Maternity Leave: ಈ ರಾಜ್ಯದಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ಸಿಗಲಿದೆ 1 ವರ್ಷದ ಹೆರಿಗೆ ರಜೆ

ಸರ್ಕಾರವು ತಮ್ಮ ಮಹಿಳಾ ಉದ್ಯೋಗಿಗಳಿಗೆ 1 ವರ್ಷ ಹೆರಿಗೆ ರಜೆ ಹಾಗೂ ಪುರುಷರಿಗೆ ಒಂದು ತಿಂಗಳ ಪೆಟರ್ನಿಟಿ ರಜೆಯನ್ನು ನೀಡಲಾಗುವುದು ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಘೋಷಿಸಿದ್ದಾರೆ.

Maternity Leave: ಈ ರಾಜ್ಯದಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ಸಿಗಲಿದೆ 1 ವರ್ಷದ ಹೆರಿಗೆ ರಜೆ
ಗರ್ಭಿಣಿImage Credit source: Telegraph India
Follow us
ನಯನಾ ರಾಜೀವ್
|

Updated on: Jul 27, 2023 | 10:26 AM

ಸರ್ಕಾರವು ತಮ್ಮ ಮಹಿಳಾ ಉದ್ಯೋಗಿಗಳಿಗೆ 1 ವರ್ಷದ ಹೆರಿಗೆ ರಜೆ ಹಾಗೂ ಪುರುಷರಿಗೆ ಒಂದು ತಿಂಗಳ ಪೆಟರ್ನಿಟಿ ರಜೆಯನ್ನು ನೀಡಲಾಗುವುದು ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಘೋಷಿಸಿದ್ದಾರೆ. ಸಿಕ್ಕಿಂ ರಾಜ್ಯ ನಾಗರಿಕ ಸೇವಾ ಅಧಿಕಾರಿಗಳ ಸಂಘದ (ಎಸ್‌ಎಸ್‌ಸಿಎಸ್‌ಒಎ) ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಯೋಜನವನ್ನು ಒದಗಿಸಲು ಸೇವಾ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗುವುದು ಎಂದು ಹೇಳಿದರು.

ಈ ಪ್ರಯೋಜನವು ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಮತ್ತು ಕುಟುಂಬವನ್ನು ಉತ್ತಮವಾಗಿ ನೋಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಅವರು ಹೇಳಿದರು. ಹೆರಿಗೆ ಪ್ರಯೋಜನ ಕಾಯಿದೆ 1961 ರ ಪ್ರಕಾರ, ಕೆಲಸ ಮಾಡುವ ಮಹಿಳೆಯು 6 ತಿಂಗಳು ಅಥವಾ 26 ವಾರಗಳ ವೇತನ ಸಹಿತ ಹೆರಿಗೆ ರಜೆಗೆ ಅರ್ಹಳಾಗಿದ್ದಾಳೆ.

ಮತ್ತಷ್ಟು ಓದಿ: ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಲು ವಿತರಣೆ ಸ್ಥಗಿತ: ಕೆಎಂಎಫ್​ ಜೊತೆ ಮಾತುಕತೆ- ಲಕ್ಷ್ಮೀ ಹೆಬ್ಬಾಳ್ಕರ್

ಸಿಕ್ಕಿಂ ರಾಜ್ಯವು ಭಾರತದಲ್ಲಿ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ, ಸುಮಾರು 6.32 ಲಕ್ಷ ಜನರಿದ್ದಾರೆ. ಸಿಕ್ಕಿಂ ಮತ್ತು ಅದರ ಜನರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿರುವ ಅಧಿಕಾರಿಗಳು ರಾಜ್ಯದ ಆಡಳಿತದ ಬೆನ್ನೆಲುಬು ಎಂದು ತಮಾಂಗ್ ಹೇಳಿದರು.

ನಾಗರಿಕ ಸೇವಾ ಅಧಿಕಾರಿಗಳಿಗೆ ಬಡ್ತಿ ಪ್ರಕ್ರಿಯೆ ಚುರುಕುಗೊಳಿಸುವತ್ತ ಗಮನ ಹರಿಸಲಾಗಿದ್ದು, ಬಡ್ತಿ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು. ಅವರು ಎಲ್ಲಾ ಹೊಸ IAS ಮತ್ತು SCS (ಸಿಕ್ಕಿಂ ನಾಗರಿಕ ಸೇವೆಗಳು) ಅಧಿಕಾರಿಗಳನ್ನು ಅಭಿನಂದಿಸಿದರು ಮತ್ತು ಅವರು ಯಶಸ್ವಿ ವೃತ್ತಿಜೀವನಕ್ಕೆ ಶುಭ ಹಾರೈಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ