ಭುವನೇಶ್ವರ, ಜು.27: ಈ ಬಾರಿಯ ಮಳೆಯಿಂದ ಅನೇಕ ಬೆಳೆಗಳು ನಾಶವಾಗಿದೆ, ಇನ್ನೊಂದು ಕಡೆ ಹಣ್ಣು – ತರಕಾರಿಗಳ ಬೆಲೆ ಏರಿಕೆಯಾಗುತ್ತಿರುವ ಬಿಸಿ, ಈ ಮಧ್ಯೆ ಒಡಿಶಾ ರೈತರೊಬ್ಬರು ತಮ್ಮ ತೋಟದಲ್ಲಿ ದುಬಾರಿ ಮಾವಿನ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಈ ಬಗ್ಗೆ ವರದಿ ಮಾಡಿದ ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಒಡಿಶಾದ ಕಲಹಂಡಿ ಜಿಲ್ಲೆಯ ಭೋಯ್ ಎಂಬ ರೈತ ತನ್ನ ತೋಟದಲ್ಲಿ ಜಪಾನ್‌ನ ಮಿಯಾಜಾಕಿ ತಳಿಯ ಮಾವಿನಹಣ್ಣುಗಳನ್ನು (Miyazaki Mangoes) ಬೆಳೆಯುತ್ತಿದ್ದಾರೆ.
ಈ ಮಾವಿನ ಹಣ್ಣಿನ ಇನ್ನೊಂದು ವಿಶೇಷವೆಂದರೆ, ವಿಶಿಷ್ಟ ರುಚಿ ಮತ್ತು ಅದರ ಮೌಲ್ಯಕ್ಕಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ₹ 2.5 ಲಕ್ಷದಿಂದ 3 ಲಕ್ಷದವರೆಗೆ ಇರುತ್ತದೆ. ಭೋಯಿ ಅವರು ತಮ್ಮ ಜಮೀನಿನಲ್ಲಿ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಈ ‘ಮಿಯಾಜಾಕಿ’ ತಳಿ ಮಾವುವನ್ನು ರಾಜ್ಯ ತೋಟಗಾರಿಕಾ ಇಲಾಖೆ ಮೂಲಕ ಬೀಜವನ್ನು ಪಡೆದ ನಂತರ ಬೆಳೆದಿದ್ದಾರೆ.
ಮಿಯಾಜಾಕಿ ಪ್ರಭೇದವು ಮೂಲತಃ ಜಪಾನಿನ ತಳಿಯಾಗಿದೆ. ಅದರ ವಿಶಿಷ್ಟ ಸುವಾಸನೆ ಮತ್ತು ಔಷಧೀಯ ಮೌಲ್ಯಕ್ಕಾಗಿ ಇದು ವಿದೇಶಗಳಲ್ಲಿ ಭಾರಿ ಬೇಡಿಕೆಯನ್ನು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜಪಾನಿಯರ ಪ್ರಕಾರ, ವಿಶ್ವದ ಅತ್ಯಂತ ದುಬಾರಿ ಮಾವಿನ ಮೂಲ ಹೆಸರು “ತೈಯೊ ನೋ ತಮಾಗೊ” ಅಥವಾ ಕೆಂಪು ಸೂರ್ಯ ಎಂದು ಕರೆಯುತ್ತಾರೆ. ಜಪಾನ್‌ನ ಮಿಯಾಜಾಕಿ ಪ್ರಿಫೆಕ್ಚರ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನೂ ಇದನ್ನು ಜಗತ್ತಿನದ್ಯಾಂತ “ಮಿಯಾಜಾಕಿ” ಎಂದು ಕರೆಯುತ್ತಾರೆ.
ಇದನ್ನೂ ಓದಿ: ವಿಶ್ವದಲ್ಲಿ ಅತಿ ದುಬಾರಿ ಮಾವಿನ ಹಣ್ಣು ಯಾವುದು ಗೊತ್ತೇ? ಹಣ್ಣಿನ ಬೆಲೆ ಕೇಳಿದ್ರೆ ಹುಬ್ಬೇರುವುದು ಗ್ಯಾರೆಂಟಿ!
ಪ್ರತಿ ಏಪ್ರಿಲ್‌ನಲ್ಲಿ, ಮಿಯಾಜಾಕಿ ಮಾವುವನ್ನು ಕೇಂದ್ರ ಸಗಟು ಮಾರುಕಟ್ಟೆಯಲ್ಲಿ ಹರಾಜು ಮಾಡಲಾಗುತ್ತದೆ ಇತ್ತೀಚೆಗೆ, ರಾಯ್‌ಪುರ ಮತ್ತು ಸಿಲಿಗುರಿಯಲ್ಲಿ ನಡೆದ ಮಾವು ಉತ್ಸವದಲ್ಲಿ ಮಿಯಾಜಾಕಿ ತಳಿಯನ್ನು ಪ್ರದರ್ಶಿಸಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ