ಆಂಧ್ರಪ್ರದೇಶದ ಔಷಧ ತಯಾರಿಕಾ ಘಟಕದಲ್ಲಿ ಸ್ಫೋಟ; 3 ಜನ ಸಾವು

| Updated By: ಸುಷ್ಮಾ ಚಕ್ರೆ

Updated on: Nov 16, 2022 | 2:09 PM

ಗೌರಿಪಟ್ಟಣಂನಲ್ಲಿರುವ ವಿಷನ್ ಡ್ರಗ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸಿಬ್ಬಂದಿ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಂಧ್ರಪ್ರದೇಶದ ಔಷಧ ತಯಾರಿಕಾ ಘಟಕದಲ್ಲಿ ಸ್ಫೋಟ; 3 ಜನ ಸಾವು
ಡ್ರಗ್ಸ್ ತಯಾರಿಕಾ ಘಟಕದಲ್ಲಿ ಸ್ಫೋಟ
Follow us on

ಅಮರಾವತಿ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗೌರಿಪಟ್ಟಣಂನಲ್ಲಿ ಡ್ರಗ್ಸ್ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ, ಮೂವರು ಸಾವನ್ನಪ್ಪಿದ್ದಾರೆ. ಜಿಲ್ಲಾಧಿಕಾರಿ ಕೆ. ಮಾಧವಿ ಲತಾ ಅವರು ಸಂತ್ರಸ್ತರ ಸಂಬಂಧಿಕರಿಗೆ ತಲಾ 20 ಲಕ್ಷ ರೂ. ಧನಸಹಾಯ ಘೋಷಿಸಿದ್ದಾರೆ. ನಿರ್ವಹಣಾ ಲೋಪವೇ ಈ ಸ್ಫೋಟಕ್ಕೆ ಕಾರಣ ಎನ್ನಲಾಗಿದೆ. ಈ ಪ್ರಕರಣದ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಗೌರಿಪಟ್ಟಣಂನಲ್ಲಿರುವ ವಿಷನ್ ಡ್ರಗ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸಿಬ್ಬಂದಿ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Istanbul Blast: ಟರ್ಕಿಯ ಇಸ್ತಾಂಬುಲ್​ನಲ್ಲಿ ಮಹಿಳಾ ಉಗ್ರರಿಂದ ಬಾಂಬ್ ಸ್ಫೋಟ; 6 ಜನ ಸಾವು, 81 ಮಂದಿಗೆ ಗಾಯ

“ನೀರು ಮತ್ತು ರಾಸಾಯನಿಕಗಳನ್ನು ಮರುಬಳಕೆ ಮಾಡುವ ಪೈಪ್‌ಲೈನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದೆ. ಉಪ ವ್ಯವಸ್ಥಾಪಕರು, ಶಿಫ್ಟ್ ಇನ್‌ಚಾರ್ಜ್ ಮತ್ತು ಕೆಮಿಸ್ಟ್​ ಕೆಲಸದಲ್ಲಿದ್ದರು. ಹೆಚ್ಚಿನ ತಾಪಮಾನದಿಂದ ಉಂಟಾದ ಒತ್ತಡದಿಂದ ಪೈಪ್‌ಲೈನ್ ಸ್ಫೋಟಗೊಂಡಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸ್ಫೋಟದ ಪ್ರಭಾವದಿಂದ ಒಡೆದ ಗಾಜಿನ ಚೂರುಗಳು ಮತ್ತು ತಗಡಿನ ಹಾಳೆಗಳು ಹಾರಿ ಮೂವರಿಗೆ ಚುಚ್ಚಿದ್ದರಿಂದ ಅವರು ಸಾವನ್ನಪ್ಪಿದ್ದಾರೆ. ಈ ಘಟಕದಲ್ಲಿದ್ದ ಇತರ ಕಾರ್ಮಿಕರು ಮೂವರನ್ನು ಕೊವ್ವೂರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ