ಹೆರಿಗೆ ರಜೆಯಲ್ಲಿದ್ದ ಉದ್ಯೋಗಿಯನ್ನು ವಜಾಗೊಳಿಸಿದ ‘ಮೆಟಾ’

Meta Layoffs : ‘ಬೆಳಗ್ಗೆ 3ಕ್ಕೆ ಎಚ್ಚರವಾಯಿತು. 4ಕ್ಕೆ ನನ್ನ 3 ತಿಂಗಳ ಮಗುವಿಗೆ ಹಾಲು ಕುಡಿಸಿದೆ. ವಜಾಗೊಂಡ 11,000 ಉದ್ಯೋಗಿಗಳ ಪೈಕಿ ನಾನೂ ಒಬ್ಬಳಿರಬಹುದೆಂಬ ನಿರೀಕ್ಷೆಯಲ್ಲಿಯೇ ಆಫೀಸಿನ ಮೇಲ್​ ತೆರೆದು ನೋಡಿದೆ...

ಹೆರಿಗೆ ರಜೆಯಲ್ಲಿದ್ದ ಉದ್ಯೋಗಿಯನ್ನು ವಜಾಗೊಳಿಸಿದ ‘ಮೆಟಾ’
Meta Fires Employee During Maternity Leave
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 10, 2022 | 7:31 PM

Viral Video : ಮೆಟಾ ಕಂಪೆನಿಯ ಸಿಇಒ ಜುಕರ್​​ಬರ್ಗ್ ಉದ್ಯೋಗಿಗಳನ್ನು ವಜಾಗೊಳಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ. ಈತನಕ 11,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಈ ಮಧ್ಯೆ ಅನೇಕ ಉದ್ಯೋಗಿಗಳು ತಮ್ಮ ತಮ್ಮ ಅಭಿಪ್ರಾಯ, ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೆರಿಗೆ ರಜೆಯಲ್ಲಿದ್ದ ಫೇಸ್​ಬುಕ್​ನ ಕಮ್ಯೂನಿಕೇಷನ್ ಮ್ಯಾನೇಜರ್ ಅನ್ನೆಕಾ ಪಟೇಲ್​ ವಜಾಗೊಳಿಸಲಾದ ಉದ್ಯೋಗಿಗಳ ಪೈಕಿ ಒಬ್ಬರು. ತಮ್ಮ ಮಗುವನ್ನು ಎತ್ತಿಕೊಂಡ ಫೋಟೋ ಜೊತೆ ವಿವಿರವಾದ ಪೋಸ್ಟ್​ ಒಂದನ್ನು ಬರೆದು ಲಿಂಕ್ಡ್​ಇನ್​ ಗೆ ಹಾಕಿದ್ದಾರೆ.

‘ಈವತ್ತು ಬೆಳಗ್ಗೆ ಮೂರು ಗಂಟೆಗೆ ಎಚ್ಚರವಾಯಿತು. ನಾಲ್ಕು ಗಂಟೆಗೆ ನನ್ನ ಮೂರು ತಿಂಗಳ ಮಗು ಎಮಿಲಿಯಾಗೆ ಹಾಲು ಕುಡಿಸಿದೆ. ವಜಾಗೊಂಡ 11,000 ಉದ್ಯೋಗಿಗಳ ಪೈಕಿ ನಾನೂ ಒಬ್ಬಳಿರಬಹುದೆಂಬ ನಿರೀಕ್ಷೆಯಲ್ಲಿಯೇ ಆಫೀಸಿನ ಮೇಲ್​ ತೆರೆದು ನೋಡಿದೆ. ನನಗೂ ಮೇಲ್​ ಬಂದಿತ್ತು. ಸಹೋದ್ಯೋಗಿಗಳೊಂದಿಗೆ ವಿಚಾರಿಸಿದಾಗ ಅದು ಆಟೋಮ್ಯಾಟಿಕ್ ಆಗಿ ಬಂದ ಮೇಲ್​ ಎಂದರು. ಆಗ ಸಮಯ ನಾಲ್ಕೂವರೆ. ಮುಂದಿನ ಬದುಕು ಹೇಗೆ ಎಂದು ಯೋಚಿಸುತ್ತ ಮಗುವಿನೊಂದಿಗೆ ಮಲಗಿದಾಗ ನಾಲ್ಕೂ ಮುಕ್ಕಾಲು. ಮತ್ತೆ ಮಲಗಬೇಕೋ ಬೇಡವೋ ಎಂಬ ಸಂದಿಗ್ಧ ಕಾಡಿತು. 5.35ಕ್ಕೆ ಮತ್ತೊಂದು ಮೇಲ್​ ಬಂದಿತು. ವಜಾಗೊಳಿಸಿದ ಪಟ್ಟಿಯಲ್ಲಿ ನನ್ನ ಹೆಸರನ್ನೂ ನೋಡಿ ಆಘಾತವಾಯಿತು’ ಎಂದಿದ್ದಾರೆ ಅನ್ನೇಕಾ.

‘ಈ ತನಕ ಈ ಕಂಪೆಯನಿ ಇತಿಹಾಸದಲ್ಲಿ ಇಂಥ ಕಷ್ಟಕರವಾದ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. ಪ್ರತಿಭಾವಂತ ಉದ್ಯೋಗಿಗಗಳಲ್ಲಿ 11,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದು ನೋವು ತರುತ್ತಿದೆ. ಇದಕ್ಕಾಗಿ ವಿಷಾದಿಸುತ್ತೇನೆ’ ಎಂದಿದ್ದಾರೆ ಜುಕರ್ ಬರ್ಗ್​.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 7:31 pm, Thu, 10 November 22