜಿ ಸಲ್ಲಿಸಿದರು ಮತ್ತು ಬಾಬರಿ ಮಸೀದಿಯೊಳಗೆ ಭಗವಾನ್ ರಾಮನನ್ನು ಪೂಜಿಸಲು ಅನುಮತಿ ಕೇಳಿದರು. ಆದರೆ, ಅನುಮತಿ ಸಿಕ್ಕಿರಲಿಲ್ಲ.
1949 ರಲ್ಲಿ, ಕೆಲವು ಹಿಂದೂ ಗುಂಪುಗಳು ಮಸೀದಿಯನ್ನು ಪ್ರವೇಶಿಸಿ ಭಗವಾನ್ ರಾಮನ ವಿಗ್ರಹಗಳನ್ನು ಇರಿಸಿದವು. ಅದೇ ವರ್ಷದ ನಂತರ ಸರ್ಕಾರವು ಈ ಪ್ರದೇಶವನ್ನು ವಿವಾದಿತ ಎಂದು ಘೋಷಿಸಿತು ಮತ್ತು ಆವರಣಕ್ಕೆ ಗೇಟ್‌ಗಳನ್ನು ಲಾಕ್ ಮಾಡಿತು.

1986 ರಲ್ಲಿ ಜಿಲ್ಲಾ ನ್ಯಾಯಾಲಯವು ಮಸೀದಿಯ ದ್ವಾರಗಳನ್ನು ತೆರೆಯಲು ಮತ್ತು ಅಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ನೀಡುವಂತೆ ಆದೇಶಿಸಿತು. ನ್ಯಾಯಾಲಯದ ಆದೇಶದ ವಿರುದ್ಧ ಮುಸ್ಲಿಮರು ಪ್ರತಿಭಟನೆ ನಡೆಸಿದಾಗ, ಬಾಬರಿ ಮಸೀದಿ ಕ್ರಿಯಾ ಸಮಿತಿಯನ್ನು ರಚಿಸಲಾಯಿತು. 1990 ರಲ್ಲಿ ಹಿಂದೂ ಗುಂಪುಗಳು ಹಿಂಸಾಚಾರವನ್ನು ಪ್ರಚೋದಿಸುವ ಮೂಲಕ ಮಸೀದಿಯನ್ನು ಹಾನಿಗೊಳಿಸಿದವು. ನಂತರ ಎಲ್‌ಕೆ ಅಡ್ವಾಣಿಯವರು “ಅಯೋಧ್ಯೆ ಚಳುವಳಿಯ ಬಗ್ಗೆ ಜನರಿಗೆ ಅರಿವು ಮೂಡಿಸಲು” ರಥಯಾತ್ರೆಯನ್ನು ಆಯೋಜಿಸಿದರು.

1992 ರಲ್ಲಿ ಮಸೀದಿಯನ್ನು ಹಿಂದೂ ಕರ ಸೇವಕರು ಕೆಡವಿದರು. ಇದು ಭಾರತದಲ್ಲಿ ವ್ಯಾಪಕವಾದ ಗಲಭೆಗೆ ಕಾರಣವಾಯಿತು. ಈ ಘಟನೆಯಲ್ಲಿ 2,000 ಕ್ಕೂ ಹೆಚ್ಚು ಜನರು ಬಲಿಯಾದರು,. ನಂತರ ಪಿವಿ ನರಸಿಂಹ ರಾವ್ ನೇತೃತ್ವದ ಕೇಂದ್ರ ಸರ್ಕಾರವು ಡಿಸೆಂಬರ್ 16 ರಂದು ನ್ಯಾಯಮೂರ್ತಿ ಎಂಎಸ್ ಲಿಬರ್ಹಾನ್ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿತ್ತು.

ಐತಿಹಾಸಿಕ ಅಯೋಧ್ಯೆ ತೀರ್ಪಿನ ಬಗ್ಗೆ
2017 ರಲ್ಲಿ ಸುಪ್ರೀಂಕೋರ್ಟ್ ಈ ವಿಷಯವು ಸೂಕ್ಷ್ಮವಾಗಿದೆ ಮತ್ತು ನ್ಯಾಯಾಲಯದ ಹೊರಗೆ ಇತ್ಯರ್ಥಗೊಳಿಸಬೇಕು ಎಂದು ಹೇಳಿದ್ದು, ಮಾತುಕತೆ ನಡೆಸಿ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವಂತೆ ಎಲ್ಲಾ ಮಧ್ಯಸ್ಥಗಾರರಿಗೆ ಹೇಳಿತ್ತು. ಆದರೆ, ಶಿಯಾ ವಕ್ಫ್ ಮಂಡಳಿಯು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದು, ವಿವಾದಿತ ಸ್ಥಳದಿಂದ ದೂರದಲ್ಲಿ ಹೊಸ ಮಸೀದಿಯನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದೆ.

ಎರಡು ವರ್ಷಗಳ ನಂತರ, ವಿವಾದಿತ ಭೂಮಿ ಪ್ರಕರಣದ ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವನ್ನು ರಚಿಸಲಾಯಿತು. ನವೆಂಬರ್ 9, 2019 ರಂದು, ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿತು ಮತ್ತು ಭಗವಾನ್ ರಾಮನ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಪರ್ಯಾಯ ಭೂಮಿಯನ್ನು ನೀಡುವಂತೆ ಸುಪ್ರೀಂಕೋರ್ಟ್ ಹೇಳಿತು.

“ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದಿಂದ ಸುನ್ನಿ ವಕ್ಫ್ ಮಂಡಳಿಗೆ 5 ಎಕರೆ ಅಳತೆಯ ಸೂಕ್ತ ಜಮೀನು ಹಸ್ತಾಂತರಿಸಲಾಗುವುದು. ಸುನ್ನಿ ವಕ್ಫ್ ಮಂಡಳಿಯು ಮಂಜೂರು ಮಾಡಿದ ಭೂಮಿಯಲ್ಲಿ ಮಸೀದಿ ನಿರ್ಮಿಸಲು ಮುಕ್ತವಾಗಿದೆ” ಎಂದು ಅಂದಿನ ಸಿಜೆಐ ರಂಜನ್ ಗೊಗೊಯ್ ತಮ್ಮ ತೀರ್ಪಿನಲ್ಲಿ ಹೇಳಿದರು.

ಇದನ್ನೂ ಓದಿ: Babri Demolition Anniversary ಮಸೀದಿಯಲ್ಲಿ ಕೃಷ್ಣನ ಮೂರ್ತಿ ಪ್ರತಿಷ್ಠಾಪಿಸುವ ಬೆದರಿಕೆ; ಮಥುರಾದಲ್ಲಿ ಭಾರೀ ಭದ್ರತೆ

Published On - 1:02 pm, Mon, 6 December 21