Parliament Winter Session ನಾಗಾಲ್ಯಾಂಡ್ ಹತ್ಯೆ ಇತಿಹಾಸದಲ್ಲಿ ಕರಾಳ ದಿನ, ಅಮಿತ್ ಶಾ ಉತ್ತರಿಸಬೇಕು ಎಂದು ಒತ್ತಾಯಿಸಿದ ಕಾಂಗ್ರೆಸ್

| Updated By: ರಶ್ಮಿ ಕಲ್ಲಕಟ್ಟ

Updated on: Dec 06, 2021 | 2:09 PM

Nagaland Firing ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಂಸತ್ತಿನ ಉಭಯ ಸದನಗಳಲ್ಲಿ ನಾಗಾಲ್ಯಾಂಡ್ ಗುಂಡಿನ ದಾಳಿಯ ಬಗ್ಗೆ ಹೇಳಿಕೆ ನೀಡುವ ನಿರೀಕ್ಷೆಯಿದೆ. ಇಂದಿನ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಶಾ ಮತ್ತು ಹಿರಿಯ ಸಚಿವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Parliament Winter Session ನಾಗಾಲ್ಯಾಂಡ್ ಹತ್ಯೆ ಇತಿಹಾಸದಲ್ಲಿ ಕರಾಳ ದಿನ, ಅಮಿತ್ ಶಾ ಉತ್ತರಿಸಬೇಕು ಎಂದು ಒತ್ತಾಯಿಸಿದ ಕಾಂಗ್ರೆಸ್
ಸಂಸತ್ ಭವನ
Follow us on

ದೆಹಲಿ: ಸಂಸತ್​​ನಲ್ಲಿ ಚಳಿಗಾಲದ ಅಧಿವೇಶನ (Parliament Winter Session) ನಡೆಯತ್ತಿದ್ದು ಸೋಮವಾರ ಲೋಕಸಭೆಯಲ್ಲಿ (Lok sabha) ನಾಗಾಲ್ಯಾಂಡ್ ನಾಗರಿಕ ಹತ್ಯೆಗಳ (Nagaland Killing) ಕುರಿತು ಮಾತನಾಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ (Gaurav Gogoi), ಈ ಘಟನೆ ರಾಜ್ಯದ ಇತಿಹಾಸದಲ್ಲಿ “ಕರಾಳ ದಿನ” ಎಂದು ಹೇಳಿದ್ದಾರೆ. ಈ ಘಟನೆಗಳಿಗೆ ಗುಪ್ತಚರ ವೈಫಲ್ಯವೇ  ಕಾರಣ ಎಂದು ಅವರು ದೂಷಿಸಿದ್ದಾರೆ. ನಿರಾಯುಧ ನಾಗರಿಕರ ಗುಂಪನ್ನು ಹಾರ್ಡ್‌ಕೋರ್ ಉಗ್ರಗಾಮಿಗಳಿಂದ ಹೇಗೆ ಪ್ರತ್ಯೇಕಿಸಲಾಗಿಲ್ಲ ಎಂಬುದು ಪ್ರತಿಯೊಬ್ಬರ ಮನಸ್ಸಿನಲ್ಲಿರುವ ಪ್ರಶ್ನೆ” ಎಂದು ಅವರು ಹೇಳಿದರು. ಘಟನೆಯ ಕುರಿತು ಹೇಳಿಕೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮತ್ತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಅವರಿಗೆ ಗೊಗೊಯ್ ಮನವಿ ಮಾಡಿದದ್ದು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. 12 ಸಂಸದರ ಅಮಾನತಿಗೆ ಪ್ರತಿಪಕ್ಷಗಳ ಸದಸ್ಯರು ಸದನದಲ್ಲಿ ಧರಣಿ ಮುಂದುವರಿಸಿದ್ದರಿಂದ ರಾಜ್ಯಸಭೆಯನ್ನು ಸೋಮವಾರ ಎರಡನೇ ಬಾರಿಗೆ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಆಗಸ್ಟ್‌ನಲ್ಲಿ ನಡೆದ ಹಿಂದಿನ ಅಧಿವೇಶನದಲ್ಲಿ “ಅಶಿಸ್ತಿನ” ವರ್ತನೆಗಾಗಿ ಅವರನ್ನು ಸಂಸತ್ ನ ಚಳಿಗಾಲದ ಅಧಿವೇಶನ ಆರಂಭವಾದ ದಿನ ಅಂದರೆ ಕಳೆದ ಸೋಮವಾರ ರಾಜ್ಯಸಭೆಯಿಂದ ಸಂಸದರನ್ನು ಅಮಾನತುಗೊಳಿಸಲಾಯಿತು. ಅವರ ಅಮಾನತು ಮೇಲ್ಮನೆಯ “ಪ್ರಜಾಸತ್ತಾತ್ಮಕವಲ್ಲದ ಮತ್ತು ಎಲ್ಲಾ ಕಾರ್ಯವಿಧಾನದ ನಿಯಮಗಳನ್ನು ಉಲ್ಲಂಘಿಸಿದೆ” ಎಂದು ವಿರೋಧ ಪಕ್ಷ ಹೇಳಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಂಸತ್ತಿನ ಉಭಯ ಸದನಗಳಲ್ಲಿ ನಾಗಾಲ್ಯಾಂಡ್ ಗುಂಡಿನ ದಾಳಿಯ ಬಗ್ಗೆ ಹೇಳಿಕೆ ನೀಡುವ ನಿರೀಕ್ಷೆಯಿದೆ. ಇಂದಿನ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಶಾ ಮತ್ತು ಹಿರಿಯ ಸಚಿವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆಯಲ್ಲಿ ಆರ್‌ಜೆಡಿ ನಾಯಕ ಮನೋಜ್ ಝಾ ಮತ್ತು ಟಿಎಂಸಿ ಸಂಸದ ಸುಖೇಂದು ಶೇಖರ್ ರಾಯ್ ಅವರು ನಾಗಾಲ್ಯಾಂಡ್ ಹತ್ಯೆಗೆ ಸಂಬಂಧಿಸಿದಂತೆ ತಾತ್ಕಾಲಿಕ ತಡೆ ನೋಟಿಸ್ ನೀಡಿದರು. ಎಂಎಸ್‌ಪಿ ವಿಚಾರವಾಗಿ ಲೋಕಸಭೆಯಲ್ಲಿ ಟಿಆರ್‌ಎಸ್ ಸಂಸದ ನಾಮ ನಾಗೇಶ್ವರ ರಾವ್ ಅವರು ಮುಂದೂಡಿಕೆ ಸೂಚನೆ ನೀಡಿದರು.

ಯಾವ ಮಸೂದೆ ಮಂಡನೆ? 
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ರಾಜ್ಯಸಭೆಯಲ್ಲಿ ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ (ನಿಯಂತ್ರಣ) ಮಸೂದೆ, 2021 ಮತ್ತು ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ, 2020 ಅನ್ನು ಮಂಡಿಸಲಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನುದಾನದ ಬೇಡಿಕೆಗಳ (2021-22) ಹಣಕಾಸು ಕುರಿತ ಇಲಾಖೆ-ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯ 6 ನೇ ವರದಿಯನ್ನು ಅನುಷ್ಠಾನಗೊಳಿಸುವ ಸ್ಥಿತಿಯನ್ನು ವಿವರಿಸಲಿದ್ದಾರೆ.

ಲೋಕಸಭೆಯಲ್ಲಿಆರೋಗ್ಯ ಸಚಿವರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ತಿದ್ದುಪಡಿ) ಮಸೂದೆ, 2021 ಅನ್ನು ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಮಂಡಿಸುತ್ತಾರೆ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ವೇತನ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ, 2021 ಅನ್ನು ಪರಿಚಯಿಸಲು ನಿರ್ಧರಿಸಿದ್ದಾರೆ.

ನಾಗಾಲ್ಯಾಂಡ್ ಹತ್ಯೆ: ಕೇಂದ್ರ ನಮಗೆ ಸತ್ಯ, ನ್ಯಾಯ ನೀಡಬೇಕು ಎಂದು ಒತ್ತಾಯಿಸಿದ ಗೌರವ್ ಗೊಗೊಯ್
ನಾಗಾಲ್ಯಾಂಡ್ ಘಟನೆಯ ನಂತರ ಐಎನ್‌ಸಿ ಸಂಸದ ಗೌರವ್ ಗೊಗೊಯ್ ಸೋಮವಾರ ಶಾಂತಿಗಾಗಿ ಮನವಿ ಮಾಡಿದರು. ಗೃಹ ಸಚಿವ ಅಮಿತ್ ಶಾ ಮತ್ತು ಭಾರತ ಸರ್ಕಾರವು ‘ನಮಗೆ ಸತ್ಯ ಮತ್ತು ನ್ಯಾಯವನ್ನು ನೀಡಬೇಕು’. ‘ಸಮಾಜದ ಎಲ್ಲಾ ವರ್ಗಗಳಿಂದ ನಾನು ಶಾಂತಿಗಾಗಿ ಮನವಿ ಮಾಡುತ್ತೇನೆ. ಕೇಂದ್ರ ಗೃಹ ಸಚಿವರು ಮತ್ತು ಭಾರತ ಸರ್ಕಾರ ನಮಗೆ ಸತ್ಯವನ್ನು ನೀಡಿ ಮತ್ತು ನಮಗೆ ನ್ಯಾಯವನ್ನು ನೀಡಿದರೆ ಮಾತ್ರ ಇದು ಸಂಭವಿಸುತ್ತದೆ’ ಎಂದು ಅವರು ಹೇಳಿದರು.

12 ಸಂಸದರ ಅಮಾನತು ಖಂಡಿಸಿ ಸಂಸತ್ ಹೊರಗಡೆ ವಿಪಕ್ಷ ಸಂಸದರ ಪ್ರತಿಭಟನೆ
ಪ್ರತಿಪಕ್ಷಗಳ 12 ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಸೋಮವಾರ ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿದವು. ತುಘಲಕ್ ಶಾಹಿ ಬಂದ್ ಕರೋ, ಹಿಟ್ಲರ್ ಶಾಹಿ ನಹೀ ಚಲೇಗಿ, ಮೋದಿ ಶಾಹಿ ನಹೀ ಚಲೇಗಿ ಎಂಬ ಘೋಷಣೆಗಳನ್ನು ವಿಪಕ್ಷ ಸಂಸದರು ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ನಾಗಾಲ್ಯಾಂಡ್ ಹತ್ಯೆ ಏಕೆ ನಡೆದಿದೆ ಎಂದು ಶಾ ಉತ್ತರಿಸಬೇಕು: ಮಲ್ಲಿಕಾರ್ಜುನ ಖರ್ಗೆ
ನಾಗಾಲ್ಯಾಂಡ್ ಹತ್ಯೆಗಳ ಬಗ್ಗೆ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಎಂದು ವಿರೋಧ ಪಕ್ಷಗಳು ನಿರೀಕ್ಷಿಸುತ್ತಿವೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ. ಗೃಹ ಸಚಿವರು ಉಭಯ ಸದನಗಳ ಮುಂದೆ ತಮ್ಮ ಹೇಳಿಕೆಯನ್ನು ನೀಡಬೇಕು ಮತ್ತು ಘಟನೆಯ ಬಗ್ಗೆ ಅವರ ವಿವರವಾದ ಅವರ ನಿಲುವು ವ್ಯಕ್ತಪಡಿಸಬೇಕು ಎಂದು ಎಂದು ನಾವು ಒತ್ತಾಯಿಸುತ್ತೇವೆ, ನಾವು ಅದನ್ನು ನಿರೀಕ್ಷಿಸುತ್ತೇವೆ. ಅದೊಂದು ಅತ್ಯಂತ ಸೂಕ್ಷ್ಮ ಘಟನೆ. ಹೀಗಾಗಬಾರದಿತ್ತು. ಯಾಕೆ ಹೀಗಾಯಿತು ಎಂದು ಅವರೇ ಉತ್ತರಿಸಬೇಕು,” ಎಂದು ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ:Nagaland Firing: ನಾಗಾಲ್ಯಾಂಡ್​ ಫೈರಿಂಗ್​ ಪ್ರಕರಣದ ಸಾವಿನ ಸಂಖ್ಯೆ 15ಕ್ಕೆ ಏರಿಕೆ; ಇಂದು ಘಟನಾಸ್ಥಳಕ್ಕೆ ಭೇಟಿಕೊಡಲಿದೆ ಟಿಎಂಸಿ ನಿಯೋಗ  

Published On - 1:46 pm, Mon, 6 December 21